
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.03: ನಗರದ ಮೆಡಿಕಲ್ ಶಾಪ್ ಗಳಲ್ಲಿ ವೈದ್ಯರ ಸೂಚನೆ ಮೇರೆಗೆ ಮಾತ್ರ ಔಷಧಿ, ಮಾತ್ರೆ, ಇಂಜಕ್ಷನ್ ಗಳು ಮಾರಾಟವಾಗುತ್ತಿವೆಯಾ ಎಂಬುದನ್ನು ನಿನ್ನೆ ಡಿಸಿ ಕೆ.ನಾಗೇಂದ್ರ ಪ್ರಸಾದ್, ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ನಗರದ ಹಲವು ಮೆಡಿಕಲ್ ಸ್ಟೋರ್ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವಹಿವಾಟನ್ನು ಕಂಪ್ಯೂಟರ್, ರಿಜಿಸ್ಟರ್ ಬುಕ್ ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಅಂಗಡಿಗಳ ಮುಂದೆ ಕಡ್ಡಾಯ ಸೂಚನಾ ಫಲಕ ಅಳವಡಿಸಬೇಕು. ವೈದ್ಯರ ರಸೀದಿಯಿಲ್ಲದೇ ಮಾತ್ರೆ, ಔಷಧಿಗಳನ್ನ ನೀಡುವಂತಿಲ್ಲ. ನೀಡಿದರೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.
ಮೆಡಿಕಲ್ ಸ್ಟೋರ್ಗಳಲ್ಲಿನ ಔಷಧಿಗಳ ಸಂಗ್ರಹ, ಮಾರಾಟದ ಕುರಿತ ದಾಖಲೆಗಳು, ಬಿಲ್ಗಳ ಕುರಿತು ಈ ವೇಳೆ ಪರಿಶೀಲನೆ ನಡೆಸಲಾಗಿದೆ. ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಜಿಲ್ಲಾಡ್ರಗ್ಸ್ ಕಂಟ್ರೋಲರ್ ಡಾ.ಮಂಜುಳ, ಅಬಕಾರಿ ಇಲಾಖೆ ಎಸ್ಪಿ ಅನಿಲ್ ಕುಮಾರ್, ಡಿಎಚ್ಒ ಡಾ.ವೈ.ರಮೇಶ್ ಬಾಬು ಮೊದಲಾದವರು ಇದ್ದರು.






















