ಹೊಳೆಸಮುದ್ರ ಗ್ರಾಮದಲ್ಲಿ ವರುಣನ ಕೃಪೆಗಾಗಿ ಗ್ರಾಮದ ದೇವರಿಗೆ ಭಕ್ತಿಯಿಂದ ವಿಶೇಷ ಪೂಜೆ

ಕಮಲನಗರ : ಜು.7:ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮಹಾದೇವ ಮಂದಿರದಲ್ಲಿ ಪ್ರಸಾದ್ ವ್ಯವಸ್ಥೆ (ಖಾಂಡ)ಮಾಡಲಾಗಿತ್ತು.

ಮುಂಗಾರು ಮಳೆ ಪ್ರಾರಂಭವಾಗಿದ್ದರೂ ಇದುವರೆಗೆ ಸಮರ್ಪವಾಗಿ ಮಳೆಬಾರದೇ ಇರುವುದರಿಂದ ಮಳೆಗಾಗಿ ಊರಿನ ಪ್ರಮುಖರು ಹಾಗೂ ಸಣ್ಣ ಮಕ್ಕಳು ಯುವಕರು ಯುವತಿಯರು ಸುಮಂಗಲೆಯರು ಸೇರಿ ನೀರು ತುಂಬಿಕೊಂಡು ತೆಲೆಯ ಮೇಲೆ ಹೊತ್ತಿಕೊಂಡು ದೇವರಿಗೆ ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ ನೆರವೇರಿಸಿದರು.

ಮುಂಜಾನೆ ಮಹಾದೇವ ಮಂದಿರದಲ್ಲಿ ವಿಶೇಷವಾಗಿ ಅಭಿಷೇಕ ಮಾಡಲಾಯಿತು. ಈ ಮೆರವಣಿಗೆಯು ಹಲಗೆ ವಾದ್ಯಗಳೊಂದಿಗೆ ಭಜನೆ ಮಾಡುತ್ತಾ ಗ್ರಾಮದ ಎಲ್ಲಾ ದೇವ ಮಂದಿರಕ್ಕೆ ಸಂಚಾರ ಮಾಡಿ ಕೊನೆಗೆ ಮಹಾದೇವ ಮಂದಿರಕ್ಕೆ ಬಂದು ತಲುಪಿತು.

ಚಂದಾ ಪಟ್ಟಿ ಮಾಡಿ ಅಕ್ಕಿಬೆಲ್ಲ ಗೋಧಿ ಇನ್ನಿತರ ಪದಾರ್ಥಗಳಿಂದ ಮಾಡಿರುವ ಅನ್ನ ದಾಸೋಹ ಪ್ರಸಾದ್ ವ್ಯವಸ್ಥೆ ಮಾಡುವರು. ಇದಕ್ಕೆ ಗ್ರಾಮೀಣ ಭಾಗದಲ್ಲಿ ಖಾಂಡ ಇಲ್ಲವೇ ಬುಟ್ಟಿ ಜಾತ್ರೆ ಎನ್ನುವರು.

ಪ್ರಸಾದ ವ್ಯವಸ್ಥೆ ಸೇವನೆ ಮಾಡಿ ವಿಶ್ರಾಂತಿ ಪಡೆಯುವರು.
ಹೀಗಾಗಿ ಈ ವರುಣನ್ನು ಕರೆಯಲು ಕರೆಸಿಕೊಳ್ಳಲು ಹೀಗೆ ಜಾತ್ರೆ ಸಹ ಮಾಡುತ್ತಾರೆ. ಮಳೆ ಬಾರದೆ ಇದ್ದಾಗ ಗ್ರಾಮಸ್ಥರು ಹಿರಿಯರಲ್ಲೂ ಸೇರಿ ಈ ನಿರ್ಣಯವನ್ನು ಮಾಡಿದರು.ಅದಕ್ಕೆ ಇಂತಹ ಕಾರ್ಯಕ್ರಮಕ್ಕೆ ಒಂದು ರೀತಿಯಲ್ಲಿ ಬುಟ್ಟಿ ಜಾತ್ರೆ ಎನ್ನುವರು.
ಭಕ್ತಿ ಭಾವದಿಂದ ಬದುಕು ಸಾಗಿಸುವ ಹಳ್ಳಿಯ ಜನ ಈ ಪ್ರಕೃತಿಯ ತಾಯಿ ಮೇಲೆ ನಂಬಿಕೆಯನ್ನು ಇಟ್ಟಿರುವುದು ಕಾಣುತ್ತಿವೆ. ಹೀಗಾಗಿ ಯಾವುದೇ ಕಾರಣಕ್ಕೂ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿತು. ಈ ಭಕ್ತಿ ಸೇವೆ ಸಲ್ಲಿಸುವರು ಅನ್ನ ಸಾಂಬಾರು ಹುಗ್ಗಿ ಭಕ್ತಿಗೆ ಅನುಗುಣವಾಗಿ ಅನ್ನ ಸೇವೆ ಹಮ್ಮಿಕೊಂಡಿರುತ್ತಾರೆ.
ಮಂಡಳಿಯ ಪ್ರಮುಖರಾದ ಸಂತೋಷ್ ಎರೋಳೆ, ಸೋಪಾನ್ ಸಿಂಧೆ ,ಸಂಗಮೇಶ್ವರ ಮುರ್ಕೆ, ರಾಹುಲ್ ಪಾಟೀಲ್, ನ್ಯಾನೇಶ್ವರ ಪಾಟೀಲ್,ಪಾಂಡುರಂಗ ಜಾಧವ್ ತುಕಾರಾಮ ಮಹಾರಾಜ,ಪ್ರಕಾಶ್ ಕದಮ್, ಮತು ಈ ಸಂದರ್ಭದಲ್ಲಿ
ವೀರಭದ್ರಯ್ಯಸ್ವಾಮಿ ಶಿವರುದ್ರಯ್ಯ ಸ್ವಾಮಿ, ಸೂರ್ಯಕಾಂತ್ ಕಾಡೋದೆ ಮಾಧುರಾವ ದನ್ನಾ, ಮದನ್ ಶಿಂಧೆ ಅಪರಾವ ಕದಂ ಚಂದ್ರಕಾಂತ್ ಪಾಂಚಾಳ ಅನೇಕರು ಇದ್ದರು.