
ಚನ್ನಮ್ಮನ ಕಿತ್ತೂರು,ಅ ೨: ಜಿಪಂ ಬೆಳಗಾವಿ ಜಿಲ್ಲಾ ಸಾಕ್ಷರತೆ ಬೆಳಗಾವಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆ ಬೆಳಗಾವಿ ಇವರು ಸಂಯುಕ್ತ ಆಶಯದಲ್ಲಿ ತಾಲೂಕಿನ ದೇವಗಾಂವ ಗ್ರಾಪಂ ವ್ಯಾಪ್ತಿಯ ಶ್ರೀ ತವನಪ್ಪ ಅವಲಕ್ಕಿ ಪ್ರೌಢಶಾಲೆ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ್ದಾರೆ.
ವಿವಿಧ ಸ್ಪರ್ಧೆಗಳ ಕ್ರೀಡಾಕೂಟ ಗುಂಪು ವಿಭಾಗದಲ್ಲಿ ೪್ಠ೪೦೦ ರಿಲೇ ಹಾಗೂ ಬಾಲಕಿಯರ- ಬಾಲಕರ ಖೋ ಖೋ ಪ್ರಥಮ ವೈಯಕ್ತಿಕ ವಿಭಾಗದಲ್ಲಿ ರೋಹಿಣಿ ಮೆಳವಂಕಿ ಉದ್ದ ಜಿಗಿತ ಪ್ರಥಮ ಹಾಗೂ ತ್ರಿವಿಧ ಜಿಗಿತ ದ್ವಿತೀಯ, ಶ್ರೇಯಾ ಸಬನೀಸ್ ೪೦೦ ಮೀಟರ್ ೧೫೦೦ ಮೀಟರ್ ಓಟದಲ್ಲಿ ಪ್ರಥಮ, ದಾನೇಶ್ವರಿ ಪಾಗಾದ ಭಲ್ಲೆ ಎಸೆತದಲ್ಲಿ ಪ್ರಥಮ, ಅಕ್ಷತಾ ಅರಬರ ಎತ್ತರ ಜಿಗಿತದಲ್ಲಿ ದ್ವಿತೀಯ, ಪ್ರೀತಮ್ ಮುದಕವ್ವನವರ ಪ್ರಥಮ ಹಾಗೂ ಅದೃಶ ತುಳಜಿ ಭಲ್ಲೆ ಎಸೆತದಲ್ಲಿ ದ್ವಿತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಜಗದ್ಗುರು ಶ್ರೀ ಶಿವಾನಂದ ವಿದ್ಯಾವರ್ಧಕ ಸಂಘ ದೇವಗಾoವ ಎಲ್ಲ ಪದಾಧಿಕಾರಿಗಳು ಹಾಗೂ ಶ್ರೀ ತವನಪ್ಪ ಅವಲಕ್ಕಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಶ್ರೀಶೈಲ್ ಅಂಗಡಿ, ದೈಹಿಕ ಶಿಕ್ಷಕ ವಾಲಿಕಾರ, ಸಹಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.























