
ಬಂಕಾಪುರ್,ಮೇ.೭: ಪ್ರತಿ ವಿದ್ಯಾರ್ಥಿಗಳಲ್ಲಿ ವಿಶೇಷ ಪ್ರತಿಭೆ ಅಡಗಿದ್ದು ಅದನ್ನು ಗುರುತಿಸಿ ಮಾರ್ಗದರ್ಶನ ನೀಡುವ ಕಾರ್ಯ ಮುಖ್ಯವಾಗಿದೆ ಪೋಷಕರು ಮತ್ತು ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಎಂದು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಸವರಾಜ್ ಬಸರಿಕಟ್ಟಿ ಹೇಳಿದರು. ಪಟ್ಟಣದಲ್ಲಿ ಶಬರಿ ನಗರ ಮತ್ತು ವೈಷ್ಣವಿ ನಗರದ ಸಾರ್ವಜನಿಕರ ಸಹಯೋಗದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಕರ ವಿದ್ಯಾರ್ಥಿ ಮತ್ತು ಪಾಲಕರ ಪ್ರತಿಯೊಬ್ಬರ ಶ್ರಮ ಮುಖ್ಯವಾಗಿದೆ. ಈ ಮೂವರು ಶ್ರಮಿಸಿದಾಗ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಾಧ್ಯವಿದೆ ಎಂದರು. ಮುಖಂಡ ವಿರುಪಾಕ್ಷಪ್ಪ ಕಾಮನಹಳ್ಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಿ ಟಿ ನೆಲೋಗಲ್, ಶಿವಲಿಂಗಪ್ಪ ಹುರಳಿ,ಯಶವಂತ ಗೌಡ ಪಾಟೀಲ್, ಮಲ್ಲಪ್ಪ ಚಿಕ್ಕಸಾಲಿ, ತಿಪ್ಪಣ್ಣ ಗೋಪಾಳರ , ಬಾಬಾ ಜಾನ್ ಶಿಗ್ಗಾವ್ , ಬಸನ್ ಗೌಡ ಅಗಸಿ ಮನೆ, ಪುಟ್ಟಪ್ಪ ಕಲ್ಯಾಣಿ, ಶೋಭಾ ಪಾಟೀಲ್, ಮಕ್ಕಳು ಮತ್ತು ಪಾಲಕರು ಉಪಸ್ಥಿತರಿದ್ದರು.






















