
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.05: ವೀರಶೈವ ವಿದ್ಯಾವರ್ಧಕ ಸಂಘದ ಅಜೀವ ಸದಸ್ಯರು, ನಗರದ ಹೀರದ ಸೂಗಮ್ಮ ಶಾಲೆಯ ನಿವೃತ್ತ ಶಿಕ್ಷಕ, ಬಸವೇಶ್ವರ ನಗರದ ನಿವಾಸಿಗಳಾಗಿದ್ದ ಎಂ.ಶರಭಯ್ಯ (88) ನಿನ್ನೆ ಸಂಜೆ ನಿಧನರಾಗಿದ್ದು ಅವರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ ಇಲ್ಲಿನ ವೀರಶೈವ ರುದ್ರಭೂಮಿಯಲ್ಲಿ ನಡೆಯಿತು.
ಅವರು ಪತ್ನಿ ಬಸಲಿಂಗಮ್ಮ, ವೀರಶೈವ ಲಿಂಗಾಯತ ಸಮಾಜದ ಸಂಚಾಲಕರಾದ ಎಂ.ಚಂದ್ರಮೌಳಿ ಮತ್ರು ಅಪಾರ ಬಂಧುಗಳನ್ನು ಅಗಲಿದ್ದಾರೆ.






















