Home ಜಿಲ್ಲೆ ಬೆಂಗಳೂರು “ಉತ್ಸವ ತ್ರಯಣ ” ಸಿ.ಇ.ಟಿ ರ್‍ಯಾಂಕ್ ವಿದ್ಯಾರ್ಥಿಗಳಿಗೆ ೧೦೦% ಬೋಧನ ಶುಲ್ಕ ವಿನಾಯಿತಿ

“ಉತ್ಸವ ತ್ರಯಣ ” ಸಿ.ಇ.ಟಿ ರ್‍ಯಾಂಕ್ ವಿದ್ಯಾರ್ಥಿಗಳಿಗೆ ೧೦೦% ಬೋಧನ ಶುಲ್ಕ ವಿನಾಯಿತಿ

ಬೆಂಗಳೂರು.ಏ೧೮: ‘ಉತ್ಸವ ತ್ರಯಣ”ವು ಬೆಂಗಳೂರಿನ ಬಿ.ಎಂ.ಎಸ್. ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ೨೦೨೬ರ ಏಪ್ರಿಲ್ ೧೭ರಂದು ಉದ್ಘಾಟನೆಗೊಂಡು, ಕ್ಯಾಂಪಸ್ ಅನ್ನು ಉತ್ಸಾಹ, ಸೃಜನಶೀಲತೆ ಮತ್ತು ಸಂಭ್ರಮದಿಂದ ತುಂಬಿದ ಚೈತನ್ಯಮಯ ವೇದಿಕೆಯಾಗಿಸಿದೆ.

ಈ ಭವ್ಯ ಉದ್ಘಾಟನಾ ಸಮಾರಂಭಕ್ಕೆ ಪ್ರಸಿದ್ಧ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ಶೆಟ್ಟಿ, ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಚೈತ್ರ ಜೆ. ಆಚಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಗೌರವ ತುಂಬಿದರು. ಕಾರ್ಯಕ್ರಮಕ್ಕೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಮತ್ತು ಇತರ ಗಣ್ಯರು ಅಧ್ಯಕ್ಷತೆ ವಹಿಸಿದ್ದರು.

ವಿಶೇಷವಾಗಿ, ಅಇಖಿ ನಲ್ಲಿ ೧೦೦೦ ರ್‍ಯಾಂಕ್ ಒಳಗೆ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ರಕ್ಷಣಾ ಪಡೆ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ೧೦೦% ಬೋಧನ ಶುಲ್ಕ ವಿನಾಯಿತಿ ಘೋಷಿಸಲಾಯಿತು. ಜೊತೆಗೆ, ಓಪನ್ ಹೌಸ್ ಪ್ರಾಜೆಕ್ಟ್ ಪ್ರದರ್ಶನದ ವಿಜೇತರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಮುಂದಿನ ಎರಡು ದಿನಗಳ ಕಾಲ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಪ್ರತಿಭೆಯನ್ನು ಈ ಉತ್ಸವ ಅನಾವರಣಗೊಳಿಸಲಿದೆ. ಇದು ಸೃಜನಶೀಲತೆ, ಸಂಸ್ಕೃತಿ ಮತ್ತು ಸಹಕಾರದ ನಿಜವಾದ ಸಂಭ್ರಮವಾಗಿದೆ.