Home ಜಿಲ್ಲೆ ಕಲಬುರಗಿ ಸೇತುವೆ ಮೇಲಿಂದ ಜಿಗಿದು ಯುವಕ ಆತ್ಮಹತ್ಯೆ

ಸೇತುವೆ ಮೇಲಿಂದ ಜಿಗಿದು ಯುವಕ ಆತ್ಮಹತ್ಯೆ

ಕಲಬುರಗಿ,ಮೇ.11-ಸೇತುವೆ ಮೇಲಿಂದ ಜಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಮಲಾಪುರ ತಾಲೂಕಿನ ಕುರಿಕೋಟಾ ಗ್ರಾಮದ ಸಮೀಪ ನಡೆದಿದೆ.
ಶಹಾಬಾದ್ ತಾಲೂಕಿನ ನಂದೂರು ಗ್ರಾಮದ ಅಮರನಾಥ ನಿಂಗಣ್ಣ ದೊಡ್ಡಮನಿ (30) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ.
ಶುಕ್ರವಾರ ಸಂಜೆ ಮನೆಯಿಂದ ಹೊರಟು ಹೋದ ಅಮರನಾಥ, ಕುರಿಕೋಟಾ ಸೇತುವೆ ಬಳಿ ತನ್ನ ದ್ವಿಚಕ್ರ ವಾಹನ ನಿಲ್ಲಿಸಿ ಸೇತುವೆಯಿಂದ ಜಿಗಿದಿರುವುದನ್ನು ಸ್ಥಳೀಯರು ಗಮನಿಸಿದ್ದರು ಎನ್ನಲಾಗಿದೆ.
ಶನಿವಾರ ಬೆಳಗ್ಗೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ಆರಂಭಿಸಿದ್ದು, ಭಾನುವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಕಮಲಾಪುರ ಸಿಪಿಐ ಶಿವಶಂಕರ ಸಾಹು, ಮಹಾಗಾಂವ್ ಪಿಎಸ್‍ಐ ಬಸವರಾಜ್ ಚಿತ್ತಕೋಟೆ ಹಾಗೂ ವಿಶ್ವನಾಥ್ ಬಾಕಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಹಾಗಾಂವ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.