
ಬೀದರ: ಡಾ. ಚನ್ನಬಸವ ಪಟ್ಟದೇವರ ಪ್ರಸಾದ ನಿಲಯದಲ್ಲಿ ವಚನ ಕಂಠಪಾಠ, ಪ್ರಬಂಧ, ಭಾಷಣ, ಚಿತ್ರಕಲಾ ಮತ್ತು ರಂಗೋಲಿ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ ಜರುಗಿತು. ಭಾರತೀಯ ಬಸವ ಬಳಗದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶಕುಂತಲಾ ಬೆಲ್ದಾಳೆಯವರು ಉದ್ಘಾಟಕರಾಗಿ ಆಗಮಿಸಿ ಬಸವಜ್ಯೋತಿ ಪ್ರಜ್ಞಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ವಿದ್ಯಾರ್ಥಿಗಳು ಸೊಲು ಗೆಲವು ಗಮನಿಸದೆ ಸ್ಪರ್ಧೆಯಲ್ಲಿ ಕಡ್ಡಾಯವಾಗಿ ಭಾಗವಹಿಸಿದಾಗ ತಮ್ಮಲ್ಲಿರುವ ಪ್ರತಿಭಾ ಶಕ್ತಿಯು ಹೊರಗೆ ಹಾಕಲು ಸಾಧ್ಯವಿದೆ. ಮುಂದುವರೆದು ಮಾತನಾಡುತ್ತಾ, ಬಸವಾದಿ ಶರಣದ ಮಾನವೀಯ ಮತ್ತು ನೈತಿಕ ಮೌಲ್ಯಗಳನ್ನು ಅರೆತುಕೊಂಡು ಉತ್ತಮ ನಡೆ-ನುಡಿಗಳನ್ನು ಒಂದಾಗಿಸಿಕೊAಡು ಬದುಕು ಸಾರ್ಥಕತೆಯನ್ನು ಮಾಡಿಕೊಳ್ಳಬೇಕು. ಇತಂಹ ಸ್ಪರ್ಧೆಗಳು ನಮ್ಮಲ್ಲಿ ಜ್ಞಾನದ ಶಕ್ತಿ ಹೆಚ್ಚಿಸುತ್ತದೆ. ಮತ್ತು ಶರಣರ ವಚನಗಳ ಮೌಲ್ಯವು ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಯುವಜನಾಂಗದರು ಜೀವನದಲ್ಲಿ ಅಳವಡಿಸಿಕೊಂಡಾಗ ತಮ್ಮ ವ್ಯಕ್ತಿತ್ವದ ಶಕ್ತಿಯು ಪ್ರದರ್ಶಿಸಬಹುದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಡಾ. ದೇವಕಿ ನಾಗೂರೆ ರವರು ಮಾತನಾಡುತ್ತಾ, ಸ್ಪರ್ಧೆಯಲ್ಲಿ ಯಾವುದೇ ರೀತಿಯ ಜಾತಿ, ಮತ, ಭೇಧ ಮಾಡಲಾರದೇ ಸರ್ವರಿಗೂ ಮುಕ್ತ ಅವಕಾಶವಿದೆ. ಮತ್ತು ಶರಣರು ರಚಿಸಿದ ವಚನಗಳ ಅಧ್ಯಯನದಿಂದ ಹೃದಯ ಮತ್ತು ಮನಸ್ಸು ವಿಶಾಲವಾಗುತ್ತದೆ. ಸ್ಪರ್ಧೆಗಳು ಮಕ್ಕಳ ಮನಸ್ಸುಗಳನ್ನು ಅರಳಿಸುವಂತಹ ಸಾಮರ್ಥ್ಯತತೆ ಹೊಂದಿದೆ ಎಂದರು. ಇನ್ನೋರ್ವ ಅತಿಥಿಗಳಾದ ಚಂದ್ರಶೇಖರ ಹೆಬ್ಬಾಳೆ ಯವರು ವಚನಗಳ ಮೌಲ್ಯಗಳ ಕುರಿತು ಮಾತನಾಡಿದರು. ತೀರ್ಪುಗಾರರಾದ ಪ್ರೊ. ಭಗೀರಥಿ ಕೊಂಡಾ, ಮಹಾದೇವಿ ಬಿರಾದಾರ, ಶ್ರೀಕಾಂತ ಬಿರಾದಾರ, ಬಾಪು ಮಡಕೆ, ಸುಧಾ ನಾಯಕ, ಶಿವಲೀಲಾ, ಮಹಾದೇವಮ್ಮ, ವಿಶ್ವನಾಥ ರವರು ವಿವಿಧ ಸ್ಪರ್ಧೆಗಳ ತೀರ್ಪನ್ನು ನೀಡಿದ್ದಾರೆ.
ಪ್ರವಚನ ಸೇವಾ ಸಮಿತಿಯ ಅಧ್ಯಕ್ಷರಾದ ಯೋಗೇಶ ಸಿರಿಗೇರೆ ರವರು ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಉಮಾಕಾಂತ ಮೀಸೆ ರವರು ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಸಂಗ್ರಾಮ ಎಂಗಳೆ ಸ್ವಾಗತ ಕೋರಿದರೆ, ಪ್ರೊ. ಭಗೀರಥಿ ಕೊಂಡಾ ರವರು ವಂದಿಸಿದರು. ಸ್ಪರ್ಧೆಯಲ್ಲಿ ಬೀದರ ತಾಲೂಕಿನ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಿದ್ದರು.























