Home ಜಿಲ್ಲೆ ಬಳ್ಳಾರಿಯ ಗಡಿನಾಡು ಸಮ್ಮೇಳನದಲ್ಲಿ ಶ್ರೀದೇವಿ ಕಟ್ಟೀಮನಿಗೆ ‘ನ್ಯಾಷನಲ್ ಯೂತ್ ಐಕಾನ್’ ಪ್ರಶಸ್ತಿ

ಬಳ್ಳಾರಿಯ ಗಡಿನಾಡು ಸಮ್ಮೇಳನದಲ್ಲಿ ಶ್ರೀದೇವಿ ಕಟ್ಟೀಮನಿಗೆ ‘ನ್ಯಾಷನಲ್ ಯೂತ್ ಐಕಾನ್’ ಪ್ರಶಸ್ತಿ

ಬಳ್ಳಾರಿ : ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮAದಿರದಲ್ಲಿ ರಾಯಚೂರಿನ ಬೆಳಕು ಸಾಹಿತ್ಯ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಆಯೋಜಿಸಲಾದ ‘ಗಡಿನಾಡು ಸಮ್ಮೇಳನ’ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲೆಯ ಮಹಿಳಾ ಜಿಲ್ಲಾಧ್ಯಕ್ಷರಾದ ಕುಮಾರಿ ಶ್ರೀದೇವಿ ಎಸ್. ಕಟ್ಟೀಮನಿ ಅವರಿಗೆ ಪ್ರತಿಷ್ಠಿತ ‘ನ್ಯಾಷನಲ್ ಯೂತ್ ಐಕಾನ್ ಅವಾರ್ಡ್’ ಪ್ರದಾನ ಮಾಡಿ ಗೌರವಿಸಲಾಯಿತು.

ಕನ್ನಡ ಪರ ಹೋರಾಟ, ಸಮಾಜ ಸೇವೆ ಹಾಗೂ ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ತೋರಿದ ನಿರಂತರ ಸಕ್ರಿಯತೆ ಮತ್ತು ನಾಯಕತ್ವವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಆಯೋಜಕರು ತಿಳಿಸಿದರು.

ಕಾರ್ಯಕ್ರಮವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಅಮರೇಶ ನುಗಡೋಣಿ ಉದ್ಘಾಟಿಸಿದರು. ಬೆಳಕು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅಣ್ಣಪ್ಪ ಮೇಟಿಗೌಡ ಅವರ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.

ಸಮ್ಮೇಳನದಲ್ಲಿ ಕೃತಿ ಲೋಕಾರ್ಪಣೆ, ಸಾಹಿತ್ಯ ಚರ್ಚೆಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪ್ರಶಸ್ತಿ ಸ್ವೀಕರಿಸಿದ ಶ್ರೀದೇವಿ ಎಸ್. ಕಟ್ಟೀಮನಿ ಅವರಿಗೆ ಅಭಿಮಾನಿಗಳು, ಸ್ನೇಹಿತರು ಹಾಗೂ ಸಂಘಟನೆಯ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು.