
ಕಮಲನಗರ: ಜೂ.೨೩:ಯೋಗವು ಪರಿವರ್ತನಾತ್ಮಕ ಅಭ್ಯಾಸ ವಾಗಿದ್ದು, ಇದು ಮನಸ್ಸು ಮತ್ತು ದೇಹದ ಸಾಮರಸ್ಯ, ಆಲೋಚನೆ ಮತ್ತು ಕ್ರಿಯೆಯ ನಡುವಿನ ಸಮತೋಲನ ಮತ್ತು ಸಂಯಮ ಮತ್ತು ತೃಪ್ತಿಯ ಏಕತೆಯನ್ನು ಪ್ರತಿನಿಧಿಸುತ್ತದೆ ಎಂದು ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಹೇಳಿದರು.
ಪಟ್ಟಣದ ಶಾಸ್ತಿçà ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಅಂತರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗ ದೇಹ ಮನಸ್ಸು, ಆತ್ಮವನ್ನು ಸಂಯೋಜಿಸುತ್ತದೆ. ನಮ್ಮ ಕಾರ್ಯನಿರತಜೀವನಕ್ಕೆ ಶಾಂತಿಯನ್ನು ತರುವ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವನ್ನು ನೀಡುತ್ತದೆ. ಅದರ ರೂಪಾಂತರ ಶಕ್ತಿಯನ್ನು ನಾವು ಈ ಜ.೨೧ ರಂದು ವಿಶೇಷ ದಿನವೆಂದು ಆಚರಿಸುತ್ತೇವೆ ಎಂದರು.
ವಿಜಯಕುಮಾರ ಬನವಾಸೆ, ಸಂಗಮೇಶ ಬಿರಾದಾರ, ಉಮಾಕಾಂತ ಹಿರೇಮಠ ಮಾತನಾಡಿದರು.
ಶಿಕ್ಷಕ ಸಿಬ್ಬಂದಿ ಶ್ರೀದೇವಿ ಸೋನಕಾಂಬಳೆ, ಸಂಗೀತಾ ಕಾಂಬಳೆ, ಶೀತಲ ನಂದುಕುಮಾರ, ದೀಪಮಾಲಾ ಸೂರ್ಯವಂಶಿ, ರಾಜಶ್ರೀ ಸಿರಗಿರೆ, ಅಂಜಲಿ ಕಾಂಬಳೆ, ಈಶ್ವರಿ, ಅಂಬಿಕಾ ಸಂಗಮೇಶ, ಮಲ್ಲಿಕಾರ್ಜುನ ಮೇತ್ರೆ ಹಾಗೂ ಮಕ್ಕಳು ಇದ್ದರು.