
ಇಡೀಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಕೋವಿಡ್ ಶ್ವಾಸಕೋಶದ ರೋಗವಾದರೂ ಇದರಿಂದ ಕಣ್ಣುಗಳ ಮೇಲೆ ದುಷ್ಪರಿಣಾಮ ಬೀರುತ್ತಿರುವುದನ್ನು ನಾವು ಕಾಣಬಹುದಾಗಿದೆ. ಈ ಕೋವಿಡ್‌ನಬಹುಮುಖ್ಯವಾದ ಸಂಕೀರ್ಣತೆಯೆಂದರೆ ರಕ್ತ ಹೆಪ್ಪುಗಟ್ಟುವುದು. ಸಣ್ಣ, ಮಧ್ಯಮ ಮತ್ತು ದೊಡ್ಡ ರಕ್ತನಾಳಗಳಲ್ಲಿ ಈ ರಕ್ತ ಹೆಪ್ಪುಗಟ್ಟುವುದು ಕಂಡುಬರುತ್ತಿದೆ. ಇದನ್ನು ತಿಳಿಗೊಳಿಸಲೆಂದು ಕೋವಿಡ್ ವೈದ್ಯರು ರೋಗಿಗಳಿಗೆ ಹೆಪ್ಪುಗಟ್ಟುವಿಕೆ ನಿರೋಧಕ ಔಷಧಗಳನ್ನು ನೀಡುತ್ತಿದ್ದಾರೆ.
ಕಣ್ಣುಗಳಿಗೆ ಸಂಬಂಧಿಸಿದಂತೆ,
ಕಣ್ಣುಗುಡ್ಡೆಗಳಹಿಂಬದಿಯಲ್ಲಿರುವ
ಅಂಗಾಂಶದ ರೆಟಿನಾದಲ್ಲಿ
ಸಣ್ಣ ಸಣ್ಣರಕ್ತಹೆಪ್ಪುಗಟ್ಟುವಿಕೆ
ಉಂಟಾಗುತ್ತದೆ.ರೋಗಿಗಳಿಗೆ
ಇದರ ಅರಿವಾಗಬಹುದು
ಅಥವಾ ಆಗದೇ ಇರಬಹುದು.
ಒಂದು ವೇಳೆ, ಇದರ ಅರಿವಾದರೆ ಒಂದು ಕಣ್ಣಿನ ದೃಷ್ಟಿಸ್ವಲ್ಪಕಡಿಮೆ ಇರಬಹುದು ಅಥವಾ ಹೆಚ್ಚ ಇರಬಹುದನ್ನು ಗಮನಿಸಬಹುದು. ಇಂತಹ ಸಂದರ್ಭಗಳಲ್ಲಿ ರೋಗಿಯು ಕೂಡಲೇ ಹತ್ತಿರದ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಪಡೆದುಕೊಳ್ಳಬೇಕಾಗುತ್ತದೆ.
ಕೋವಿಡ್ ಮತ್ತೊಂದು ಅಡ್ಡ ಪರಿಣಾಮವೆಂದರೆ, ಕಣ್ಣಿನ ಒಳ ಭಾಗಗಳಲ್ಲಿ ಉರಿಊ? (ಇನ್‌ಪ್ಲೇಮೇಷನ್) ಕಂಡುಬರುವುದು. ಇದಕ್ಕೆ ರೆಟಿನೈಟಿಸ್ ಅಥವಾಯುವೆಟಿಸ್ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ವಿರಳ ಪ್ರಕರಣ ಎಂಬುದನ್ನುನೆನಪಿನಲ್ಲಿಡಬೇಕು. ಕೋವಿಡ್ ಸಾಮಾನ್ಯವಾಗಿ ಶ್ವಾಸಕೋಶಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆ ಮೇಲೆ ಕಡಿಮೆ ಪ್ರಮಾಣದ ಪರಿಣಾಮ ಬೀರಬಹುದು. ??
ಈ ಕೋವಿಡ್ ಸಮಸ್ಯೆಗಳ ಚಿಕಿತ್ಸೆಯಲ್ಲಿ ಸ್ಟೆರಾಯ್ಡಗಳು ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.ಕೋವಿಡ್ ವೈರಸ್ ಸೋಂಕು ತಗುಲಿದ ಆರಂಭಿಕ ಹಂತದಲ್ಲಿ ಈ ಸ್ಟೆರಾಯ್ಡ್ಗಳನ್ನು ಉಪಯೋಗಿಸಬಾರದು.ಅಂದರೆ, ಸೈಟೋಕಿನ್ಸ್ ಸ್ಟಾರ್ಮ್ ಎಂದು ಕರೆಯಲ್ಪಡುವ ಸಮಸ್ಯೆ ಇರುವ
ಸಂದರ್ಭದಲ್ಲಿ ಸ್ಟೆರಾಯ್ಡ್ ಗಳನ್ನು ಜೀವರಕ್ಷಕ ಔಷಧಿಯನ್ನಾಗಿ ಬಳಸಲಾಗುತ್ತದೆ. ಆದರೆ, ಈ ಜೀವರಕ್ಷಕ ಸ್ಟೆರಾಯ್ಡ್ಗಳನ್ನು ವೈದ್ಯರ ಮಾರ್ಗದರ್ಶನದಲ್ಲಿ ಮಾತ್ರ ಪಡೆದುಕೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ ಎಂದು ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್ ನ ಡಾ.ರಾಮ್ ಶ್ರೀಕಾಂತ್ ಮಿರ್ಲೆ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬ್ಲ್ಯಾಕ್
ಫಂಗಸ್ (ಕಪ್ಪು ಶಿಲೀಂಧ್ರ) ಪ್ರಮುಖವಾಗಿಚರ್ಚಿತವಾಗುತ್ತಿದೆ. ಈ ಮ್ಯುಕೋರ್ಮಿಕೋಸಿಸ್ ಒಂದು ಫಂಗಸ್ ಸೋಂಕು ಆಗಿದ್ದು, ಬಹುತೇಕ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವುದಿಲ್ಲ. ಇದು ಕೆಲವೇ ಕೆಲವು ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇಂದೂ ಸಹ ಇದು ಅತಿ ಅಪರೂಪದ ರೋಗವೆನಿಸಿದೆ. ಆದಾಗ್ಯೂ, ಕೋವಿಡ್ ಸೋಂಕಿನನಂತರದ ದಿನಗಳಲ್ಲಿ ಒಂದು ವರ್ಗ ಈ ಬ್ಲ್ಯಾಕ್ ಫಂಗಸ್ ಹೆಚ್ಚು ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿವೆ.ಇಂತಹರೋಗಿಗಳು ಸೋಂಕಿನ ಸಂದರ್ಭದಲ್ಲಿ ತೀವ್ರ ರೀತಿಯಾದ ಶ್ವಾಸಕೋಶ ಹಾನಿಗೆ ತುತ್ತಾಗಿರುತ್ತಾರೆ ಮತ್ತು ನಾಳಗಳ ಮೂಲಕ ಆಮ್ಲಜನಕವನ್ನು ಸೇವನೆ ಮಾಡಿರುತ್ತಾರೆ. ಅಂತಹ ರೋಗಿಗಳಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿರುತ್ತದೆ ಮತ್ತು ಸ್ಟೆರಾಯ್ಡ್ ಮಾತ್ರೆಗಳನ್ನು ತೆಗೆದುಕೊಂಡಿದ್ದವರು ಮತ್ತು ಡಯಾಬಿಟಿಸ್ ಮಟ್ಟತಹಬದಿಗೆ ಬಾರದಿರುವವರು? ಹೀಗೆ ಮೂರು ವರ್ಗದವರಲ್ಲಿಬ್ಲ್ಯಾಕ್ ಫಂಗಸ್ ಸಮಸ್ಯೆಯ ಅಪಾಯ ಹೆಚ್ಚಾಗಿರುತ್ತದೆ ಎಂದು ಪಟ್ಟಿ ಮಾಡಲಾಗಿದೆ.
ಇದೇ ವೇಳೆ, ಈ ಫಂಗಸ್ ಸೋಂಕಿನ ಬಗ್ಗೆ ಯಾರೂ ಹೆದರಬೇಕಿಲ್ಲಅಥವಾಆತಂಕ-ಕ್ಕೆ ಒಳಗಾಗಬೇಕಿಲ್ಲ. ಒಂದು ವೇಳೆ ಕಣ್ಣುಗಳಲ್ಲಿ ನೋವು ಕಾಣಿಸಿಕೊಂಡರೆ ಅಥವಾ ಸೈನಸ್ ಅಥವಾ ಸೆಂಟ್ರಲ್ ನರ್ವಸ್ ಸಿಸ್ಟಂನಲ್ಲಿ ತೊಂದರೆ ಕಾಣಿಸಿಕೊಂಡರೆ ಕೂಡಲೇ ಫ್ಯಾಮಿಲಿ ಡಾಕ್ಟರ್ ಅನ್ನು ಸಂಪರ್ಕ ಮಾಡಿ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಬೇಕು.