
ಆಳಂದ:ಮೇ.೨:೨೦೨೬-೨೭ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹುಮನಾಬಾದ ಪಟ್ಟಣದ ವಿಶ್ವಭಾರತಿ ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿ ದುಷ್ಯಂತ ೬೨೫ ಕ್ಕೆ ೬೦೭ ಶೇ ೯೭% ಪ್ರತಿಶತ ಫಲಿತಾಂಶ ಪಡೆಯುವ ಮೂಲಕ ಶಾಲೇಗೆ ಹಾಗೂ ಹೆತ್ತವರಿಗೂ ಕಿರ್ತಿ ತಂದಿದ್ದಾನೆ.
ದುಷ್ಯAತ ಅವರ ಸಾಧನೆಯ ಹಿಂದೆ ತಂದೆಯ ಕಠಿಣ ಶ್ರಮ ಮತ್ತು ತಾಯಿಯ ನಿರಂತರ ಪ್ರಾರ್ಥನೆಯ ಬೆಂಬಲವಿದೆ.ಹೆತ್ತವರ ಕನಸು ನನಸು ಮಾಡಿದ ಮಗನಿಗೆ ತಂದೆ ತಾಯಿ ಹಾಗೂ ಶಾಲೆಯ ಆಡಳಿತ ಮಂಡಳಿ ಗೌರವಿಸಿ ಸತ್ಕರಿಸಿದರು.ತಂದೆ ವಿಜಯಕುಮಾರ್ ಅವರು ಆಟೋ ಓಡಿಸುತ್ತ ಕಷ್ಟ ಪಟ್ಟು ದುಡಿಯುವ ಮೂಲಕ ಮಗನ ಶಿಕ್ಷಣಕ್ಕಾಗಿ ಹಗಲಿರುಳು ಶ್ರಮಿಸಿದ್ದು.ಇಂದು ಮಗನ ಈ ಸಾಧನೆಯಿಂದಾಗಿ ಅವರು ಪಟ್ಟ ಕಷ್ಟ ಪರಿಶ್ರಮಕ್ಕೆ ಸಾರ್ಥಕತೆ ಸಿಕ್ಕಂತಾಗಿದೆ.ವಿಜಯಕುಮಾರ ದಂಪತಿಗಳಿಗೆ ಮೂವರು ಮಕ್ಕಳಿದ್ದು ಒಬ್ಬ ಮಗ ಅವನು ಕೂಡ ಮೂರು ವರ್ಷಗಳ ಹಿಂದೆ ಇದೆ ಶಾಲೆಯಲ್ಲಿ ಓದಿ ೯೦% ಫಲಿತಾಂಶದಲ್ಲಿ ಪಾಸಾಗಿದ್ದು ಸದ್ಯ ಕಲಬುರ್ಗಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.ಮತ್ತೊಬ್ಬ ಕಿರಿಯ ಮಗಳು ಇನ್ನೂ ಇದೆ ಶಾಲೆಯಲ್ಲಿ ೯ ನೆ ತರಗತಿಯಲ್ಲಿ ಓದುತ್ತಿದ್ದು.ಕನ್ನಡ ಮಾಧ್ಯಮದಲ್ಲಿ ಓದಿ ಅತಿ ಹೆಚ್ಚು ಅಂಕ ಪಡೆದು ತಾಲ್ಲೂಕಿಗೆ ಹಾಗೂ ಶಾಲೆಗೆ ಕಿರ್ತಿ ತಂದಿದ್ದಿಕ್ಕೆ ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ದುಷ್ಯAತ ಅವರು ತಮ್ಮ ಯಶಸ್ಸಿನ ಬಗ್ಗೆ ಮಾತನಾಡುತ್ತಾ ಪೋಷಕರು, ಶಿಕ್ಷಕರು ಮತ್ತು ಶಾಲೇಯ ಆಡಳಿತ ಮಂಡಳಿ ನೀಡಿದ ಪ್ರೋತ್ಸಾಹವೆ ಈ ಸಾಧನೆಗೆ ಕಾರಣ ಎಂದು ಸಂತಸ ಹಂಚಿಕೊAಡಿದ್ದಾರೆ.ಶಾಲೆಯಲ್ಲಿ ನೀಡುತ್ತಿದ್ದ ವಿಶೇಷ ರಾತ್ರಿ ತರಗತಿಗಳು ಕಲಿಕೆಗೆ ಸಹಕಾರಿಯಾಗಿದ್ದವು ಎಂದು ತಿಳಿಸಿದರು.ಅಲ್ಲದೆ ಮುಂದೆ ಇಂಜಿನಿಯರ್ ಆಗುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.





















