Home ಜಿಲ್ಲೆ ಕಲಬುರಗಿ ಎಸ್‍ಆರ್‍ಎನ್ ಮೆಹತಾ ಶಾಲೆ ವಿದ್ಯಾರ್ಥಿಗಳುವಿಭಾಗಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಎಸ್‍ಆರ್‍ಎನ್ ಮೆಹತಾ ಶಾಲೆ ವಿದ್ಯಾರ್ಥಿಗಳುವಿಭಾಗಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ,ಸೆ.17: ನಗರದ ಚಂದ್ರಕಾಂತ ಪಾಟೀಲ ಸ್ಟೇಡಿಯಂ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ ಜಿಲ್ಲಾ ಮಟ್ಟದ ಬಾಲ್ ಬ್ಯಾಂಡ್ ಮಿಂಟನ್ ಸ್ಪರ್ಧೆಯಲ್ಲಿ ನಗರದ ಎಸ್.ಆರ್.ಎನ್. ಮೆಹತಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿಭಾಗ ಮಟ್ಟದ ಕ್ರೀಡಾ ಕೂಟವು ಯಾದಗಿರಿ ಜಿಲ್ಲೆಯಲ್ಲಿ ನಡೆಯಲಿದೆ.
14 ವರ್ಷದ ವಯೋಮಿತಿಯ ಬಾಲಕ/ಬಾಲಕಿಯರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಮತ್ತು ವಯೋಮಿತಿ 17 ವರ್ಷದ ಬಾಲಕರ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ ಪಡೆಯುವುದರ ಮೂಲಕ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯ ಟ್ರಸ್ಟಿಗಳಾದ ಚಕೋರ ಮೆಹತಾ, ಪ್ರಾಚಾರ್ಯರಾದ ಪ್ರೀತಿ ಮೆಹತಾ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಬಸವರಾಜ ತಳಕೇರಿ, ಬಾಲ್ ಬ್ಯಾಂಡ್ ಮಿಂಟನ್ ತರಬೇತುದಾರರಾದ ಪ್ರೇಮಕುಮಾರ ಶಿಂಧೆ ಹಾಗೂ ಶಿಕ್ಷಕ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.