
ತಾಳಿಕೋಟೆ:ಮೇ.೧೩: ವಚನಕಾರರಾದ ಶರಣರ ಪರಿಕಲ್ಪನೆಯಂತೆ, ಇಷ್ಟಲಿಂಗ ಪೂಜೆಯನ್ನು ಇಷ್ಟಲಿಂಗ ಧರಿಸಿದವನೇ ಮಾಡಬೇಕು. ಬೇರೆ ಮತ್ತೊಬ್ಬರಿಂದ ಮಾಡಿಸಲು ಬರುವುದಿಲ್ಲ. ಭವಚಕ್ರದಿಂದ ತಪ್ಪಿಸಿಕೊಳ್ಳಬಯಸಿ, ಆಧ್ಯಾತ್ಮಿಕ ಜೀವನ ನಡೆಸಬಯಸುವ ಭಕ್ತ, ಸದ್ಗುರುವಿನ ಬಳಿ ಬಂದು ದೀಕ್ಷಾ ಮೂಲಕ ಇಷ್ಟಲಿಂಗ ಪಡೆಯಬೇಕೆಂದು ಚಬನೂರಿನ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದ ಧರ್ಮಾಧಿಕಾರಿ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಚಬನೂರ ಗ್ರಾಮದ ಪ್ರತಿಷ್ಠಿತ ದಾಸೋಹ ಮಠವಾಗಿರುವ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದಲ್ಲಿ ಮೇ.೧ ರಿಂದ ೩೦ ರವರೆಗೆ ಒಂದು ತಿಂಗಳ ರ‍್ಯಂತ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ವೈದಿಕ ಸಂಸ್ಕಾರ ಶಿಬಿರದಲ್ಲಿ ಸೋಮವಾರರಂದು ನಡೆದ ಇಷ್ಠಲಿಂಗ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಭಕ್ತಸ್ಥಲ ಹಾಗೂ ಮಹೇಶಸ್ಥಲದಲ್ಲಿ ಲಿಂಗಪೂಜೆ, ಮಂತ್ರ, ನೈತಿಕ ಕ್ರಿಯೇ ಮುಂತಾದ ಆಚರಣಗಳನ್ನು ಮಾಡಿ ಶುದ್ಧವಾಗುವುದು ಪ್ರಸಾದಿ ಮತ್ತು ಪ್ರಾಣಲಿಂಗಿ ಸ್ಥಲದಲ್ಲಿ ಎಲ್ಲವೂ ಲಿಂಗ(ಶಿವ)ದ ಪ್ರಸಾದವೆಂದು ತನ್ನದೆನೂ ಇಲ್ಲವೆಂದು ತಿಳಿದು ಶುದ್ಧವಾಗುವುದು. ಶರಣ ಮತ್ತು ಐಕ್ಯಸ್ಥಲಗಳಲ್ಲಿ ಲಿಂಗಧ್ಯಾನದ ಮೂಲಕ ಅಂಗನು ಲಿಂಗದಲ್ಲಿ ಒಂದಾಗುವುದಷ್ಟೇ ಅಲ್ಲ ಲಿಂಗವೇ ತಾನೆಂದು ಭಾವ ಬಲಿದು ಶುದ್ಧವಾಗುವುದು. ಅಲ್ಲಿ ಲಿಂಗ ಗುಣಗಳೇಲ್ಲ ನಿಗಿ ಲಿಂಗವೇ ಆಗಿರುತ್ತಾನೆ ಶರಣರೆಂದ ಅವರು ಇಷ್ಟಲಿಂಗ ನಿಷ್ಠೆ ಹೊಂದಲು ಶರಣರ ದಿವ್ಯ ಬದುಕು ಮತ್ತು ವಚನ ಸಾಹಿತ್ಯ ಅರಿಯುವುದು ಅವಶ್ಯವಾಗಿದೆ. ಇಷ್ಟಲಿಂಗ ಜನಕ ಬಸವಣ್ಣನವರಲ್ಲಿ ಅಚಲ ಶ್ರದ್ಧೆ ಇರಬೇಕಾಗಿದೆ. ಹಾಗೇ ನಂಬಿ ಅಪ್ಪಿಕೊಂಡು, ಒಪ್ಪಿಕೊಂಡು ನಡೆದು ಬಂದ ಸಿದ್ದಿಪುರುಷ ಶ್ರೀರಾಮಲಿಂಗೇಶ್ವರರು ನಮಗೆ ದಾರಿದೀಪವಾಗಿದ್ದಾರೆ ವೈದಿಕ ಸಂಸ್ಕಾರ ಶಿಬಿರಗಳು ಸಾಮಾನ್ಯವಾಗಿ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕöÈತಿ ಮತ್ತು ಧಾರ್ಮಿಕ ಮೌಲ್ಯಗಳನ್ನು ಬೆಳೆಸುವ ಬೇಸಿಗೆ ಶಿಬಿರಗಳಾಗಿವೆ ಈ ಶಿಬಿರದಿಂದ ಮೌಲ್ಯಯುತವಾದ ಬಧುಕು ರೂಪಿಸಿಕೊಳ್ಳಲು ಸಾದ್ಯವಾಗಲಿದೆ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದಲ್ಲಿ ಒಂದು ತಿಂಗಳ ರ‍್ಯಂತ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ವೈದಿಕ ಸಂಸ್ಕಾರ ಶಿಬಿರವನ್ನು ಆಯೋಜಿಸಿ ಈ ಭಾಗದಲ್ಲಿ ಮಕ್ಕಳಿಗೆ ಇಷ್ಟಲಿಂಗ ಪೂಜೆ, ಶಿವಯೋಗ ಸಾಧನೆ ಮತ್ತು ಪೂಜಾ ವಿಧಿವಿಧಾನಗಳು ವೈದಿಕ ಸಂಸ್ಕಾರ, ಧಾರ್ಮಿಕ ಆಚರಣೆಗಳು ಮತ್ತು ಇಷ್ಟಲಿಂಗ ಪೂಜೆಯ ಬಗ್ಗೆ ಜ್ಞಾನ ನೀಡುವುದು, ವೇದ, ಪಠಣ, ಯೋಗ, ಒಳಗೊಂಡು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಬಲಪಡಿಸಲು ಅವಶ್ಯವಾಗಿರುವ ಅಂಶಗಳು ಈ ಶಿಬಿರದಲ್ಲಿ ಕಲಿಸಲಾಗುತ್ತಿದೆ ಮಕ್ಕಳಲ್ಲಿ ಸಂಸ್ಕಾರದ ಜ್ಞಾನ ಅರಿವು ಮುಡಿಸುವ ಸಲುವಾಗಿ ವೈದಿಕ ಸಂಸ್ಕಾರ ಶಿಬಿರವನ್ನು ಹಮ್ಮಿಕೊಂಡಿದೆ ಎಂದರು.
ಇನ್ನೋರ್ವ ನಂದವಾಡಗಿಯ ವೇದ ಪಂಡಿತರಾದ ವೇ.ಸಿದ್ದು ಹಿರೇಮಠ ಅವರು ಮಾತನಾಡಿ ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರವೆAಬುದು ಮರೆತು ಹೋಗುತ್ತಿದೆ ಕೆಲವು ಪಾಲಕರು ಕೇವಲ ಶಿಕ್ಷಣಕೊಡಿಸುವ ಬರದಲ್ಲಿ ಮಕ್ಕಳಲ್ಲಿ ನಡೆ ನುಡಿ ಸಂಸ್ಕಾರವೆAಬುದನ್ನು ಕಲಿಸುವದನ್ನು ಮರೆತು ಹೋಗಿದ್ದಾರೆ ಹೀಗಾಗಿ ಈ ಭಾಗದ ಮಕ್ಕಳಲ್ಲಿ ೧ ತಿಂಗಳ ಶಾಲಾ ರಜೆಯ ಸಂದರ್ಬದಲ್ಲಿ ಮಕ್ಕಳಿಗೆ ಉಪಯುಕ್ತವಾಗುವ ಜಿಲ್ಲೆಯಲ್ಲಿಯೇ ಮಾದರಿಯಾಗುವ ವೈದಿಕ ಸಂಸ್ಕಾರ ಶಿಬಿರವನ್ನು ಆಯೋಜಿಸಿ ಕಾಶಿಯ ವೇದ ಪಂಡಿತರಿAದ ಹಾಗೂ ಶ್ರೀಶೈಲ ವೇದ ಮತ್ತು ಜ್ಯೋತಿಷ್ಯ ಪಂಡಿತರಿAದ ವಾರಕ್ಕೊಮ್ಮೆ ವಿಶೇಷ ಭೋದನಾ ಶಿಬಿರ ನಡೆಯುತ್ತಾ ಬಂದಿದೆ ದಿನನಿತ್ಯ ಕುಂಟೋಜಿಯ ವೈದಿಕ ಶಾಸ್ತಿçÃಗಳಾದ ವೇ.ವಿರೇಶ ಹಿರೇಮಠ, ವೈದಿಕ ಶಾಸ್ತಿçÃಗಳಾದ ವೇ.ಪ್ರದೀಪ ಹಿರೇಮಠ, ವೇ.ಗಿರಿಶ ಹಿರೇಮಠ, ಅವರು ನಡೆಸಿಕೊಂಡು ಹೊರಟಿದ್ದಾರೆ ವೈದಿಕ ಸಂಸ್ಕಾರ ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ನಿತ್ಯ ದಾಸೋಹದ ಪ್ರಸಾದದ ಜೊತೆಗೆ ವಸತಿ ಸೌಲಭ್ಯವನ್ನು ಶ್ರೀ ಮಠದ ಧರ್ಮಾಧಿಕಾರಿ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ಕಲ್ಪಿಸಿ ಮಕ್ಕಳಲ್ಲಿ ಮೌಲ್ಯಯುತವಾದ ಬಧುಕಿನ ದಾರಿ ತೋರಿಸುತ್ತಿರುವದು ಗುಣಗಾನಮಯವಾಗಿದೆ ಎಂದರು.
ಇಷ್ಟಲಿಂಗ ಎಂಬರ್ಥ ಒಳ್ಳೆಯ ಶಿವ, ಮಂಗಲ ಇತ್ಯಾದಿಗಳಿಂದ ಕೂಡಿದೆ. ಇಷ್ಟಲಿಂಗ ಪೂಜೆಯಿಂದ ಅನಿಷ್ಟ ದೂರವಾಗುತ್ತದೆ ಇಷ್ಟಲಿಂಗದ ನಿರಂತರ ಪೂಜೆಯಿಂದಲೂ ಲಿಂಗಾAಗ ಸಾಮರಸ್ಯ ಸಾಧ್ಯವೆಂಬ ವೈಜ್ಞಾನಿಕ ನಿಲುವು ಶರಣರದ್ದಾಗಿದೆ ಈ ಕಾರಣದಿಂದಲೇ ಮಕ್ಕಳಿಗಾಗಿಯೇ ವೈದಿಕ ಸಂಸ್ಕಾರ ಶಿಬಿರವನ್ನು ಶ್ರೀಮಠದ ವತಿಯಿಂದ ಆಯೋಜಿಸಿದ್ದೇವೆ.
ಜ್ಯೋತಿಷ್ಯ ರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ಚಬನೂರ























