
ತಾಳಿಕೋಟೆ:ಮೇ.೧೩: ಬಸವಣ್ಣನವರು ನುಡಿದ ಕಾಯಕವೇ ಕೈಲಾಸವೆಂಬ ತತ್ವದಡಿ ಸಾಗಿಬಂದ ಭೋವಿ ವಡ್ಡರ ಸಮಾಜದ ಜನರು ಸಿದ್ದರಾಮೇಶ್ವರರ ಪರಮಭಕ್ತರಾಗಿ ಸಮ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಅಮೂಲ್ಯ ಕೊಡುಗೆಯನ್ನು ನೀಡುತ್ತಾ ಬಂದವರಾಗಿದ್ದಾರೆAದು ಕೊಡೆಕಲ್ ದುರದುಂಡೇಶ್ವರ ಮಠದ ಮ.ನಿ.ಪ್ರ. ಶ್ರೀ ಶಿವಕುಮಾರ ಮಹಾಸ್ವಾಮಿಗಳು ನುಡಿದರು.
ಪಟ್ಟಣದಲ್ಲಿ ಭೋವಿ ವಡ್ಡರ ಸಮಾಜದ ವತಿಯಿಂದ ಶ್ರೀ ಹುಲಿಗೆಮ್ಮದೇವಿ ಮತ್ತು ಶ್ರೀ ಗದ್ದೆಮ್ಮದೇವಿ ಜಾತ್ರಾ ಮಹೋತ್ಸವ ಧರ್ಮ ಸಭೆ ಹಾಗೂ ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸಮಾಜ ಕ್ಷೆಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ೧೨ನೇ ಶತಮಾನದ ಬಸವಣ್ಣನವರು ಜ್ಯಾತ್ಯಾತೀತ ರಾಷ್ಟçವಾಗಬೇಕೆಂಬ ಕನಸ್ಸನ್ನು ಕಟ್ಟಿಕೊಂಡಿದ್ದರು ಸಮಾಜಗಳಲ್ಲಿ ಇರುವ ಕೀಳರಮೆ ಹೊಡೆದು ಹಾಕಿ ಸಮಾನತೆ ಸಾರಬೇಕೆಂಬ ಇಚ್ಚೆಯೊಂದಿಗೆ ಮುನ್ನಡೆದಿದ್ದರು ಅವರ ಕಾಯಕ ಪರಿಕಲ್ಪನೆಯ ಹಾದಿಯಲ್ಲಿ ಸಮಾನತೆಯ ದಾರಿಯಲ್ಲಿ ಕಾಯಕಯೋಗಿ ಸಿದ್ದರಾಮೇಶ್ವರರು ನಡೆದು ಒಳ್ಳೆಯ ಸಂದೇಶಗಳನ್ನು ನೀಡಿದ್ದಾರೆ ಅಂತಹ ಮಹಾನ್ ಶರಣನ ಅನುಯಾಯಿಗಳು ಆಗಿರುವ ನೀವುಗಳು ಯಾವುದೇ ರೀತಿಯ ಕೀಳುರಿಮೆಗೆ ಒಳಗಾಗುದೇ ಕಾಯಕದಡೆಗೆ ಸಾಗುವದರೊಂದಿಗೆ ಸದೃಢ ಸಮಾಜಕಟ್ಟಲು ಮುಂದಾಗಬೇಕೆAದರು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್ ಎಸ್ ಪಾಟೀಲ ಕೂಚಬಾಳ ಮಾತನಾಡಿ ನಾಡಿನ ಸಂಸ್ಕöÈತಿಗೆ ಭೋವಿ ವಡ್ಡರ ಸಮಾಜದ ಕೊಡುಗೆ ಅಪಾರವಾಗಿದೆ. ಇದು ಎಲ್ಲ ಸಮಾಜಗಳನ್ನು ಪ್ರೀತಿ ಮತ್ತು ಗೌರವದಿಂದ ಕಾಣುವ ಸಮಾಜವಾಗಿದೆ ಇಂದಿನ ದಿನಗಳಲ್ಲಿ ಮದ್ಯವೆಸನಕ್ಕೆ ಬಲಿಯಾಗುತ್ತಾ ಸಾಗಿರುವದು ದುರದೃಷ್ಠಕರವಾಗಿದೆ ಜೀವನವನ್ನು ಹಾಳು ಮಾಡುವ ಮಧ್ಯವೆಸನದಿಂದ ದೂರಬರಬೇಕಾಗಿದೆ ಎಂದ ಅವರು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಇದರಿಂದ ಸಮಾಜದ ಜೊತೆ ಕುಟುಂಭವೂ ಕೂಡಾ ಮುಂದೆ ಬರಲು ಸಾದ್ಯವಾಗಲಿದೆ ಎಂದರು.
ಬಿಜೆಪಿ ಯುವ ಮುಖಂಡ ಭರತಗೌಡ ಪಾಟೀಲ (ನಡಹಳ್ಳಿ) ಮಾತನಾಡಿ ಸಮಾಜದ ಯುವಕರಲ್ಲಿ ಜಾಗೃತಿ ಬಂದಾಗ ಸಮಾಜದ ಸರ್ವಾಂಗೀಣ ಪ್ರಗತಿ ಸಾಧ್ಯವಾಗುತ್ತದೆ ಅಂತಹ ಪ್ರಯತ್ನ ಮಾಡಿರುವುದಕ್ಕೆ ಅಭಿನಂದಿಸುತ್ತೇನೆ.
ಕರವೇ ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೈಭೀಮ ಮುತ್ತಗಿ ಅವರು ಮಾತನಾಡಿ ಶತಮಾನಗಳಿಂದ ಶೋಷಣೆಗೆ ಒಳಗಾದಂತಹ ಸಣ್ಣ ಸಮಾಜಗಳು ಯಾರ ಮೇಲೆಯೂ ಅವಲಂಬಿತರಾಗದೆ ಜಾಗೃತಿಯನ್ನು ಬೆಳೆಸಿಕೊಂಡು, ತಮ್ಮ ಹಕ್ಕುಗಳನ್ನು ಪಡೆಯಲು ಪ್ರಯತ್ನಿಸಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮಾಜದ ಜನರಿಗೆ ತಲುಪಿಸುವ ಕೆಲಸ ಆಗಬೇಕು, ಆರ್ಥಿಕ ಮತ್ತು ಶಿಕ್ಷಣದ ಪ್ರಗತಿಯಿಂದಲೇ ಸಮಾಜದ ಬೆಳವಣಿಗೆ ಸಾಧ್ಯ ಎಂದರು.
ಆನಂದಕುಮಾರ ಡಿ.ಕೆ.(ಹುಣಸಗಿ) ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮುಖಂಡ ಕೊಡೇಕಲ್ಲದ ಹಣಮಂತ ನಾಯಕ (ಬಬ್ಲುಗೌಡ), ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮೆಹೆಬೂಬ ಕೆಂಭಾವಿ, ಭೋವಿ ಸಮಾಜದ ಅಧ್ಯಕ್ಷ ಹಣಮಂತ ಕಟ್ಟಿಮನಿ, ಕ್ಷೆಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ದ್ಯಾವಪ್ಪ ಕೂಚಬಾಳ, ಅಧ್ಯಕ್ಷ ಶ್ರೀನಿವಾಸ್ ಕುಲಕರ್ಣಿ, ಕಾಂಗ್ರೆಸ್ ಯುವ ಮುಖಂಡ ಸಂಗನಗೌಡ ಅಸ್ಕಿ, ಧರ್ಮಯುದ್ಧ ಪತ್ರಿಕೆ ಸಂಪಾದಕ ಪುಂಡಲೀಕ ಮುರಾಳ, ಪುರಸಭೆ ಮಾಜಿ ಸದಸ್ಯರಾದ ಅಕ್ಕಮಹಾದೇವಿ ಕಟ್ಟಿಮನಿ, ಪ್ರಕಾಶ ಹಜೇರಿ, ದಲಿತ ಯುವ ಮುಖಂಡ ನಾಗೇಶ ಕಟ್ಟಿಮನಿ, ನ್ಯಾಯವಾದಿ ಕಾರ್ತಿಕ್ ಕಟ್ಟಿಮನಿ, ಗಣ್ಯ ವರ್ತಕ ರಾಜು ಹಂಚಾಟೆ, ಶಿವಶಂಕರ ಹಿರೇಮಠ, ಮುಸ್ಲಿಂ ಬ್ಯಾಂಕ್ ನಿರ್ದೇಶಕ ಸಿಕಂದರಬಾಷಾ ಡೋಣಿ, ಸನಾ ಕೆಂಭಾವಿ, ಡಿಎಸ್ಎಸ್ ತಾಲೂಕ ಸಂಚಾಲಕ ಮಹೇಶ ಚಲವಾದಿ, ಆಸೀಫ್ ಕೆಂಭಾವಿ, ಮಯೂರ ಪಾಟೀಲ, ಸಂಜೀವಪ್ಪ ಬರ್ದೇನಾಳ, ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸಮಾಜದ ಗಣ್ಯರು ಹಿರಿಯರು ಉಪಸ್ಥಿತರಿದ್ದರು.
ಕುಮಾರಿ ಸೃಷ್ಟಿ ಹಿರೇಮಠ ಭರತನಾಟ್ಯ ಪ್ರದರ್ಶಿಸಿದರು. ಬಸವರಾಜ ಗೊರಜಿ, ಶಿಕ್ಷಕ ಸಾಹೇಬಗೌಡ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.
ಕಲ್ಲು ಬಂಡೆ ಒಡೆದು ಗೋಡೆ ಕಟ್ಟಲು ಅನವು ಮಾಡಿಕೊಡುತ್ತಾ ಬಂದಿರುವ ಭೋವಿ ವಡ್ಡರ ಸಮಾಜದ ಜನರು ಶ್ರಮಜೀವಿಗಳಾಗಿದ್ದಾರೆ ದುಡಿಮೇಯ ತಕ್ಕ ಪ್ರತಿಫಲ ಸಿಕ್ಕಿಲ್ಲವೆಂದು ದೃತಿಗೆಡದೇ ಮಕ್ಕಳಿಗೆ ಒಳ್ಳೆಯ ಶಿಕ್ಷಣಕೊಡಿಸಿ ಸದೃಢ ಸಮಾಜಕ್ಕೆ ಕಟ್ಟಲು ಮುಂದಾಗಬೇಕಾಗಿದೆ.
ಆರ್.ಎಸ್.ಪಾಟೀಲ(ಕೂಚಬಾಳ)
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರು.























