Home ಜಿಲ್ಲೆ ತುಮಕೂರು ೨೪ ಸಾಧಕರಿಗೆ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

೨೪ ಸಾಧಕರಿಗೆ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ತುಮಕೂರು, ನ. ೨- ಜಿಲ್ಲಾಡಳಿತದ ವತಿಯಿಂದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ೭೧ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಂದು ತುಮಕೂರು ತಾಲ್ಲೂಕು ಮಟ್ಟದ ವಿವಿಧ ಕ್ಷೇತ್ರಗಳ ೨೪ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ರಂಗಭೂಮಿ ಕ್ಷೇತ್ರ-ರಾಮೇಗೌಡನಪಾಳ್ಯದ ಡಿ. ಬೀರಪ್ಪ, ಕೋರ ಗ್ರಾಮದ ಸೋಮಶೇಖರಯ್ಯ ಕೆ.ಸಿ. ಹಾಗೂ ಎಸ್.ಎನ್. ಪಾಳ್ಯದ ಸಿದ್ದರಾಜು ಎ.; ಮಾಧ್ಯಮ ಕ್ಷೇತ್ರ-ಮೆಳೇಹಳ್ಳಿಯ ಎಂ.ಇ. ಕುಮಾರಸ್ವಾಮಿ, ಸತ್ಯಮಂಗಲದ ಸುನಿಲ್ ಕುಮಾರ್ ಎಸ್.ವಿ., ತಿಪ್ಪನಹಳ್ಳಿಯ ಟಿ.ಆರ್. ಮೋಹನ್ ಕುಮಾರ್ ಹಾಗೂ ಹೆಬ್ಬಾಕದ ಸಿದ್ದರಾಮು ಹೆಚ್.ಟಿ.; ಕನ್ನಡಪರ ಸಂಘಟನೆ ಒಕ್ಕೂಟ- ಜಯಪುರ ಶಿವರಾಜ್; ಭಗತ್ ಕ್ರಾಂತ್ ಸೇನೆ-ಗೋಕುಲ ಬಡಾವಣೆ ಹೇಮಂತ್ ಎ.ಆರ್.; ಜಯಕರ್ನಾಟಕ ಜನಪರ ವೇದಿಕೆ-ನಿರ್ವಾಣಿ ಲೇಔಟ್‌ನ ಅಖಿಲೇಶ್ ಎಲ್.; ಕನ್ನಡ ರಕ್ಷಣಾ ವೇದಿಕೆ-ಸಿದ್ದೇಶ್ವರ ನಗರದ ಹೇಮಂತ್ ಕುಮಾರ್ ಎನ್.; ಕ್ರೀಡಾ ಕ್ಷೇತ್ರ-ಸರ್ವೋದಯ ಪಿ.ಯು. ಕಾಲೇಜಿನ ಕುಮಾರ ಲಿಹಾಲ್ ಮುಥು, ಮಾರುತಿನಗರದ ಕಾವ್ಯಶ್ರೀ ಹಾಗೂ ಚೌಡೇಶ್ವರಿನಗರದ ಆರ್.ಎಂ. ಶಿವಕುಮಾರ್(ಈಜು ತರಬೇತಿದಾರ); ಸಂಗೀತ ಕ್ಷೇತ್ರ-ರಾಘವೇಂದ್ರ ಕಾಲೋನಿಯ ಡಾ. ಆರ್. ಗುರುಪ್ರಸಾದ್ ಹಾಗೂ ಎಂ.ಸಿ. ಕಾಲೋನಿಯ ರಾಘವೇಂದ್ರ ಹೆಚ್.; ಛಾಯಾಗ್ರಾಹಕ ಕ್ಷೇತ್ರ-ಎಸ್.ಎಸ್. ಪುರಂನ ರವಿಕುಮಾರ್ ಸಿ.ಎನ್.; ಶಿಕ್ಷಣ ಕ್ಷೇತ್ರ-ಮೆಳೇಕೋಟೆಯ ವಿಶ್ವಭಾರತಿ ಪ್ರೌಢಶಾಲೆಯ ಎಂ.ಎಸ್. ಪರಮೇಶ್ವರಯ್ಯ; ಮನೆಮನೆಗೆ ಕನ್ನಡ ದಿನಪತ್ರಿಕೆ ಹಂಚುವ ಮೂಲಕ ಕನ್ನಡ ಸೇವೆ-ಗುಡಿಪಾಳ್ಯದ ರಂಗಮುತ್ತಯ್ಯ ಎನ್.ಎಂ.; ಸಮಾಜ ಸೇವೆ-ಭೋವಿಪಾಳ್ಯದ ಶಿವಕುಮಾರ್; ಚಿತ್ರಕಲೆ-ಬಿಟ್ಟಿನಕುರಿಕೆಯ ಕುಮಾರ ಲಿಖಿತ್; ಬೀದಿಬದಿ ವ್ಯಾಪಾರಿಗಳ ಸೇವೆ ಮತ್ತು ಸಂಘಟನೆ- ಮರಳೂರು ದಿಣ್ಣೆಯ ಎಂ. ಗೋಪಿ; ಸಮಾಜಕಾರ್ಯ ಸಂಶೋಧಕ ಹಾಗೂ ಕನ್ನಡ ಪುಸ್ತಕಗಳ ಲೇಖಕ/ಸಂಪಾದಕ- ಮಾರುತಿನಗರದ ಡಾ. ವೇಣುಗೋಪಾಲ ಜಿ.ಎಸ್. ಹಾಗೂ ಕಲೆ-ಸುರೇಶ್ ಎಂ. ಅವರಿಗೆ ಗಣ್ಯರು ಸ್ಮರಣಿಕೆ ನೀಡಿ ಸಚಿವ ಕೃಷ್ಣಬೈರೇಗೌಡ ಸನ್ಮಾನಿಸಿದರು.