
ಮುಂಬೈ,ಜು.20-ಯುನೈಟೆಡ್ ಸ್ಟೇಟ್ಸ್‍ನ ನ್ಯೂಯಾರ್ಕ್-ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ 2026ರ ರೋಮಾಂಚಕ ಫೈನಲ್ ಪಂದ್ಯದಲ್ಲಿ, ಅರ್ಜೆಂಟೀನಾ ವಿರುದ್ಧ 1-0 ಗೋಲುಗಳ ಅಂತರದಿಂದ ಸ್ಪೇನ್ ಐತಿಹಾಸಿಕ ಜಯ ಸಾಧಿಸಿದೆ. ಲಿಯೋನೆಲ್ ಮೆಸ್ಸಿ ಅವರ ಕೊನೆಯ ವಿಶ್ವಕಪ್ ಪಂದ್ಯ ಇದಾಗಿರಬಹುದು ಎಂಬ ಕಾರಣಕ್ಕೆ ಇಡೀ ಕ್ರೀಡಾಂಗಣ ಅರ್ಜೆಂಟೀನಾ ಪರವಾಗಿತ್ತು. ಆದರೆ, 106ನೇ ನಿಮಿಷದಲ್ಲಿ ಸ್ಪೇನ್‍ನ ಫೆರಾನ್ ಟೊರೆಸ್ ಬಾರಿಸಿದ ಮಾಂತ್ರಿಕ ಗೋಲು ಪಂದ್ಯದ ಚಿತ್ರಣವನ್ನೇ ಬದಲಿಸಿತು. ಪಂದ್ಯದ ನಂತರ ಭಾವುಕರಾದ ಮೆಸ್ಸಿಯನ್ನು ಸ್ಪೇನ್ ಆಟಗಾರರು ಸಮಾಧಾನಪಡಿಸಿ ಕ್ರೀಡಾಸ್ಫೂರ್ತಿ ಮೆರೆದರು.
ಈ ಮಹಾನ್ ಗೆಲುವನ್ನು ಬಾಲಿವುಡ್ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸಿದ್ದಾರೆ:
ಕರೀನಾ ಕಪೂರ್ ಖಾನ್: ಲಿಯೋನೆಲ್ ಮೆಸ್ಸಿ ಅವರು ಸ್ಪೇನ್‍ನ ಉದಯೋನ್ಮುಖ ತಾರೆ ಲ್ಯಾಮಿನ್ ಯಮಲ್ ಅವರನ್ನು ಅಪ್ಪಿಕೊಳ್ಳುತ್ತಿರುವ ಭಾವುಕ ಚಿತ್ರವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡ ಕರೀನಾ, ಹೃದಯ, ಮಳೆಬಿಲ್ಲು, ನಕ್ಷತ್ರ ಮತ್ತು ‘ಉಔಂಖಿ’ (ಉಡಿeಚಿಣesಣ ಔಜಿ ಂಟಟ ಖಿime) ಎಮೋಜಿಗಳನ್ನು ಬಳಸಿ ಒಲವು ವ್ಯಕ್ತಪಡಿಸಿದ್ದಾರೆ.
ಆದರ್ ಜೈನ್: ಕ್ರೀಡಾಂಗಣದಲ್ಲೇ ನೇರ ಪಂದ್ಯ ವೀಕ್ಷಿಸಿದ ಕರೀನಾ ಸೋದರಸಂಬಂಧಿ ಆದರ್ ಜೈನ್, “ಅಸಂಖ್ಯಾತ ಅರ್ಜೆಂಟೀನಾ ಅಭಿಮಾನಿಗಳ ಮಧ್ಯೆ ಸ್ಪೇನ್ ಜೆರ್ಸಿ ಧರಿಸಿದ ಏಕೈಕ ವ್ಯಕ್ತಿ ನಾನಾಗಿದ್ದೆ” ಎಂದು ಬರೆದುಕೊಂಡಿದ್ದಾರೆ. ತಾವು ಇಂದಿಗೂ ಕ್ರಿಸ್ಟಿಯಾನೊ ರೊನಾಲ್ಡೊ ಅಭಿಮಾನಿ ಎಂದಿರುವ ಅವರು, “ಎಂತಹ ಆಟ, ಎಂತಹ ಅನುಭವ! ನಾನು ಬೆಳೆದ ನ್ಯೂಯಾರ್ಕ್ ನಗರದಲ್ಲಿ ಈ ವಿಶ್ವಕಪ್ ಫೈನಲ್ ವೀಕ್ಷಿಸಿದ್ದು ಅದ್ಭುತವಾಗಿತ್ತು. ವಾಮೋಸ್ ಸ್ಪೇನ್!” ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಹಾಲಿವುಡ್ ಸೂಪರ್‍ಸ್ಟಾರ್ ಟಾಮ್ ಕ್ರೂಸ್ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಅದ್ಭುತ ಸಮಾರೋಪ ಸಮಾರಂಭ ಮತ್ತು ಪಂದ್ಯವು ಫುಟ್‍ಬಾಲ್ ಇತಿಹಾಸದಲ್ಲಿ ಸುದೀರ್ಘ ಕಾಲ ನೆನಪಿನಲ್ಲಿ ಉಳಿಯುವಂತದ್ದಾಗಿದೆ.
































