Home ಜಿಲ್ಲೆ ಶಾಂತಿಯುತವಾಗಿ ಹೋಳಿ ಆಚರಿಸಲು ಸಲಹೆ

ಶಾಂತಿಯುತವಾಗಿ ಹೋಳಿ ಆಚರಿಸಲು ಸಲಹೆ

ಕಮಲನಗರ :ಮಾ.2: ಹೋಳಿ ಸ್ನೇಹದ ಬಾಂಧವ್ಯ ತೋರುವ ಹಬ್ಬ. ಅದು ವಿಜಯದ ಸಂಕೇತ. ಸಾರ್ವಜನಿಕರು ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಪಿಎಸ್‍ಐ ರಾಠೋಡ್ ಹೇಳಿದರು.

ಪಟ್ಟಣದ ಪೆÇಲೀಸ್ ಠಾಣೆ ಆವರಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಹೋಳಿ ಮತ್ತು ರಂಜಾನ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಇದೇ ಸಮಯದಲ್ಲಿ ರಂಜಾನ್ ಕೂಡ ಇದ್ದು, ಎಲ್ಲ ಹಬ್ಬವನ್ನೂ ಶಾಂತಿಯುತವಾಗಿ ಆಚರಿಸಬೇಕು. ಗಲಾಟೆ, ಅಹಿತಕರ ಘಟನೆ ಕಂಡು ಬಂದಲ್ಲಿ ಅಂತವರ ಮೇಲೆ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.

ತಹಶೀಲ್ದಾರ ಅಮಿತಕುಮಾರ ಕುಲಕರ್ಣಿ ಮಾತನಾಡಿ, ಪೆÇಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಅವಶ್ಯ. ಸಮಸ್ಯೆಗಳಿದ್ದರೆ ಮೇಡಂಅವರಿಗೆ ತಕ್ಷಣೆ ಗಮನಕ್ಕೆ ತನ್ನಿ, ಸರಿಪಡಿಸುತ್ತಾರೆ. ಆದಷ್ಟು ರಾಸಾಯನಿಕ ಬಣ್ಣಗಳನ್ನು ತ್ಯಜಿಸಿ, ಕೆನಾಲ್, ಕೆರೆ, ಬಾವಿಯಲ್ಲಿ ಸ್ನಾನ ಮಾಡುವಾಗ ಎಚ್ಚರವಿರಲಿ. ಪಿಯುಸಿ ಪರೀಕ್ಷೆ ಆರಂಭವಾಗಿದ್ದು ವಿದ್ಯಾರ್ಥಿಗಳಿಗೆ ಅಡಚಣೆ ಆಗದಂತೆ ಆಚರಿಸಿ. ಬಡಾವಣೆಯಲ್ಲಿ ಹಲಿಗೆ, ಡಿಜಿ ಸಣ್ಣದು ಬಾರಿಸುವುದಕ್ಕೆ ನಿಯಂತ್ರಣವಿರಲಿ ಎಂದರು.

ತಾ.ಪಂ. ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ, ಅಜರ ಬಾಗವಾನ, ಪರಮೇಶ್ವರ, ಇಲಾಹಿ, ಪರಮೇಶ್ವರ ಮೇತ್ರೆ, ಎಎಸ್‍ಐ ವಸಂತ ಡೋಣಗಾಂವ್, ಚಾಂದೂರಿ ಶಿವಾನಂದ ಫುಲಾರಿ, ಲೊಕೇಶ ತೇಲಂಗ್, ಸಂತೋಷ, ಸುಧಾರಾಣಿ ಹಾಗೂ ವಿವಿಧ ಗ್ರಾಮದ ಹಿಂದೂ, ಮುಸ್ಲಿಂ ಸಮುದಾಯದ ಗಣ್ಯರು ಪಾಲ್ಗೊಂಡಿದ್ದರು.