Home ಜಿಲ್ಲೆ ತುಂಗಭದ್ರಾ ಜಲಾಶಯದಲ್ಲಿನ ಹೂಳು ತೆರವುಗೊಳಿಸಲು ಮನವಿ

ತುಂಗಭದ್ರಾ ಜಲಾಶಯದಲ್ಲಿನ ಹೂಳು ತೆರವುಗೊಳಿಸಲು ಮನವಿ

ಸಂಜೆವಾಣಿ ವಾರ್ತೆ

 ಬಳ್ಳಾರಿ, ಮೇ.03: ತುಂಗಭದ್ರಾ ಜಲಾಶಯದ ವೀಕ್ಷಣೆಗೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಇಂದು ಹಂಪಿ ವಿಶ್ವವಿದ್ಯಾಲಯದಲ್ಲಿ ಭೇಟಿ ಮಾಡಿದ ತುಂಗಭದ್ರಾ ರೈತ ಸಂಘದವರು ತ್ವರಿತಗತಿಯಲ್ಲಿ ತುಂಗಭದ್ರಾ ಜಲಾಶಯದ ಗೇಟುಗಳ ಅಳವಡಿಕೆಗೆ ಕ್ರಮ ಕೈಗೊಂಡಿದ್ದಕ್ಕೆ ಸಚಿವರಿಗೆ ಹಸಿರು ಶಾಲು ಹಾಕಿ ಗೌರವಿಸಲಾಯಿತು.

ನಂತರ ಮನವಿ ಸಲ್ಲಿಸಿ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ 33 ಟಿಎಂಸಿ ಹೂಳಿಗಾಗಿ ನವಿಲೇ ಜಲಾಶಯ ನಿರ್ಮಿಸಲು ಆಂಧ್ರ ,ತೆಲಂಗಾಣ ರಾಜ್ಯಗಳ ಅನುಮತಿಯು ಬೇಕು ಮತ್ತು ನವಿಲೇ ಜಲಾಶಯದ

ಹಿನ್ನಿರಿನಲ್ಲಿ ಮುಳುಗಡೆಯಾಗಲಿರುವ 9 ಹಳ್ಳಿಗಳ ಹಾಗೂ ಅವರ ಜಮೀನುಗಳ ಸ್ಥಳಾಂತರ ಮತ್ತು ಪರ್ಯಾಯ ವ್ಯವಸ್ಥೆಗೆ ಅನೇಕ ವರ್ಷಗಳೇ ಬೇಕಾಗಲಿದೆ.

 ಆದರೆ ಜಲಾಶಯದಲ್ಲಿ ತುಂಬಿರುವ ಹೂಳು ತೆರವುಗೊಳಿಸಲು ಯಾರ ಅನುಮತಿಯು ಬೇಕಿಲ್ಲ ಮತ್ತು ನಮಗೆ (ಮೈನಿಂಗ್ ಫಂಡ್) ಗಣಿಯ ಹಣವು ಇದೆ ಹಾಗೂ ಕಬ್ಬಿಣ ಕಾರ್ಖಾನೆಗಳಿಗೆ ಸಾಮಗ್ರಿಗಳ ಅನುಕೂಲ ಸಿಗಲಿದೆ. ಆದಕಾರಣ ದಯವಿಟ್ಟು ಜಲಾಶಯದ 33 ಟಿಎಂಸಿ ಹೂಳು ತೆರವು ಗೊಳಿಸಲು  ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ತಜ್ಞರ ಸಮಿತಿಯ ಸಭೆಯನ್ನು ಕರೆದು ತುಂಗಭದ್ರಾ ಜಲಾಶಯದ ಹೂಳೆತ್ತಲು ಮುಂದಾಗಬೇಕೆಂದು ವಿನಂತಿಸಿಕೊಳ್ಳಲಾಯಿತು ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ತಿಳಿಸಿದ್ದಾರೆ.