Home ಸಿನೆಮಾ “ರುದ್ರ ಕಾಲ” ಟೈಟಲ್ ಬಿಡುಗಡೆ ಮಾಡಿದ ನಟಿ ಸಮಂತ

“ರುದ್ರ ಕಾಲ” ಟೈಟಲ್ ಬಿಡುಗಡೆ ಮಾಡಿದ ನಟಿ ಸಮಂತ

ಹೊಸ ಅವತಾರದಲ್ಲಿ ದಿಗಂತ್

ನಟ ದಿಗಂತ್ ಅಭಿನಯದ ಹೊಸ ಸಿನಿಮಾ “ರುದ್ರ ಕಾಲ” ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಸ್ಟಾರ್ ಹೀರೋಯಿನ್ ಸಮಂತ ಟೈಟಲ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ.

ನಿರ್ದೇಶಕ ಗೋಪಿ ಹೇಳಿದ ಕಥೆ ಕೇಳುತ್ತಿದ್ದಂತೆಯೇ ಈ ಪ್ರಾಜೆಕ್ಟ್‌ಗೆ ಒಪ್ಪಿಕೊಂಡೆ ಎಂದು ದಿಗಂತ್ ತಿಳಿಸಿದ್ದಾರೆ. ಟೈಟಲ್ ಸಮಂತ ಅವರಿಂದ ಬಿಡುಗಡೆಯಾಗಿರುವುದು ವಿಶೇಷ ಸಂತೋಷ ನೀಡಿದೆ ಎಂದು ಅವರು ಹೇಳಿದರು. ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದರು.

ನಿರ್ದೇಶಕ ಗೋಪಿ ಮಾತನಾಡಿ, “ಇದು ನನ್ನ ನಾಲ್ಕನೇ ಸಿನಿಮಾ. ‘ರುದ್ರ ಕಾಲ’ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಒಂದೇ ಸಮಯದಲ್ಲಿ ಚಿತ್ರೀಕರಿಸಲಾಗುತ್ತದೆ. ಬೇಗನೆ ಚಿತ್ರೀಕರಣ ಮುಗಿಸಿ ತೆರೆಗೆ ತರುವ ಉದ್ದೇಶವಿದೆ” ಎಂದರು.

ನಿರ್ಮಾಪಕ ರಮೇಶ್ ನಾಯ್ಕ್, “ಗೋಪಿ ಅವರ ಕಥೆ ಹೊಸತನದಿಂದ ತುಂಬಿತ್ತು. ನಮ್ಮ ಬ್ಯಾನರ್‌ನಲ್ಲಿ ಇಂತಹ ಸಿನಿಮಾ ನಿರ್ಮಾಣವಾಗುತ್ತಿರುವುದು ಸಂತೋಷ. ಟೈಟಲ್ ಬಿಡುಗಡೆ ಮಾಡಿದ ಸಮಂತ ಹಾಗೂ ದಿಗಂತ್ ಅವರಿಗೆ ಧನ್ಯವಾದ” ಎಂದು ಹೇಳಿದರು.

ಈ ಚಿತ್ರದ ಮುಹೂರ್ತ ಇದೇ ತಿಂಗಳ 22ರಂದು ನಡೆಯಲಿದೆ. ರಮೇಶ್ ನಾಯ್ಕ್ ಕಥೆ ಬರೆದಿರುವ ಈ ಚಿತ್ರಕ್ಕೆ ಕ್ರಿಸ್ಟೋಫರ್ ಜೋಸೆಫ್ ಛಾಯಾಗ್ರಹಣ ಮಾಡುತ್ತಿದ್ದಾರೆ. ನವೀನ್ ಲೈನ್ ಪ್ರೊಡ್ಯೂಸರ್ ಆಗಿದ್ದು, ಶಿವರಾಜ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಮೇಶ್ ಕೆ ಪೂಜಾರಿ ಸಹ ನಿರ್ದೇಶಕರಾಗಿದ್ದಾರೆ.