
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.03: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿ ಲಾವಣ್ಯ ಅವರು ಚಿಕಿತ್ಸೆ ಫಲಕಾ ರಿಯಾಗದೇ ನಿನ್ನೆ ನಿಧನರಾಗಿದ್ದಾರೆ. ಇವರು ಈ ಮೊದಲು ಹಂಪಿ ಡಿವೈಎಸ್ಪಿಯಾಗಿ, ಬಳ್ಳಾರಿ ಜಿಲ್ಲಾ ಎಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು.
ಸಧ್ಯ ಬೆಸ್ಕಾಂನ ವಿಜಿಲೆನ್ಸ್ ಎಸ್ಪಿಯಾಗಿದ್ದ ಬಿ.ಎನ್. ಲಾವಣ್ಯ (39) ಅವರು ಚಿಂತಾಮಣಿಯ ದೊಡ್ಡಗಂಜೂರು ಗ್ರಾಮದವರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದ್ದಾರೆ. ಕರುಳಿನ (ಕೊಲೊನ್ ಕ್ಯಾನ್ಸರ್ನಿಂದ ಬಳಲುತ್ತಿದ್ದರು). 2010ರ ಬ್ಯಾಚ್ನ ಕೆಎಸ್ ಪಿಎಸ್ ಅಧಿಕಾರಿಯಾಗಿದ್ದರು. ಮಂಡ್ಯ, ಬಳ್ಳಾರಿ- ಹೆಚ್ಚುವರಿ ಪೊಲೀಸ್ ಅಧೀಕ್ಷರಾಗಿ, ಬೆಂಗಳೂ ರಿನಲ್ಲಿ ಇಂಟಲಿಜೆನ್ಸ್, ಡಿಸಿಆರ್ಇ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. 2023 ರಿಂದ ಬೆಸ್ಕಾಂ ಎಸ್ಪಿಯಾಗಿದ್ದರು. ಇವರಿಗೆ 10 ವರ್ಷದ ಪುತ್ರ, 3 ವರ್ಷದ ಪುತ್ರಿ ಇದ್ದಾರೆ.






















