Home ಜಿಲ್ಲೆ ಜಾಗೃತಿ ಸಮಾವೇಶ

ಜಾಗೃತಿ ಸಮಾವೇಶ


ಬಾದಾಮಿ,ಮೇ.೭:
ಸಮೀಪದ ಬನಶಂಕರಿಯಲ್ಲಿ ಮೇ ೮ ಮತ್ತು ೯ ರಂದು ಅಖಿಲ ಭಾರತ ದೇವಾಂಗ(ನೇಕಾರ) ಜಾಗೃತಿ ಸಮಾವೇಶ-೨೦೨೬, ಶ್ರೀ ದಯಾನಂದ ಪುರಿ ಮಹಾಸ್ವಾಮಿಜಿಯವರ ೩೬ ನೇ ವರ್ಷದ ಪಟ್ಟಾಭಿಷೇಕ ಹಾಗೂ ತುಲಾಭಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ದೇವಾಂಗ(ನೇಕಾರ) ಜಾಗೃತಿ ಸಮಾವೇಶದ ಸಮಿತಿಯ ಅಧ್ಯಕ್ಷ ರವೀಂದ್ರ ಕಲಬುರ್ಗಿ ತಿಳಿಸಿದರು.


ಅವರು ನಗರದ ಕಾನಿಪ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಮೇ ೮ ರಂದು ಶುಕ್ರವಾರ ಬೆಳಿಗ್ಗೆ ೫ ಗಂಟೆಗೆ ಶ್ರೀ ಬನಶಂಕರಿದೇವಿ ಅಭಿಷೇಕ, ೬ ಗಂಟೆಗೆ ಸಣ್ಣಕ್ಕಿ ಬಾಗೂರು ಶ್ರೀ ಬನಶಂಕರಿದೇವಿಉ ಉತ್ಸವ ಮೂರ್ತಿಯ ಆಹ್ವಾನದೊಂದಿಗೆ ಶ್ರೀಚೌಡೇಶ್ವರಿ ದೇವಿಯ ಕತ್ತಿ ಹಬ್ಬದ ಉದ್ಘಾಟನೆಯನ್ನು ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಭೀಮಸೇನ ಚಿಮ್ಮನಕಟ್ಟಿ ನೆರವೇರಿಸುವರು. ಬೆಳಿಗ್ಗೆ ೯ ರಿಂದ ೧೧ ಗಂಟೆಯವರೆಗೆ ಮಹಿಳೆಯರ ಕುಂಭ ಮೇಳದ ಉದ್ಘಾಟನೆಯನ್ನು ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಲಕ್ಷಿö್ಮÃ ಹೆಬ್ಬಾಳ್ಕರ, ವಿಪ ಸದಸ್ಯ ಉಮಾಶ್ರೀ ಉದ್ಘಾಟಿಸುವರು. ಮಧ್ಯಾಹ್ನ ೧೨ ಗಂಟೆಗೆ ವೇದಿಕೆ ಕಾರ್ಯಕ್ರಮಗಳು ಆರಂಭವಾಗಲಿದ್ದು, ದಯಾನಂದ ಪುರಿ ಶ್ರೀ, ಬಸವರಾಜ ಪಟ್ಟದಾರ್ಯ ಶ್ರೀಗಳು ಸೇರಿದಂತೆ ಆರು ಜನ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಸಮಾರಂಭವನ್ನು ಕೇಂದ್ರದ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಇವರು ವಚನಕಾರ ಶ್ರೀ ದೇವರದಾಸಿಮಯ್ಯನವರ ಇಂಗ್ಲೀಷ್ ವಚನಗಳ ಕೃತಿ ಬಿಡುಗಡೆ ಮಾಡುವರು. ರಾಜ್ಯ ಬಿಜೆಪಿ ಅಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಅವರು ದಾಸೋಹ ಭವನ ೧ ಮತ್ತು ೨ನೇ ಮಹಡಿ ಉದ್ಘಾಟಿಸುವರು. ಸಂಸದರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ ಇವರು ದಾನಿಗಳಿಗೆ ಸನ್ಮಾನಿಸುವರು. ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ಅಧ್ಯಕ್ಷತೆ ವಹಿಸುವರು.


ಮೇ ೯ ರಂದು ಶನಿವಾರ ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಆದಿಚಿಂಚನಗಿರಿಮಠದ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳು ಸೇರಿದಂತೆ ಇತರ ಶ್ರೀಗಳು ದಿವ್ಯ ಸಾನಿಧ್ಯ ವಹಿಸುವರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರಂಭದ ಉದ್ಘಾಟನೆ ಮತ್ತು ಶ್ರೀ ದಯಾನಂದ ಪುರಿ ಶ್ರೀಗಳು ತುಲಾಭಾರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಡಿಸಿಎಂ ಡಿ.ಕೆ.ಶಿವಕುಮಾರ ಅವರು ಬನಶಂಕರಿ ಐಟಿಐ ಕಾಲೇಜು ಆವರಣದಲ್ಲಿ ಮತ್ತು ಬನಶಂಕರಿ ಶಾಖಾಮಠದ ಆವರಣದಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಅತಿಥಿ ಗೃಹಗಳ ಶಂಕುಸ್ಥಾಪನೆ ನೆರವೇರಿಸುವರು. ರಾಜ್ಯದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಸಕ್ಕರೆ ಸಚಿವ ಶಿವಾನಂದ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರು ವಸ್ತುಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ದಾನಿಗಳಿಗೆ ಸನ್ಮಾನಿಸುವರು. ಕಾರ್ಯಕ್ರದಲ್ಲಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಸಚಿವರು, ಮಾಜಿ ಸಚಿವರು, ಮುಖಂಡರು ಭಾಗವಹಿಸುವರು ಎಂದು ರವೀಂದ್ರ ಕಲಬುರ್ಗಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಟಿ ರಾಜೇಶ, ಸಂಕಣ್ಣ ಕರಡಿಗುಡ್ಡ, ಪ್ರಕಾಶ್ ಪಟ್ಟದಕಲ್ಲ, ಕಂದಗಲ್ಲ, ಮಹೇಶ್ ಶೇಬನಕಟ್ಟಿ ಪಿತಾಂಬ್ರಪ್ಪ ಹವೇಲಿ, ಬಸವರಾಜ ಕುದರಿ, ವಿಜಯಕುಮಾರ್ ಭಾಪ್ರಿ ಉಪಸ್ಥಿತರಿದ್ದರು.