Home ಜಿಲ್ಲೆ ಬೀದಿ ನಾಯಿ ದಾಳಿ: ಐದು ತಿಂಗಳ ಹಸುಳೆ ಸಾವು- ಈಶ್ವರ ಖಂಡ್ರೆ ಕಂಬನಿ

ಬೀದಿ ನಾಯಿ ದಾಳಿ: ಐದು ತಿಂಗಳ ಹಸುಳೆ ಸಾವು- ಈಶ್ವರ ಖಂಡ್ರೆ ಕಂಬನಿ

ಬೆಂಗಳೂರು, ಮೇ 10: ಹುಮನಾಬಾದ್ ತಾಲೂಕಿನ ದಬಲಗುಂಡಿ ಗ್ರಾಮದಲ್ಲಿ ಮನೆಯ ಪಡಸಾಲೆಯಲ್ಲಿ ಮಲಗಿದ್ದ 5 ತಿಂಗಳ ಕಂದಮ್ಮನ ಮೇಲೆ ಬೀದಿ ನಾಯಿ ದಾಳಿ ಮಾಡಿದ್ದು, ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಕಂಬನಿ ಮಿಡಿದಿದ್ದಾರೆ.
ಮೃತ ಕಂದಮ್ಮನ ಕುಟುಂಬದವರೊಂದಿಗೆ ಈ ನೋವಿನ ಸಂದರ್ಭದಲ್ಲಿ ಸರ್ಕಾರ ನಿಲ್ಲುತ್ತದೆ. ದೇವರು ಮೃತ ಮಗುವಿನ ಆತ್ಮಕ್ಕೆ ಚಿರಶಾಂತಿ ನೀಡಲಿ, ತಂದೆ ತಾಯಿಗಳಿಗೆ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿರುವ ಅವರು ಕೂಡಲೇ ನಿಯಮಾನುಸಾರ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಬೀದಿ ನಾಯಿಗಳ ಅದರಲ್ಲೂ ಜನರ ಮೇಲೆ ದಾಳಿ ಮಾಡುವ ಬೀದಿ ನಾಯಿಗಳನ್ನು ಗುರುತಿಸಿ, ನಿಯಮಾನುಸಾರ ನಿಯಂತ್ರಣ ಕ್ರಮ ಕೈಗೊಳ್ಳುವಂತೆಯೂ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.