
ಆನೇಕಲ್. ಮಾ. ೦೯- ಭಾರತ ದೇಶದಲ್ಲಿ ಮಹಿಳೆಯರಿಗೆ ಮಾತೃ ಸ್ಥಾನ ನೀಡಿದ್ದು. ಈವತ್ತಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಸಹ ಪುರುಷರ ಸಮನಾಗಿ ಕೆಲಸ ನಿರ್ವಹಿಸಿ ನಾವೂ ಕೂಡ ಯಾರಿಗೂ ಕಡಿಮೆ ಇಲ್ಲ ಎಂದು ಸೈ ಎನಿಸಿಕೊಂಡಿದ್ದಾಳೆ ಎಂದು ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ ರವರು ತಿಳಿಸಿದರು.
ಅವರು ಶಾಂತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಗಮಂಗಲ ಸರ್ಕಾರಿ ಶಾಲೆಯ ಆವರಣದಲ್ಲಿ ಸಂರಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಅಂತರ್ ರಾಷ್ಠೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪ್ರದಾನಿ ನರೇಂದ್ರ ಮೋದಿರವರು ನಾರಿಯರಿಗೆ ಶಕ್ತಿಯನ್ನು ತುಂಬುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಯದ್ದದಲ್ಲಿಯೂ ಸಹ ಮಹಿಳೆಯರು ಪ್ರಮುಖ ಪಾತ್ರದಲ್ಲಿ ಪಾಲ್ಗೊಳ್ಳುವಂತಹ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಶಾಂತಿಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಚಿಕ್ಕನಾಗಮಂಗಲ ಗುರು ರವರು ಮಾತನಾಡಿ ಸಂರಕ್ಷಣ ಸಂಸ್ಥೆಯು ಚಿಕ್ಕನಾಗಮಂಗಲ ಬಾಗದಲ್ಲಿ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂದಿಸಿದಂತಹ ಅನೇಕ ಜನಪರ ಕಾರ್ಯಕ್ರಮಗನಳನ್ನು ರೂಪಿಸಿದ್ದು ಮಹಿಳೆಯರು ಉತ್ತಮವಾಗಿ ಕೌಶಲ್ಯ ತರಬೇತಿಯನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬನ್ನಿ ಎಂದು ತಿಳಿ ಹೇಳಿದರು.
ಇದೇಸಂಧರ್ಭದಲ್ಲಿ ಸಂಕಲ್ಪ ಸ್ವಸಾಯ ಸಂಘ ವನ್ನು ಉದ್ಘಾಟಿಸಲಾಯಿತು ಹಾಗೆಯೇ ಗರ್ಭಿಣಿಯರಿಗೆ ಶಾಸ್ತೋಸ್ತವಾಗಿ ಶ್ರೀಮಂತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಹಾಗೆಯೇ ಕ್ರೀಡೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾದಿಕಾರಿ ಗಳಾದ ಜಿ.ಗುರುಮೂರ್ತಿ. ಜಿಲ್ಲಾ ಮಕ್ಕಳ ರಕ್ಷಣಾದಿಕಾರಿ ಕುಮಾರಿ ಎಚ್.ಕೆ. ಆಶಾ. ಸಂರಕ್ಷಣಾ ಮಮಡಲೀಯ ಸದಸ್ಯರಾದ ಶ್ರೀಮತಿ ಬಾರತಿ ದೇವಿ. ಚಿಕ್ಕನಾಗಮಂಗಲ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲತಾ. ಪ್ರಾಥಮಿಕ ಆರೋಗ್ಯ ಕೇಂದ್ರದ ಹೇಮಲತಾ. ಸಂರಕ್ಷಣಾ ಸಂಸ್ಥೆ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಎಂ.ರಾಜಶೇಖರ್. ಸಂರಕ್ಷಣ ಸಂಸ್ಥೆಯ ಲಷ್ಮೀ ಎಸ್ ಮತ್ತು ಪದಾದಿಕಾರಿಗಳು. ಮಹಿಳೆಯರು ಹಾಜರಿದ್ದರು.
























