Home ಜಿಲ್ಲೆ ನಾಡು-ನುಡಿ ಏಳಿಗೆಗೆ, ಸಾಹಿತ್ಯ ಕೃಷಿ ಬೆಳವಣಿಗೆಗೆಕಸಾಪ ಕೊಡುಗೆ ಗಮನಾರ್ಹ

ನಾಡು-ನುಡಿ ಏಳಿಗೆಗೆ, ಸಾಹಿತ್ಯ ಕೃಷಿ ಬೆಳವಣಿಗೆಗೆಕಸಾಪ ಕೊಡುಗೆ ಗಮನಾರ್ಹ


ರಬಕವಿ-ಬನಹಟ್ಟಿ,ಮೇ.೭: ಕನ್ನಡ ನಾಡು ನುಡಿಗಾಗಿ, ಕನ್ನಡಿಗರಲ್ಲಿ ಭಾ?Áಭಿಮಾನ ಬೆಳೆಸಲು, ನಾಡು-ನುಡಿ ಏಳಿಗೆಗೆ, ಸಾಹಿತ್ಯ ಕೃಷಿ ಬೆಳವಣಿಗೆಗೆ ಕಸಾಪ ಕೊಡುಗೆ ಗಮನಾರ್ಹವಾದುದು. ಕನ್ನಡಕ್ಕಾಗಿ ಹಿರಿಯರು ಮಾಡಿದ ಹೋರಾಟ, ತ್ಯಾಗ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಸದಾ ಸ್ಮರಿಸಬೇಕೆಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ರಬಕವಿ- ಬನಹಟ್ಟಿ ತಾಲೂಕಾ ಘಟಕದ ಅಧ್ಯಕ್ಷ ಮೃತ್ಯುಂಜಯ ರಾಮದುರ್ಗ ಹೇಳಿದರು.


ನ್ನಡ ಸಾಹಿತ್ಯ ಪರಿ?Àತ್ತು, ಬೆಂಗಳೂರು, ಜಿಲ್ಲಾ ಘಟಕ ಬಾಗಲಕೋಟೆ, ಕನ್ನಡ ಸಾಹಿತ್ಯ ಪರಿ?Àತ್ತು ತಾಲೂಕಾ ಘಟಕ ರಬಕವಿ-ಬನಹಟ್ಟಿ ವಲಯ ಮಹಾಲಿಂಗಪುರ ಇವರು ರಬಕವಿಯ ಶ್ರೀ ಘಟ್ಟಗಿ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿ?Àತ್ತಿನ ೧೧೨ನೆಯ ಸಂಸ್ಥಾಪನಾ ದಿನಾಚರಣೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕದ ಗಡಿಯಲ್ಲಿ ನಮ್ಮ ಕನ್ನಡ ಭಾ?ೆ ಮತ್ತು ಸಂಸ್ಕೃತಿಯನ್ನು ಗಟ್ಟಿಗೊಳಿಸಲು ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ಮತ್ತು ಆರ್ಥಿಕ ಸೌಲಭ್ಯವನ್ನು ಸರಕಾರ ಕಲ್ಪಿಸಬೇಕು ಎಂದರು.
ರಬಕವಿಯ ಹಿರಿಯ ಸಾಹಿತಿ ಶಿವಾನಂದ ದಾಶಾಳ ಅವರು ಕಸಾಪ ನಡೆದು ಬಂದ ದಾರಿ ಕುರಿತು ಉಪನ್ಯಾಸ ನೀಡಿ ಕನ್ನಡ ಸಾಹಿತ್ಯ ಪರಿ?Àತ್ತಿನ ಸ್ಥಾಪನೆ, ಧ್ಯೇಯೋದ್ದೇಶಗಳನ್ನು ಪ್ರತಿಯೊಬ್ಬ ಕನ್ನಡಿಗನಿಗೆ ಮನವರಿಕೆ ಮಾಡಿಕೊಡುವಲ್ಲಿ ಕಸಾಪ ನಿರಂತರ ಕಾರ್ಯತತ್ಪರವಾಗಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಮಂಡಿಸಲಾಗುವ ನಿರ್ಣಯಗಳನ್ನು ಅನು?Á್ಠನಕ್ಕೆ ತರುವ ಮೂಲಕ ಸರಕಾರ ಕನ್ನಡಿಗರ ಭಾವನೆಗಳಿಗೆ ಸ್ಪಂದಿಸಬೇಕೆAದರು. ಕಸಾಪ ಗ್ರಾಮೀಣ ಭಾಗದಲ್ಲಿಯೂ ಸಮ್ಮೇಳನಗಳನ್ನು ಆಯೋಜಿಸಿ ಕನ್ನಡ ಭಾ?É, ನೆಲ, ಜಲ, ಸಂಸ್ಕೃತಿ ಕುರಿತು ಜಾಗೃತಿ ಮೂಡಿಸುತ್ತಾ ಬಂದಿದೆ. ರಬಕವಿ-ಬನಹಟ್ಟಿ ತಾಲೂಕಾ ಕಸಾಪ ವೈಶಿ?À್ಟ್ಯಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.


ತಾಲೂಕಾ ಕಸಾಪ ಅಧ್ಯಕ್ಷ ಮ. ಕೃ. ಮೇಗಾಡಿ ಅಧ್ಯಕ್ಷತೆ ವಹಿಸಿ ಕನ್ನಡ ಸಾಹಿತ್ಯ ಪರಿ?Àತ್ತು ತನ್ನದೇಯಾದ ಭವ್ಯ ಇತಿಹಾಸ ಹೊಂದಿದೆ. ಅನೇಕ ಹಿರಿಯರು ಕನ್ನಡ ನಾಡು ನುಡಿಗಾಗಿ ಮಾಡಿರುವ ಹೋರಾಟ, ಕನ್ನಡಿಗರಲ್ಲಿ ಒಗ್ಗಟ್ಟು, ಭಾ?Áಭಿಮಾನ ಬೆಳೆಸುವುದಕ್ಕಾಗಿ ಹಮ್ಮಿಕೊಂಡ ಕಾರ್ಯಕ್ರಮಗಳು ಸ್ಮರಣೀಯವಾಗಿವೆ. ಪ್ರತಿಯೊಬ್ಬ ಕನ್ನಡಿಗ ಕಸಾಪ ಸದಸ್ಯತ್ವ ಪಡೆದುಕೊಳ್ಳಬೇಕೆಂದರು.
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬನಹಟ್ಟಿಯ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಸುಶಾಂತ ಶ್ರೀಶೈಲ ಬುರ್ಲಿ ಅವರನ್ನು ಸನ್ಮಾನಿಸಲಾಯಿತು. ಬಿ. ಎಂ. ಮಟ್ಟಿಕಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.


ಸಾಮಾಜಿಕ ಕಾರ್ಯಕರ್ತ ಪರಪ್ಪ ಪೂಜಾರಿ, ಕಸಾಪ ಜಿಲ್ಲಾ ಘಟಕದ ಮಹಿಳಾ ಪ್ರತಿನಿಧಿ ದಾಕ್ಷಾಯಣಿ ಮಂಡಿ, ತೇರದಾಳ ತಾಲೂಕಾ ಕಸಾಪ ಅಧ್ಯಕ್ಷ ಗಂಗಾಧರ ಮೋಪಗಾರ, ಮಹಾಲಿಂಗಪುರ ವಲಯ ಅಧ್ಯಕ್ಷ ಬಸವರಾಜ ಮೇಟಿ ವೇದಿಕೆಯಲ್ಲಿದ್ದರು.
ಅನಸೂಯಾ ಹಿರೇಮಠ ಪ್ರಾರ್ಥಿಸಿದರು. ಚಂದ್ರಪ್ರಭಾ ಬಾಗಲಕೋಟ ಸ್ವಾಗತಿಸಿದರು. ಡಾ. ಚಂದ್ರಕಾAತ ಹೊಸೂರ, ಶ್ರೀಶೈಲ ಬುರ್ಲಿ ನಿರೂಪಿಸಿದರು. ದಾನಪ್ಪ ಆಸಂಗಿ ವಂದಿಸಿದರು.
ಯಶವAತ ವಾಜಂತ್ರಿ, ಮಹಾದೇವ ಕವಿಶೆಟ್ಟಿ, ಎಸ್.ಎಸ್. ಹಿರೇಮಠ, ಈರಯ್ಯ ಹಿರೇಮಠ, ಚಿದಾನಂದ ಸೊಲ್ಲಾಪೂರ, ಶರತ್ ಜಂಬಗಿ, ಮಹಾಶಾಂತ ಶೆಟ್ಟಿ, ಈರಪ್ಪ ಮನ್ಮಿ, ಎಂ.ಆರ್. ಕುಂಬಾರ, ಶೈಲಾ ಮಿರ್ಜೆ ಇನ್ನಿತರರು ಪಾಲ್ಗೊಂಡಿದ್ದರು.