ಇಂಗ್ಲೆಂಡ್ ವಿರುದ್ಧ ಗಿಲ್ ಭರ್ಜರಿ ದ್ವಿಶತಕ

ಎಜ್ ಬಾಸ್ಟನ್, ಜು 3- ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ನಾಯಕ ಶುಭ್ಮನ್ ಗಿಲ್ ಚೊಚ್ಚಲ ದ್ವಿಶತಕ ಬಾರಿಸಿದ್ದಾರೆ.


ಟೆಸ್ಟ್‌ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾದ ಬಳಿಕ ಗಿಲ್ ಎರಡನೇ ಪಂದ್ಯದಲ್ಲಿ ದಿಶ್ವತಕ ಸಿಡಿಸಿ ಅವಿಸ್ಮರಣೀಯ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಗಿಲ್ ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕಗಳಿಸಿದ್ದರು.


ಇಂಗ್ಲೆಂಡ್ ನ ಬೌಲಿಂಗ್ ದಾಳಿಯನ್ನು ಲೀಲಾಜಾಲವಾಗಿ ಎದುರಿಸಿದ ಗಿಲ್ 311 ಎಸೆತಗಳಲ್ಲಿ 21 ಬೌಂಡರಿ ಹಾಗೂ ಎರಡು ಸಿಕ್ಸ್ರರ್ ಗಳಿಸಿ ದ್ಲ್ವಿಶತಕ ಗಳಿಸಿದರು.


ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ಆಸ್ಟ್ರೇಲಿಯಾ ದೇಶಗಳಲ್ಲಿ ಶತಕ ಬಾರಿಸಿದ ಏಷ್ಯಾದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಗಿಲ್ ಭಾಜನರಾಗಿದ್ದಾರೆ.


ಅಲ್ಲದೆ ಎರಡನೇ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ಪೇರಿಸಿ ಇಂಗ್ಲೆಂಡ್ ಮೇಲೆ ಭಾರತ ಒತ್ತಡ ಹೇರಿದೆ.