Home ಜಿಲ್ಲೆ ವಾರ್ಷಿಕ ಸಾಮಾನ್ಯ ಸಭೆ

ವಾರ್ಷಿಕ ಸಾಮಾನ್ಯ ಸಭೆ


ಹುಬ್ಬಳ್ಳಿ,ಮೇ.೭:
ಯಾವುದೇ ಒಂದು ಸಂಸ್ಥೆ ಅಥವಾ ಕಂಪನಿ ಯಶಸ್ವಿಯಾಗಿ ಮುನ್ನಡೆಯಲು ಆ ಸಂಸ್ಥೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ಪಾತ್ರ ಹಿರಿದಾಗಿದೆ ಎಂದು ಮಹಾಲಕ್ಷಿ÷್ಮ ಇಂಪ್ಲಿಮೆAಟ್ಸ್ ಸಂಸ್ಥೆಯ ಎಂ ಡಿ ಗಂಗಯ್ಯ ಹಿರೇಮಠ ಹೇಳಿದರು.


ದಾಂಡೇಲಿಯ ಖಾಸಗಿ ರೆಸಾರ್ಟ್ವೊಂದರಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮಹಾಲಕ್ಷಿ÷್ಮ ಇಂಪ್ಲಿಮೆAಟ್ಸ್ ಸಂಸ್ಥೆಯ ೨೦೨೫-೨೬ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಗ್ರಾಹಕರ ನಂಬಿಕೆ ಮತ್ತು ವಿಶ್ವಾಸಕ್ಕೆ ಧಕ್ಕೆ ಬರದಂತೆ ಅತ್ಯುತ್ತಮ ಕೃಷಿ ಉಪಕರಣಗಳು ಹಾಗೂ ಪೈಪ್‌ಗಳನ್ನು ತಯಾರಿಸಿಕೊಡುತ್ತಿರುವ ಮಹಾಲಕ್ಷಿ÷್ಮ ಇಂಪ್ಲಿಮೆAಟ್ಸ್ ಮತ್ತು ಕರಿಬಸವೇಶ್ವರ ಅಗ್ರಿ ಇಂಡಿಯಾ ಪ್ರೆöÊ.ಲಿ. ಮಾದರಿಯಾಗಿ ಬೆಳೆಯುತ್ತಿದೆ ಎಂದರು. ಸಮೂಹ ಸಂಸ್ಥೆಯ ಸಿಇಒ ವಿನಯಕುಮಾರ ಬನ್ನಿಕೊಪ್ಪ ಮಾತನಾಡಿ, ಪ್ರತಿಯೊಬ್ಬ ಸಿಬ್ಬಂದಿಯನ್ನು ಸಂಸ್ಥೆಯ ಮಾಲೀಕರು ಕುಟುಂಬದ ಸದಸ್ಯರಂತೆ ಕಾಣುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಸಹೋದರತೆಯ ಭಾವನೆ ಬರುತ್ತದೆ. ಇದು ನಮ್ಮದೇ ಕಂಪನಿ ಎಂದು ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ನಾವೆಲ್ಲರೂ ಒಟ್ಟಾಗಿ ಕಂಪನಿಯನ್ನು ಬೃಹದಾಕಾರವಾಗಿ ಕಟ್ಟೋಣ ಎಂದು ಹೇಳಿದರು.ನಂತರ ಮಹಾಲಕ್ಷಿ÷್ಮ ಇಂಪ್ಲಿಮೆAಟ್ಸ್, ಕರಿಬಸವೇಶ್ವರ ಅಗ್ರಿ ಇಂಡಿಯಾ ಪ್ರೆöÊ.ಲಿ., ಮಹಾಲಕ್ಷಿ÷್ಮ ಸಹಕಾರ ಸಂಘ ಹಾಗೂ ವಿನಾಯಕ ಇಂಡಸ್ಟಿçÃಸ್ ಸಮೂಹ ಸಂಸ್ಥೆಯಲ್ಲಿ ಸಾಧನೆ ಮಾಡಿದ ಎಲ್ಲ ಸಿಬ್ಬಂದಿಗೆ ಬಹುಮಾನ ವಿತರಣೆ ಮಾಡಲಾಯಿತು. ಅದ್ವಿತೀಯ ಸಾಧನೆ ಮಾಡಿದ ಮಹಾಲಕ್ಷಿ÷್ಮ ಇಂಪ್ಲಿಮೆAಟ್ಸ್ನ ಐದು ಶಾಖೆಗಳಿಗೆ ಮಾರುತಿ ಕಾರು ವಿತರಿಸಲಾಯಿತು.


ಸಮೂಹ ಸಂಸ್ಥೆಯ ಮಾಲೀಕರಾದ ಯಶೋದಾ ಜಿ.ಹಿರೇಮಠ, ಸಿಬ್ಬಂದಿ ಸಿದ್ಧಲಿಂಗಯ್ಯ ಹಿರೇಮಠ, ಸುದರ್ಶನ ಉಪಾಧ್ಯ ಸೇರಿದಂತೆ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿದ್ದರು.