
ಎಜ್ ಬಾಸ್ಟನ್, ಜು.6- ಇಂಗ್ಲೆಂಡ್ ವಿರುದ್ಧ ಇಂದು ಇಲ್ಲಿ ನಡೆದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ 336 ರನ್ ಗಳಿಂದ ಭರ್ಜರಿ ಜಯ ದಾಖಲಿಸಿತು.
ಇದರೊಂದಿಗೆ ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತ ಎರಡನೇ ಪಂದ್ಯದಲ್ಲಿ ಜಯಭೇರಿ ಬಾರಿಸುವ ಮೂಲಕ ಶುಭ್ಮನ್ ಗಿಲ್ ಸೇಡು ತೀರಿಸಿಕೊಂಡಿದೆ.
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ1-1ರಿಂದ ಸಮಬಲ ಸಾಧಿಸಿದೆ.
ಗೆಲುವಿಗೆ 608 ರನ್ ಗಳ ಬೃಹತ್ ಮೊತ್ತದ ಸವಾಲನ್ನು ಬೆನ್ನಹತ್ತಿದ ಇಂಗ್ಲೆಂಡ್, ಆಕಾಶ್ ದೀಪ್ ಮಾರಕ ಬೌಲಿಂಗ್ ದಾಳಿಗೆ ನಲುಗಿತು. ಎರಡನೇ ಇನ್ನಿಂಗ್ಸ್‌ನಲ್ಲಿ 271 ರನ್ ಗಳಿಸಿ ಹೀನಾಯ ಸೋಲು ಅನುಭವಿಸಿತು.

ಅಂತಿಮ ದಿನಾದಟದ ಆರಂಭ ಮಳೆಯಿಂದಾಗಿ ಒಂದೂವರೆ ತಾಸು ತಡವಾಗಿ ಆರಂಭವಾಯಿತು. ಹೀಗಾಗಿ ಭಾರತಕ್ಕೆ ಗೆಲುವಿನ ಅವಕಾಶ ಕೈತಪ್ಪುವ ಆತಂಕ ಎದುರಾಗಿತ್ತು.
ಆದರೆ ಈ ಲೆಕ್ಕಾಚಾರವನ್ನು ಆಕಾಶ್ ನೀಗಿಸಿ, ಭಾರತಕ್ಕೆ ಗೆಲುವಿನ ಮಾಲೆ ತೊಡಿಸಿದರು. ಓಲಿ ಪೋಪ್ 24 ಹಾಗೂ ಹ್ಯಾರಿ ಬ್ರೂಕ್ 23 ರನ್ ಗಳಿಸಿದ್ದಾಗ ಪೆವಿಲಿಯನ್ ಹಾದಿ ತೋರಿಸಿದರು.

ಒಂದೆಡೆ ವಿಕೆಟ್ ಪತನವಾಗುತ್ತಿದ್ದರೂ ಜೇಮಿ ಸ್ಮಿತ್ ಏಕಾಂಗಿ ಹೋರಾಟ ನಡೆಸಿದರಾದರೂ 88 ರನ್ ಗಳಿಸಿದರಾದರಾದರೂ,ಆಕಾಶ್ ವಿಕೆಟ್ ಕಬಳಿಸಿದರು. ಇದರ ಬೆನ್ನಲ್ಲೇ ಬ್ರೇಯ್ಡನ್ ಕೇರ್ಸ್ 38 ರನ್ ಗಳಿಸಿದರೆ, ಶೋಯೆಬ್ ಬಶೀರ್ 12 ರನ್ ಗಳಿಸಿ ಅಜೇಯರಾಗುಳಿದರು.
ಬುಮ್ರಾ ಅನುಪ ಸ್ಥಿತಿಯಲ್ಲಿ ಅವಕಾಶ ಪಡೆದ ಆಕಾಶ್ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದಿದ್ದ ಅವರು, ಎರಡನೇ ಇನ್ನಿಂಗ್ಸ್‌ನಲ್ಲಿ 99 ರನ್ ನೀಡಿ ಆರು ವಿಕೆಟ್ ಪಡೆದು ಇಂಗ್ಲೆಂಡ್ ಕುಸಿತಕ್ಕೆ ಪ್ರಮುಖ ಪಾತ್ರ ವಹಿಸಿದರು.

ಇನ್ನುಳಿದಂತೆ ಸಿರಾಜ್, ಪ್ರಸಿದ್ಧ ಕೃಷ್ಣ, ಜಡೇಜಾ ಹಾಗೂ ಸುಂದರ್ ತಲಾ ಒಂದು ವಿಕೆಟ್ ಪಡೆದರು.
ನಾಯಕ ಶುಭ್ಮನ್ ಗಿಲ್ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದರಿಂದ ಭಾರಯ ಬೃಹತ್ ಮೊತ್ತ ಪೇರಿಸಿತು.
ಇದರೊಂದಿಗೆ ಗಿಲ್ ನಾಯಕತ್ವದಲ್ಲಿ ಮೊದಲ ಪಂದ್ಯ ಗೆಲುವು ಸಾಧಿಸುವಲ್ಲಿ ಸಫಲರಾದರು.
ಬರ್ಮಿಂಗ್ ಹ್ಯಾಮ್‌ನಲ್ಲಿ ಇತಿಹಾಸ
ಟೀಮ್ ಇಂಡಿಯಾ ಬರ್ಮಿಂಗ್ ಹ್ಯಾಮ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದೇ ನಿರಾಸೆಯನ್ನು ಅನುಭವಿಸಿತ್ತು. ಇದೇ ಮೊದಲ ಬಾರಿಗೆ ಭಾರತ ಬರ್ಮಿಂಗ್ ಹ್ಯಾಮ್ ಅಂಗಳದಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಇದಕ್ಕೂ ಮೊದಲು ಈ ಮೈದಾನದಲ್ಲಿ ಒಂದು ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು. ಈಗ ಗಿಲ್ ಪಡೆ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ.
ಸ್ಕೋರ್ ವಿವರ
ಭಾರತ 586 ಹಾಗೂ 427 – 6 ಡಿಕ್ಲೇರ್
ಇಂಗ್ಲೆಂಡ್ 427 ಹಾಗೂ 271