Home Uncategorized ಕಾರು ಪಲ್ಟಿ: ಪ್ರಯಾಣಿಕರು ಪವಾಡ ಸದೃಶ ಪಾರು

ಕಾರು ಪಲ್ಟಿ: ಪ್ರಯಾಣಿಕರು ಪವಾಡ ಸದೃಶ ಪಾರು

ಸಂಜೆವಾಣಿ ವಾರ್ತೆ,

ಮರಿಯಮ್ಮನಹಳ್ಳಿ, ಮಾ.09: ಪಟ್ಟಣಕ್ಕೆ ಸಮೀಪದ ಹಾರುವನಹಳ್ಳಿ ಬಳಿಯ ಡಾಬಾ ಬಳಿ ರಾ.ಹೆ.50ರಲ್ಲಿ ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಪವಾಡ ಸದೃಶ ಪಾರಾಗಿದ್ದಾರೆ.

ವಿಜಯದಾಸ್ ಕುಲಕರ್ಣಿಯವರು ತಮ್ಮ ಕುಟುಂಬದೊಂದಿಗೆ ಬೆಂಗಳೂರಿನಿಂದ ಕೊಪ್ಪಳದಲ್ಲಿ ಕೌಟುಂಬಿಕ ಕಾರ್ಯಕ್ರಮಕ್ಕೆ ಹಾಜಾರಾಗಲು ಹೊರಟಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಾರುವನಹಳ್ಳಿ ಬಳಿ ಹೊರಟಾಗ ವಾಹನವೊಂದು ಅಡ್ಡಾದಿಡ್ಡಿಯಾಗಿ ಬಂದಿದ್ದು ಅದನ್ನು ತಪ್ಪಿಸಲು ಬಲಕ್ಕೆ ಕಾರನ್ನು ತಿರಿಸಿಕೊಂಡಿದ್ದಾರೆ. ನಂತರ ವಾಹನ ಆಯಾತಪ್ಪಿ ರಸ್ತೆ ಕೆಳಗಡೆ ಇಳಿದಿದೆ ಎನ್ನಲಾಗಿದೆ. ನಂತರ ಕಾರನ್ನು ಬಲಕ್ಕೆ ತಿರುಗಿಸುವಾಗ ನಾಯಿಯೊಂದು ಅಡ್ಡಬಂದಿದ್ದು ಅದನ್ನು ತಪ್ಪಿಸಲು ಕಾರನ್ನು ಎಡಕ್ಕೆ ತಿರುಗಿಸುವಾಗ ಕಾರು ಆಯಾತಪ್ಪಿ ಪಲ್ಟಿಯಾಗಿ ರಸ್ತೆ ಬದಿಯ ಗುಂಡಿಗೆ ಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿಜಯದಾಸ್ ಅವರ ಪತ್ನಿ, ಎರಡು ಮಕ್ಕಳು ಪವಾಡ ಸದೃಶ ಪಾರಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಮರಿಯಮ್ಮನಹಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.