
ಕಲಬುರಗಿ,ನ.4-ಪ್ರಿಯಾ ಸಿಂಗ್ ಮತ್ತು ನಿತೀನ್ ಕುಮಾರ್ ಸಿಂಗ್ ಎಂಬುವವರು ಟೆಲಿಗ್ರಾಮ್ ಮತ್ತು ವಾಟ್ಸಪ್ ಮುಖಾಂತರ ಮಸಾಜ್ ಹೆಸರಿನಲ್ಲಿ ಕರೆ ಮತ್ತು ಮೆಸೇಜ್ ಮಾಡಿ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ 1,74,500 ರೂ.ವರ್ಗಾವಣೆ ಮಾಡಿಕೊಂಡು ಸೈಬರ್ ವಂಚನೆ ಮಾಡಿದ್ದಾರೆ ಎಂದು ಎಂ.ಬಿ.ನಗರದ ನಿವಾಸಿ ಸಿದ್ದು ಕೃಷ್ಣ ಎಂಬುವವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಅವರ ದೂರಿನ ಅನ್ವಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.





















