
ಬೆಂಗಳೂರು,ಜು.೧ ಶತಮಾನದ ಇತಿಹಾಸ ಹೊಂದಿರುವ ಬೆಂಗಳೂರಿನ ಪ್ರತಿಷ್ಠಿತ ಸೆಂಚುರಿ ಕ್ಲಬ್‌ಗೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಸಿ. ಎನ್. ಗುರುಪ್ರಸನ್ನ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಬಿ.ಎ. ಅಭಿಷೇಕ್, ಖಜಾಂಚಿಯಾಗಿ ಎ.ಎಂ. ರಾಘವೇಂದ್ರನ್, ಉಪಾಧ್ಯಕ್ಷರಾಗಿ ಕೆ.ಆರ್. ಪರಂಜ್ಯೋತಿ, ಎಂ.ಆರ್. ಕೃಷ್ಣಮೂರ್ತಿ ನಿರ್ಗಮಿತ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಎಂ.ಎನ್.ಲಕ್ಷ್ಮಣ್, ಕೆ.ಶ್ರೀನಾಥ್, ಎಂ.ಆರ್.ನಂದೀಶ್, ಸಂಗೀತಾ ಶ್ರೀಕಿಶನ್, ಬಸವರಾಜು ವೈ.ಕೆ., ಕೆ.ಜೆ.ಪರಿತೋಷ್, ಲೀನಾ ಕಾಶಿನಾಥ್, ಕೆ.ಶಿವಕುಮಾರ್, ಆನಂದ್ ಗೋವಿಂದಸ್ವಾಮಿ ನಾಯ್ಡು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ