
ತಾಳಿಕೋಟೆ:ಜೂ.೧೪: ಸ್ಥಳೀಯ ಯುನಿಯನ್ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಾ ಗ್ರಾಹಕರ ಹಾಗೂ ಸಿಬ್ಬಂದಿಗಳ ಸಹಕಾರ ಮನೋಭಾವನೆಯೊಂದಿಗೆ ಸಾಗಿದ್ದ ವ್ಯವಸ್ಥಾಪಕ ಸುಮನ್ ಅವರ ಸೇವೆ ಗುಣಗಾನಮಯವಾಗಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿಯಾದ ವೇ.ಮುರುಘೇಶ ವಿರಕ್ತಮಠ ಅವರು ನುಡಿದರು.
ಶುಕ್ರವಾರರಂದು ಯುನಿಯನ್ ಬ್ಯಾಂಕ್ ವ್ಯವಸ್ಥಾಪಕ ಸುಮನ್ ಅವರಿಗೆ ಹಾಗೂ ಸಹಾಯಕ ವ್ಯವಸ್ಥಾಪಕ ವೀರಬಾಬು ಅವರಿಗೆ ಹೈದ್ರಾಬಾದ್ಗೆ ವರ್ಗಾವಣೆಯಾಗಿದ್ದರ ಪ್ರಯುಕ್ತ ಬ್ಯಾಂಕಿನ ಆವರಣದಲ್ಲಿ ಏರ್ಪಡಿಸಲಾದ ಸನ್ಮಾನ ಸಮಾರಂಭದಲ್ಲಿ ಉಭಯಸ್ತರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡುತ್ತಿದ್ದ ಅವರು ತಾಳಿಕೋಟೆ ಬ್ಯಾಂಕಿನ ಶಾಖೆ ಪ್ರಾರಂಭವಾಗಿ ಸುಮಾರು ೧೦ ವರ್ಷಗಳು ಘತಿಸಿವೆ ಸುಮನ್ ವ್ಯವಸ್ಥಾಪಕ ೨ ವರ್ಷದ ಸೇವೆಯಲ್ಲಿ ಗ್ರಾಹಕರ ಪ್ರೀತಿಗಳಿಸಿದ್ದಾರೆ ಅದರಂತೆ ಸಹಾಯಕ ವ್ಯವಸ್ಥಾಪಕರೂ ಕೂಡಾ ಅವರಷ್ಟೇ ಸೇವೆ ಸಲ್ಲಿಸಿದ್ದರೂ ಅವರೂ ಕೂಡಾ ಪ್ರೀತಿ ಪ್ರೇಮದೊಂದಿಗೆ ಬ್ಯಾಂಕಿನ ಘನತೆ ಗೌರವ ಕಾಪಾಡಿಕೊಂಡು ಬಂದಿರುವದು ಮೆಚ್ಚುಗೆಗೆ ಪಾತ್ರವಾಗಿದೆ ಎಂದು ವರ್ಗಾವಣೆಗೊಂಡ ವ್ಯವಸ್ಥಾಪಕರ ಸೇವೆ ಕುರಿತು ಗುಣಗಾನ ಮಾಡಿದರು.
“ ಇನ್ನೋರ್ವ ಎಸ್.ಕೆ.ಕಲಾ ಹಾಗೂ ವಾಣಿಜ್ಯ ಮಹಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಆರ್.ವ್ಹಿ.ಜಾಲವಾದಿ ಅವರು ಮಾತನಾಡಿ ವ್ಯವಸ್ಥಾಪಕ ಸುಮನ್ ಅವರ ಸಹಾಯಕ ವ್ಯವಸ್ಥಾಪಕ ವೀರಬಾಬು ಅವರು ತಮ್ಮ ಕರ್ತವ್ಯದಲ್ಲಿ ಎಲ್ಲ ತಮ್ಮ ಸಿಬ್ಬಂದಿಯೊAದಿಗೆ ಬೆರೆತು ಗ್ರಾಹಕರ ಪ್ರೀತಿಗೆ ಪಾತ್ರರಾದ ಇವರು ತಮ್ಮ ಅಪೇಕ್ಷೆಯಂತೆ ತಾನಾಗಿಯೇ ಕೂಡಿಬಂದAತೆ ವರ್ಗಾವಣೆಹೊಂದಿದಕ್ಕೆ ಅವರಲ್ಲಿ ಸಂತಸ ಕಂಡು ಬಂದರೂ ಅವರ ನಡೆ ನುಡಿಗಳನ್ನು ಅರಿತ ನಮಗೆ ಬಹಳೇ ದುಃಖವೆನಿಸುತ್ತದೆ ಇಂತಹ ಆತ್ಮೀಯತೆಯ ವ್ಯವಸ್ಥಾಪಕರು ದೊರೆತಿರುವದರಿಂದ ಅದರ ಘನತೆ ಗೌರವ ಮೇಲ್ಮಟ್ಟಕ್ಕೇರಿದೆ ಎಂದರು.
ಇನ್ನೋರ್ವ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ಯುನಿಯನ್ ಬ್ಯಾಂಕಿನ ಶಾಖೆ ಪ್ರಾರಂಭವಾಗಿ ೧೦ ವರ್ಷಗಳು ಘತಿಸಿದರೂ ಗ್ರಾಹಕರ ಹಾಗೂ ಸಿಬ್ಬಂದಿಯವರ ನೀತಿ ನಡತೆ ಎಂಬುದು ಮೆಚ್ಚುವಂತಹದ್ದಾಗಿದೆ ಬ್ಯಾಂಕ್ ಶಾಖೆಯಲ್ಲಿಯ ಸಿಸ್ತು ಬದ್ದತೆಯ ಕಾರ್ಯ ವೈಖರ್ಯವೂ ಮೆಚ್ಚುಗೆಗೆ ಪಾತ್ರವಾಗಲು ಇಂತಹ ವ್ಯವಸ್ಥಾಪಕ ಸೇವಾ ಕಾರ್ಯವೇ ಕಾರಣವಾಗಿರುತ್ತದೆ ಎಂದರು.
ವರ್ಗಾವಣೆಗೊAಡ ವ್ಯವಸ್ಥಾಪಕ ಸುಮನ್ ಹಾಗೂ ಸಹಾಯಕ ವ್ಯವಸ್ಥಾಪಕ ವೀರಬಾಬು ಅವರು ಸಿಬ್ಬಂದಿಯವರ ಹಾಗೂ ಗ್ರಾಹಕರ ಮನೋಭಾವನೆಗಳ ಕುರಿತು ಮುಕ್ತಕಂಠದಿAದ ಹೊಗಳಿದರು.
ಈ ಸಮಯದಲ್ಲಿ ಬ್ಯಾಂಕ್ ಸಿಬ್ಬಂದಿಯವರಾದ ಮುತ್ತುರಾಜ ಕೋಲಕಾರ, ಮರೇಪ್ಪ ಗದ್ದೇಗೌಡರ, ಶ್ರೀಮತಿ ಜಯಶ್ರೀ ಹರಿಜನ, ಸಂಗಮೇಶ ತಾಳಿಕೋಟಿ, ಹಾಗೂ ಗ್ರಾಹಕರಾದ ಶಂಕ್ರಯ್ಯ ಹಿರೇಮಠ, ಹಣಮೇಶ ಜೈನಾಪೂರ, ಶ್ರೀಶೈಲ ವಿಜಾಪೂರ, ರಾಜು ಪತ್ತಾರ, ಮೊದಲಾದವರು ಉಪಸ್ಥಿತರಿದ್ದರು.




























