ನಾನೇ ಮೊದಲ ಕೊಡವ ನಟಿ ರಶ್ಮಿಕಾ ಮಂದಣ್ಣ

ಬೆಂಗಳೂರು, ಜು. ೫-ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಯಾರು ಬಂದಿಲ್ಲ. ಕೊಡವ ಸಮುದಾಯದ ಮೊದಲ ನಟಿ ನಾನೇ ಎಂದು ಸಂದರ್ಶನ ಒಂದರಲ್ಲಿ ನಟಿ ರಶ್ಮಿಕ ಮಂದಣ್ಣ ಹೇಳಿಕೆ ನೀಡುವುದರ ಮೂಲಕ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.


ಹಲವು ಯಶಸ್ವಿ ಚಿತ್ರಗಳ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದು, ಕೊಡವ ಸಮುದಾಯದಿಂದ ಇದುವರೆಗೂ ಚಿತ್ರರಂಗಕ್ಕೆ ಯಾರು ಬಂದಿಲ್ಲ. ಕೊಡುವ ಸಮುದಾಯದ ಮೊದಲ ನಟಿ ನಾನೇ ಬರ್ಕದತ್ ನಡೆಸಿದ ಸಂದರ್ಶನದಲ್ಲಿ ನಟಿ ರಶ್ಮಿಕ ಮಂದಣ್ಣ ಈ ಹೇಳಿಕೆ ನೀಡಿದ್ದಾರೆ.


ಚಿತ್ರರಂಗದಲ್ಲಿ ಈಗಾಗಲೇ ಕೊಡವ ಸಮುದಾಯದ ಹಲವಾರು ನಟಿಯರು ತಮದಮದೇ ಆದ ಛಾಪು ಮೂಡಿಸಿದ್ದಾರೆ. ಅದರಲ್ಲಿ ನಟಿ ಪ್ರೇಮಾ, ನಿಧಿ ಸುಬ್ಬಯ್ಯ ಬಹುಭಾಷೆ ಚಿತ್ರಗಳಲ್ಲೂ ನಟಿಸಿದ್ದಾರೆ, ಹರ್ಷಿಕಾ ಪೂಣಚ್ಚ, ಶುಭ್ರಾ ಅಯ್ಯಪ್ಪ ಸೇರಿದಂತೆ ಹಲವು ನಟಿಯರು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಇದ್ದಾರೆ ಸಕ್ರಿಯರಾಗಿದ್ದು, ಖ್ಯಾತಿ ಪಡೆದಿದ್ದಾರೆ.


ಇದೀಗ ನಟಿ ರಶ್ಮಿಕ ಮಂದಣ್ಣ ನಾನೇ ಕೊಡುವ ಸಮುದಾಯದ ಮೊದಲ ನಟಿ ಎಂದು ಹೇಳಿಕೆ ನೀಡುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.


ಸಂದರ್ಶನ ಬರ್ಖದತ್ ಸಂದರ್ಶನದಳ್ಳಿ ನಿಮಗೆ ಗೊತ್ತಾ ಕೂಡವ ಸಮುದಾಯದಿಂದ ಇದುವರೆಗೂ ಯಾರೂ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿಲ್ಲ ನನ್ನ ಯೋಚನೆ ಪ್ರಕಾರ ನಾನೇ ಮೊದಲ ಬಾರಿಗೆ ಇಡೀ ಸಮುದಾಯದಿಂದ ಚಲನಚಿತ್ರರಂಗ ಪ್ರವೇಶಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.