
ನವಲಗುಂದ,ಜು.೧: ಉತ್ತರ ಕರ್ನಾಟಕದ ಯಲ್ಲಮ್ಮದೇವಿ ಕ್ಷೇತ್ರವನ್ನು ಅಭಿವೃದ್ಧಿ ಪಡೆಸಲು ನಿರ್ಣಯಿಸಿದ ಮಾದರಿಯಲ್ಲಿ ನವಲಗುಂದ ನಾಗಲಿಂಗಜ್ಜನ ಮಠದ ಅಭಿವೃದ್ಧಿಗೆ ಡಿಪಿಎಆರ್ ವಿನ್ಯಾಸ ತಯಾರಿಸಿ ಸಾರ್ವಜನಿಕರ ಹಾಗೂ ಸರ್ಕಾರದಿಂದ ಬರುವ ಅನುದಾನದಿಂದ ಮಠದ ಅಭಿವೃದ್ಧಿಗೆ ಪ್ರಯತ್ನಿಸೋಣ ಎಂದು ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು.
ಪಟ್ಟಣದಲ್ಲಿನ ಅಜಾತ ನಾಗಲಿಂಗಜ್ಜನ ಆರಾಧನಾ ಪಲ್ಲಕ್ಕಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು ಒಬ್ಬರಿಗೊಬ್ಬರು ದ್ವೇಶಿಸುವ ಇಂದಿನ ದಿನಮಾನಗಳಲ್ಲಿ ಮಠದಲ್ಲಿ ಗದ್ದುಗೆ ಮೇಲೆ ಪಂಜೆ ಹಾಗೂ ಬೈಬಲ್ ಇಟ್ಟು ಪೂಜೆ ಸಲ್ಲಿಸುವ ಮೂಲಕ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ನಾಂದಿಯಾಗಿರುವ ಶ್ರೀ ಅಜಾತನಾಗಲಿಂಸ್ವಾಮಿ ಮಠ ರಾಜ್ಯದಲ್ಲಿ ಬೇರೆಲ್ಲೂ ಇಲ್ಲ.
ಅಜ್ಜನ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷ ಕೂಡ ಮಠದಿಂದ ಚಾಲನೆ ನೀಡಿ ವಿವಿಧ ಪ್ರಮುಖ ಬೀದಿಗಳಲ್ಲಿ ಅಜ್ಜನ ಪಾಲಿಕೆಯೊಂದಿಗೆ ಗ್ರಾಮದೇವಿ ದೇವಸ್ಥಾನದ ವರೆಗೆ ಹೋಗಿ ತಾಯಿಗೆ ಉಡಿ ತುಂಬಿ ಮರಳಿ ಮಠಕ್ಕೆ ತಲುಪುವಷ್ಟರಲ್ಲಿ ಬೆಳಗಾಗುತ್ತದೆ.
ಜಾತ್ರೆಯು ಸಂಗೀತ ಕಾರ್ಯಕ್ರಮ ಹಾಗೂ ಪುರವಂತರೊAದಿಗೆ ಶಸ್ತಾçಭ್ಯಾಸ ವಿವಿಧ ವಾಧ್ಯಗಳೊಂದಿಗೆ ಪ್ರಾರಂಭವಾಯಿತು. ಮೊದಲನೇ ಆರಾಧನ ದಿನ ಮಾದಲಿ ಪ್ರಸಾದ ನೈವೆದ್ಯದೊಂದಿಗೆ ಪ್ರಾರಂಭವಾಗಿ ಎರಡು ದಿವಸ ಅನ್ನಪ್ರಸಾದ ಹಾಗೂ ಬೇರೆ ಬೇರೆ ಸ್ಥಳಗಳಿಂದ ಆಗಮಿಸುವ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವದು ನವಲಗುಂದ ಜಾತ್ರೆಗೆ ಹೊಸ ಕಳೆ ನೀಡುತ್ತಿದೆ.
ಅದಕ್ಕಾಗಿ ನಗರದ ಗಾಂಧಿ ಮಾರುಕಟ್ಟೆಯಲ್ಲಿ ಸರ್ಕಾರದಿಂದ ೨೦ ಲಕ್ಷ ವೆಚ್ಚದಲ್ಲಿ ನಾಗಲಿಂಗಜ್ಜನ ಪ್ರವೇಶ ದ್ವಾರ (ಕಮಾನ) ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದು ಮುಂದಿನ ವರ್ಷದೊಳಗೆ ಉದ್ಘಾಟನೆ ಮಾಡಲಾಗುವುದೆಂದು ಕೋನರಡ್ಡಿ ಹೇಳಿದರು.
ದಿವ್ಯ ಸಾನಿಧ್ಯವನ್ನು ಮಠದ ಪೀಠಾಧ್ಯಕ್ಷರಾದ ಶ್ರೀ ವೀರಯ್ಯ ಸ್ವಾಮಿಗಳು ವಹಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ, ಸಿಪಿಐ ರವಿ ಕಪ್ಪತನವರ, ಶಿವಾನಂದ ಅಂಬಿಗೇರ, ಪಿಎಸ್‌ಐ ಜನಾರ್ಥನ ಬಿ., ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸಿದ್ದಯ್ಯ ಸ್ವಾಮೀಜಿ, ವಿನೋದ ಅಸೂಟಿ,ಆನಂದ ಹವಳಕೋಡ,ಮಂಜು ಜಾಧವ, ವಿದಾನಸಭಾ ಕ್ಷೇತ್ರ ಯುತ್ ಕಾಂಗ್ರೆಸ್ ಅಧ್ಯಕ್ಷ ವಿಕಾಸ ತದ್ದೆವಾಡಿ, ಮದರಸಾಬ ಉಗರಗೋಳ,ಪ್ರಕಾಶ ಗೋಂದಳೆ, ಭರಮಪ್ಪ ಕಾತರಕಿ, ನರಸಪ್ಪ ಬಡಿಗೇರ, ಪ್ರಕಾಶ ಭೋವಿ, ಸುರೇಶ ಹಡಪದ ಮುಂತಾದವರು ಭಾಗವಸಿದ್ದರು