Home ಜಿಲ್ಲೆ ಗುಗ್ಗರಹಟ್ಟಿ: ಶೀಲದ ಶಂಕೆ ಪತ್ನಿ ಮಾವನನ್ನು ಕೊಂದ ಕಿರಾತಕರು

ಗುಗ್ಗರಹಟ್ಟಿ: ಶೀಲದ ಶಂಕೆ ಪತ್ನಿ ಮಾವನನ್ನು ಕೊಂದ ಕಿರಾತಕರು

Oplus_16908288

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಜು.08: ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿ ಬಟ್ಟೆಗಳ ಇಸ್ತ್ರಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಕುಟುಂಬವೊಂದು ಶೀಲದ ಶಂಕೆಯಿಂದ ಹತ್ಯೆ ಪ್ರಕರಣದಿಂದಾಗಿ ಇಬ್ಬರು ಚಿಕ್ಕಮಕ್ಕಳು ಅನಾಥವಾಗುವಂತೆ ಮಾಡಿದೆ.

ನಿನ್ನೆ ಸಂಜೆ ನಾಗಲಕ್ಷ್ಮೀ (24) ಹಾಗೂ ಅವರ ತಂದೆ ಶ್ರೀನಿವಾಸ (48) ಅವರನ್ನು ಆರೋಪಿಗಳಾದ ತೇಜಾ (29) ಮತ್ತು ಆತನ ತಂದೆ ಗುರುಶಂಕರ್ (50) ಮಾರಾಕಾಸ್ತ್ರಗಳಿಂದ ಕೊಂದು ಕಲ್ಲುಗಳಿಂದ ಜಜ್ಜಿರುವ ಘಟನೆ ನಡೆದಿದೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

ತೇಜ ತನ್ನ ಪತ್ನಿ ನಾಗಲಕ್ಷ್ಮಿಯ ಅನೈತಿಕ ಸಂಬಂಧದ ಬಗ್ಗೆ ಶಂಕಿಸಿ ಪದೇ ಪದೇ ಜಗಳ ಆಡುತ್ತಿದ್ದ. ಅದಕ್ಕಾಗಿ ನಾಗಲಕ್ಷ್ಮಿಯ ತಂದೆ ಶ್ರೀನಿವಾಸ್ ಮತ್ತು ಆತನ ಹೆಂಡತಿ ಜಗಳ ಬಿಡಿಸಲು ಬಂದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೋಪಗೊಂಡ ತೇಜ ಮತ್ತು ಆತನ ತಂದೆ ಗುರುಶಂಕರ್ ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿದೆ.