ದೇಶದಲ್ಲಿ ೯೭ ಕೋಟಿಗೂ ಅಧಿಕ ಇಂಟರ್‌ನೆಟ್ ಬಳಕೆ

ನವದೆಹಲಿ,ಜು.೧– ಕಳೆದ ೧೦ ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಸಬಲೀಕರಣಕ್ಕೆ ಆದ್ಯತೆ ನೀಡಿದ್ದು ದೇಶದಲ್ಲಿ ಈಗ ೯೭ ಕೋಟಿಗೂ ಹೆಚ್ಚು ಇಂಟರ್ನೆಟ್ ಸಂಪರ್ಕ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ

೨೦೧೪ ರಲ್ಲಿ ೨೫ ಕೋಟಿಯಷ್ಟಿದ್ದ ಇಂಟರ್‌ನೆಟ್ ಬಳಕೆದಾರರು ಈಗ ಸರಿ ಸುಮಾರ ೪ ಪಟ್ಟು ಹೆಚ್ಚಾಗಿದೆ. ಜೊತೆಗೆ ಭೂಮಿ ಮತ್ತು ಚಂದ್ರನ ನಡುವಿನ ಅಂತರದ ೧೧ ಪಟ್ಟು ವಿಸ್ತರಿಸುವಷ್ಟು ೪೨ ಲಕ್ಷ ಕಿಲೋಮೀಟರ್‌ಗಳಿಗೂ ಹೆಚ್ಚು ಆಪ್ಟಿಕಲ್ ಫೈಬರ್ ಕೇಬಲ್ ಅನ್ನು ಹಾಕಲಾಗಿದೆ ಎಂದಿದ್ದಾರೆ.

ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಉಪಕ್ರಮ ಆರಂಭವಾಗಿ ೧೦ ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ತಂತ್ರಜ್ಞಾನದ ಪರಿವರ್ತನೆಯ ಪ್ರಯಾಣ ಮತ್ತು ಆಡಳಿತ, ಆರ್ಥಿಕತೆ ಮತ್ತು ದೈನಂದಿನ ಜೀವನದ ಮೇಲೆ ವ್ಯಾಪಕ ಪರಿಣಾಮ ಬೀರಿದೆ ಎಂದಿದ್ದಾರೆ

“ಹತ್ತು ವರ್ಷಗಳ ಹಿಂದೆ, ಹೆಚ್ಚಿನ ದೃಢನಿಶ್ಚಯದಿಂದ ಗುರುತು ಹಾಕದ ಪ್ರದೇಶಕ್ಕೆ ದಿಟ್ಟ ಪ್ರಯಾಣ ಪ್ರಾರಂಭಿಸಿದ್ದೇವೆ” ಭಾರತೀಯರ ತಂತ್ರಜ್ಞಾನ ಬಳಸುವ ಸಾಮರ್ಥ್ಯದ ಬಗ್ಗೆ ಅನುಮಾನಿಸುವುದರಿಂದ ಸಾಮರ್ಥ್ಯವನ್ನು ನಂಬುವವರೆಗೆ ಮನಸ್ಥಿತಿಯಲ್ಲಿನ ಬದಲಾವಣೆಯಾಗಿದ್ದು ವಿಶ್ವದ ಅತಿದೊಡ್ಡ ಡಿಜಿಟಲ್ ಕ್ರಾಂತಿಗಳಲ್ಲಿ ಒಂದಾಗಿದೆ ಎಂದಿದ್ಧಾರೆ

“ತಂತ್ರಜ್ಞಾನದ ಬಳಕೆ ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರ ಹೆಚ್ಚಿಸುತ್ತದೆ ಎಂದು ದಶಕಗಳ ಕಾಲ ಯೋಚಿಸುತ್ತಿದ್ದರೂ ಮನಸ್ಥಿತಿ ಬದಲಾಯಿಸಿದ್ದೇವೆ ಮತ್ತು ಅಂತರ ನಿವಾರಿಸಲು ತಂತ್ರಜ್ಞಾನ ಬಳಸಿದ್ದೇವೆ” ಎಂದು ಹೇಳಿದ್ಧಾರೆ

೨೦೧೪ ರಲ್ಲಿ, ಇಂಟರ್ನೆಟ್ ಬಳಕೆ ಕಡಿಮೆಯಾಗಿತ್ತು. ಈಗ ಡಿಜಿಟಲ್ ಸಾಕ್ಷರತೆ ಕಡಿಮೆಯಾಗಿತ್ತು ಮತ್ತು ಆನ್‌ಲೈನ್‌ನಲ್ಲಿ ಸರ್ಕಾರಿ ಸೇವೆಗಳಿಗೆ ಪ್ರವೇಶ ವಿರಳವಾಗಿತ್ತು ಎಂದು ತಿಳಿಸಿದ್ದಾರೆ

ಡೇಟಾ ಮತ್ತು ಡ್ಯಾಶ್‌ಬೋರ್ಡ್‌ಗಳಲ್ಲಿ ಮಾತ್ರವಲ್ಲ, ೧೪೦ ಕೋಟಿ ಭಾರತೀಯರ ಜೀವನದಲ್ಲಿಯೂ ಉತ್ತರಿಸಲಾಗಿದೆ”ಭಾರತವು ಈಗ ೯೭ ಕೋಟಿಗೂ ಹೆಚ್ಚು ಇಂಟರ್ನೆಟ್ ಸಂಪರ್ಕ ಹೊಂದಿದೆ ಎಂದಿದ್ದಾರೆ

“ಭಾರತದ ೫ಜಿ ಲೋಕಾರ್ಪಣೆಯು ವಿಶ್ವದಲ್ಲೇ ಅತ್ಯಂತ ವೇಗವಾಗಿದೆ, ಕೇವಲ ಎರಡು ವರ್ಷಗಳಲ್ಲಿ ೪.೮೧ ಲಕ್ಷ ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ” ಗಾಲ್ವಾನ್, ಸಿಯಾಚಿನ್ ಮತ್ತು ಲಡಾಖ್‌ನಂತಹ ದೂರದ ಸ್ಥಳಗಳಿಗೂ ವಿಸ್ತರಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ