
ನವದೆಹಲಿ.ಮೇ.6- ದೇಶದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ದೇಶದ ರಾಜಕೀಯ ಭೂಪಟದಲ್ಲಿ ಬಿಜೆಪಿ ಹಾಗೂ ನೇತೃತ್ವದ ಎನ್ಡಿಎ ಪ್ರಾಬಲ್ಯ ಮತ್ತಷ್ಟು ಹೆಚ್ಚಾಗಿದೆ.
ಸಂಸತ್ತಿನ 543 ಸ್ಥಾನಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಥಾನ ಹೊಂದಿರುವ 278 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಆರು ಭಾರೀ ರಾಜ್ಯಗಳಲ್ಲಿ, ಬಿಜೆಪಿ ನೇತೃತ್ವದ ಆಡಳಿತ ಮೈತ್ರಿಕೂಟ ಐದು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಈ ರಾಜ್ಯಗಳಲ್ಲಿ 239 ಲೋಕಸಭೆ ಸದಸ್ಯರನ್ನು ಹೊಂದಿದೆ.
2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ತನ್ನ ಚೊಚ್ಚಲ ಬಹುಮತಕ್ಕೆ ತಲುಪಿದಾಗಿನಿಂದ, ಈ ರಾಜ್ಯಗಳಲ್ಲಿ ಬಿಜೆಪಿಯ ಸ್ಥಾನ ಈಗಿರುವಷ್ಟು ಪ್ರಬಲವಾಗಿರಲಿಲ್ಲ, ಅವುಗಳಲ್ಲಿ ಮೂರು ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಮುಖ್ಯಮಂತ್ರಿಗಳು ಇದ್ದರು, ಇದೀಗ ಪಶ್ವಿಮ ಬಂಗಾಳದಲ್ಲಿ ಕಮಲ ತನ್ನ ಹೊಸ ಮುಖ್ಯಮಂತ್ರಿ ನೋಡಲಿದೆ.
ಇದಕ್ಕೆ ವ್ಯತಿರಿಕ್ತವಾಗಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಈಗ ಸೋತಿರುವ ಇಂಡಿಯಾ ಒಕ್ಕೂಟ ಸಂಸತ್ತಿನ ಬಹುಮತಕ್ಕೆ ಪ್ರಮುಖವಾದ ಅಂಶವನ್ನು ಹೊಂದಿರುವ ಯುದ್ಧಭೂಮಿ ರಾಜ್ಯಗಳಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಕುಸಿತ ಕಂಡಿದ್ದು ಮತ್ತಷ್ಟು ಹಿನ್ನೆಡೆ ಅನುಭವಿಸಿದೆ.
ನಾಲ್ಕು ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶದಲ್ಲಿ 80, ಮಹಾರಾಷ್ಟ್ರದಲ್ಲಿ 48, ಪಶ್ಚಿಮ ಬಂಗಾಳದಲ್ಲಿ 42 ಮತ್ತು ಬಿಹಾರ ದಲ್ಲಿ 40 ಲೋಕಸಭಾ ಸ್ಥಾನ ಹೊಂದಿದ್ದು ಈ ನಾಲ್ಕು ರಾಜ್ಯಗಳಲ್ಲಿ ಎನ್ ಡಿಎ ಮೈತ್ರಿಕೂಟ ಅಧಿಕಾರದಲ್ಲಿದೆ.
ನಂತರದ ತಮಿಳುನಾಡಿನಲ್ಲಿ 39 ಲೋಕಸಭಾ ಸ್ಥಾನಗಳಿವೆ. ಇಲ್ಲಿ ಚಿತ್ರನಟ ವಿಜಯ್ ಮೊದಲ ಬಾರಿಗೆ ಚುನಾವಣೆ ಎದುರಿಸಿ ಟಿವಿಕೆ ಪಕ್ಷ 108 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಸರ್ಕಾರ ರಚನೆಗೆ ಮುಂದಾಗಿದೆ.
ಬಿಜೆಪಿ ಮತ್ತು ಇಂಡಿಯಾ ಮೈತ್ರಿಕೂಟ ಸದಸ್ಯ ಡಿಎಂಕೆ ವಿರುದ್ಧ ತಮ್ಮ ಧ್ವನಿ ಎತ್ತಿದ್ದಾರೆ. ಆರನೇ ರಾಜ್ಯ 29 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಭದ್ರಕೋಟೆಯಾದ ಮಧ್ಯಪ್ರದೇಶವಾಗಿದೆ.
ಲೋಕಸಭಾ ಚುನಾವಣೆಗಳು ಸಂಪೂರ್ಣವಾಗಿ ವಿಭಿನ್ನವಾದ ರಾಜಕೀಯ ಯುದ್ಧದ ವಾತಾವರಣ ಕಲ್ಪಿಸಿವೆ. ಈ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಸಾಮಾನ್ಯವಾಗಿ ಸಂಸತ್ತಿನ ಚುನಾವಣೆಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತವೆ. 2024 ರಲ್ಲಿ, ಉತ್ತರ ಪ್ರದೇಶದಲ್ಲಿ ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟದಿಂದ ಬಿಜೆಪಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ, ಆದರೆ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.
ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶದಲ್ಲಿ ಮತ್ತು 2028 ರಲ್ಲಿ ಮಧ್ಯಪ್ರದೇಶದಲ್ಲಿ ಚುನಾವಣೆಗಳು ನಡೆಯಲಿದ್ದು, ಹಿಂದಿ-ಹೃದಯಭೂಮಿ ರಾಜ್ಯಗಳಲ್ಲಿ ವಿರೋಧ ಪಕ್ಷಗಳು ಬಿಜೆಪಿಯನ್ನು ಸೋಲಿಸುವಲ್ಲಿ ಯಶಸ್ವಿಯಾದರೆ ಬಿಜೆಪಿಯ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಎರಡಂಕಿಯ ಲೋಕಸಭಾ ಸದಸ್ಯರನ್ನು ಹೊಂದಿರುವ ಎಲ್ಲಾ 18 ರಾಜ್ಯಗಳನ್ನು ಸೇರಿಸಲು ಪಟ್ಟಿ ವಿಸ್ತರಿಸಿದರೆ, 543 ಸದಸ್ಯರ ಸದನದಲ್ಲಿ ಅವುಗಳ ಒಟ್ಟು ಬಲ 502 ಕ್ಕೆ ಏರುತ್ತದೆ. ಆ ಪಟ್ಟಿಯಲ್ಲಿ, ವಿರೋಧ ಪಕ್ಷ ತನ್ನ ಉಪಸ್ಥಿತಿಯೂ ಇದ್ದು ಒಟ್ಟು 92 ಸ್ಥಾನಗಳನ್ನು ಹೊಂದಿರುವ ಕರ್ನಾಟಕ, ಕೇರಳ, ತೆಲಂಗಾಣ, ಜಾರ್ಖಂಡ್ ಮತ್ತು ಪಂಜಾಬ್ ಎಂಬ ಐದು ರಾಜ್ಯಗಳಲ್ಲಿ ಅದು ಅಧಿಕಾರದಲ್ಲಿದೆ.






















