
ಬೆಂಗಳೂರು,ಮೇ.೧೨– ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ಗ್ಯಾಂಗ್ ನ್ನು ಬೇಧಿಸಿರುವ ಸಿಸಿಬಿ ಹಾಗೂ ಚಿಕ್ಕಬಾಣಾವರ ಪೊಲೀಸರು ಮೂವರನ್ನು ಬಂಧಿಸಿ ೧೦ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಡಲಪಾಳ್ಯದ ಸಂಜೀವಿನಿನಗರದ ಮುರುಳಿ(೨೯) ಮಾರೇನಹಳ್ಳಿಯ ಮಂಜುನಾಥ್(೩೯)ಹಾಗೂ ಚಿಕ್ಕಸಂದ್ರದ ಹನುಮಂತೇಗೌಡ ಲೇಔಟ್‌ನ ಕಾರ್ಯಪ್ಪ(೫೩) ಬಂಧಿತ ಆರೋಪಿಗಳಾಗಿದ್ದು,ಪ್ರಮುಖ ಆರೋಪಿ ಸೇರಿ ಗ್ಯಾಂಗ್ ನಲ್ಲಿದ್ದ ಇನ್ನಿತರ ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗಿದೆ.
ಬಂಧಿತರಿಂದ ೧೦ ಲಕ್ಷ ಮೌಲ್ಯದ ೧ ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚಿಕ್ಕಬಾಣಾವರದ ಕಾಲೇಜುವೊಂದರ ಬಳಿ ಬಂಧಿತ ಆರೋಪಿಗಳಿದ್ದ ಗ್ಯಾಂಗ್ ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಮೂವರು ಆರೋಪಿಗಳನ್ನು ಒಂದು ಜಿಂಕೆಯ ಕೊಂಬಿನ ಸಮೇತ ಬಂಧಿಸಲಾಗಿದೆ. ಮೂವರು ಆರೋಪಿಗಳು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಕೃತ್ಯ ನಡೆದಿರುವುದನ್ನು ಒಪ್ಪಿಕೊಂಡಿದ್ದು,ಗ್ಯಾಂಗ್ ನ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಆರೋಪಿಗಳ ಮಾಹಿತಿಯನ್ನು ಆಧರಿಸಿ ಗ್ಯಾಂಗ್ ಪ್ರಮುಖ ಸೇರಿ ಇತರರು ಬಂಧನಕ್ಕೆ ಶೋಧ ಕೈಗೊಳ್ಳಲಾಗಿದೆ ಡಿಸಿಪಿಶ್ರೀಹರಿ ಬಾಬು ನೇತೃತ್ವದ ಸಿಸಿಬಿ ಸಂಘಟಿತ ಅಪರಾಧ ದಳ(ಪೂರ್ವ) ವಿಭಾಗದ ಇನ್ಸ್‌ಪೆಕ್ಟರ್ ಸುರೇಶ್.ಪಿ, ಚಿಕ್ಕಬಾಣಾವರ ಠಾಣೆ ಪಿಎಸ್‌ಐ ಸಾಗರ್ ಮತ್ತವರ ತಂಡ ಗ್ಯಾಂಗ್ ಬಂಧಿಸಿದೆ ಎಂದು ಕಮೀಷನರ್ ತಿಳಿಸಿದರು.


























