
ಚೆನ್ನೈ,ಮೇ.8- ತಮಿಳುನಾಡಿನ ನೂತನ ಮುಖ್ಯಮಂತ್ರಿ ಯಾಗಿ ವಿಜಯ್ ಜೋಸೆಫ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಸರ್ಕಾರ ರಚನೆ ಸಂಬಂಧಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ನಾಟಕೀಯ ಬೆಳವಣಿಗೆಗಳಿಗೆ ಕಡೆಗೂ ತೆರೆಬಿದ್ದಿದೆ.
ಇಂದು ಸಂಜೆ ಅಗತ್ಯವಿರುವ 118 ಶಾಸಕರ ಬೆಂಬಲ ಪತ್ರದೊಂದಿಗೆ ವಿಜಯ್ ಅವರು ಮೂರನೇ ಬಾರಿಗೆ ರಾಜ್ಯಪಾಲ ಆರ್.ವಿ.ಅರ್ಲೆಕರ್ ಅವರನ್ನು ಲೋಕಭವನದಲ್ಲಿ ಭೇಟಿ ಮಾಡಿದರು.
ಈ ಹಿಂದೆ ಎರಡು ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಅಗತ್ಯ ಶಾಸಕರ ಪತ್ರದಿಂದಿಗೆ ಬನ್ನಿ ಸರ್ಕಾರ ರಚಿಸಿ ಎಂದು ವಿಜಯ್ ಗೆ ರಾಜ್ಯಪಾಲರು ಸೂಚಿಸಿದ್ದರು.
ಇದಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಬೆಳಗ್ಗೆಯಿಂದ ಸಂಜೆಯರೆಗೆ ನಾಟಕೀಯ ವಿದ್ಯಮಾನಗಳಿಗೆ ಕಾರಣವಾಯಿತು.
107 ಶಾಸಕರನ್ನು ಹೊಂದಿದ್ದ ವಿಜಯ್ ಗೆ ಸರ್ಕಾರ ರಚನೆಗೆ 118 ಶಾಸಕರ ಬೆಂಬಲ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಶಾಸಕರ ಬೆಂಬಲ ಪಡೆಯಲು ವಿಜಯ್ ತೀವ್ರ ಕಸರತ್ತು ನಡೆಸಿದ್ದರು.
ಟಿಸಿಕೆ, ಸಿಪಿಐ ಹಾಗೂ ಸಿಪಿಐ ಪಕ್ಷಗಳೊಂದಿಗೆ ಎರಡು ಸುತ್ತು ನಡೆಸಿದ ಮಾತುಕತೆ ಫಲಪ್ರದವಾಯಿತು.
ಸಿಪಿಐ ಮತ್ತು ಸಿಪಿಐ(ಎಂ) ತಲಾ ಇಬ್ಬರು ಶಾಸಕರನ್ನು ಹೊಂದಿವೆ. ಮತ್ತು ವಿಸಿಕೆ ಕೂಡ ವಿಧಾನಸಭೆಯಲ್ಲಿ ಇಬ್ಬರು ಸದಸ್ಯರನ್ನು ಹೊಂದಿದೆ. ಈಗಾಗಲೇ ಕಾಂಗ್ರೆಸ್ ಟಿವಿಕೆಗೆ ಬೆಂಬಲ ಘೋಷಿಸಿದೆ.
ಇವರೆಲ್ಲರೂ ಬೆಂಬಲ ನೀಡಿರುವುದರಿಂದ ಈಗ ವಿಜಯ್ ಅವರು ಮ್ಯಾಜಿಕ್ ನಂಬರ್ 118
ದಾಟಿದ್ದು, ಸರ್ಕಾರ ರಚನೆಗೆ ಹಾದಿ ಸುಗಮವಾಯಿತು.
ಸರ್ಕಾರ ರಚನೆಗೆ ಸಂಬಂಧಿಸಿದಂತೆ ಟಿವಿಕೆ ಮತ್ತು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ನಡುವೆ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಇದರಿಂದ ಸರ್ಕಾರ ರಚನೆ ವಿಳಂಬವಾಗಿತ್ತು. ಈಗ ಕಾಂಗ್ರೆಸ್ ಜತೆಗೆ ಇನ್ನೂ ಮೂರು ಪಕ್ಷಗಳ ಬೆಂಬಲ ಸಿಕ್ಕಿರುವುದು ವಿಜಯ್ ಸಿಎಂ ಆಗುವ ಹಾದಿ ಸುಲಭವಾಗಿದೆ.
ನಾಳೆ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಗತ್ಯ ಸಿದ್ಧತೆಗಳು ನಡೆದಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.























