
ಬೀದರ್: ಮಾ.9:ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೀದರ್ ಜಿಲ್ಲೆಯ ಅಷ್ಟೂರ ಗ್ರಾಮದಲ್ಲಿ ಹ್ಯಾಪಿನೆಸ್ ತಂಡದ ವತಿಯಿಂದ ಗ್ರಾಮದ ಹಿರಿಯ ಮಹಿಳೆಯರನ್ನು ಶಾಲು, ಪುಷ್ಪ ಹಾಗೂ ಹಣ್ಣು ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಂಡದ ಹಿರಿಯ ಸದಸ್ಯರಾದ ಅಶೋಕಕುಮಾರ್ ಕಾರಂಜಿ ಅವರು, ಮಹಿಳೆಯರು ಸಮಾಜದ ಶಕ್ತಿಯ ಸಂಕೇತವಾಗಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡುತ್ತಾ ಸಮಾಜದಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಮಹಿಳೆಯರ ಸಾಧನೆಗಳನ್ನು ಸ್ಮರಿಸಲು, ಲಿಂಗ ಪಕ್ಷಪಾತದ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಸಮಾನತೆಗಾಗಿ ಕ್ರಮ ತೆಗೆದುಕೊಳ್ಳಲು ಈ ದಿನವನ್ನು ಆಚರಿಸಲಾಗುತ್ತದೆ. ಮಹಿಳೆಯರು ತಮ್ಮ ಎಲ್ಲಾ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗಾಗಿ ಗುರುತಿಸಲ್ಪಡುವ ಮತ್ತು ಪ್ರಶಂಸಿಸಲ್ಪಡುವ ದಿನವಾಗಿದೆ.
ಅಂತರಾಷ್ಟ್ರೀಯ ಮಹಿಳಾ ದಿನವು ಮಹಿಳೆಯರು ತಮ್ಮ ಜೀವನವನ್ನು ಮತ್ತು ಅವರ ಸುತ್ತಲಿನ ಇತರರ ಜೀವನವನ್ನು ಕಾಪಾಡಿಕೊಳ್ಳಲು ಅವರ ಎಲ್ಲಾ ಶ್ರಮ ಮತ್ತು ಪ್ರಯತ್ನಗಳಿಗೆ ಮೆಚ್ಚುಗೆಯನ್ನು ಪಡೆಯುವ ದಿನವಾಗಿದೆ. ನಿಮ್ಮ ಜೀವನದಲ್ಲಿ ಮಹಿಳೆಯರನ್ನು ನೀವು ಎಷ್ಟು ಕಾಳಜಿ ವಹಿಸುತ್ತೀರಿ ಮತ್ತು ಅವರನ್ನು ಪ್ರೀತಿಸುತ್ತೀರಿ ಎಂಬುದನ್ನು ತೋರಿಸಲು ಇದು ಒಂದು ದಿನವಾಗಿದೆ. ಅದರಂತೆ ಅನೇಕ ವೀರ ಮಹಿಳೆಯರು ಸಮಾಜದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಅವರಂತೆಯೇ ಮಹಿಳೆಯರ ಕೊಡುಗೆಯನ್ನು ಸ್ಮರಿಸಿ ಗೌರವಿಸಲು ಈ ದಿನದ್ದಲ್ಲಿ ಸಂತೋಷವಾಗುತದ್ದೆ.
ಮಹಿಳೆಯರು ತಾಯಿ, ಸಹೋದರಿ ಹಾಗೂ ಗೃಹಿಣಿಯಾಗಿ ಕುಟುಂಬ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದಾರೆ. ಸಮಾಜದಲ್ಲಿ ಮಹಿಳೆಯರ ಸ್ಥಾನಮಾನವನ್ನು ಗುರುತಿಸಲು ಹಾಗೂ ಅವರಿಗೆ ಗೌರವ ಸಲ್ಲಿಸಲು ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಡಾ. ಶುಭಾಷ್ ಕರ್ಪೂರ್, ಶಿವರಾಜ್ ಮಾಡ್ಗಿ, ಅಶೋಕ್ ಕುಮಾರ್ ಕಾರಂಜಿ, ಆನಂದ್ ಕುಮಾರ್, ರಾಜಕುಮಾರ, ಜಗದೇವಯ್ಯ ಸ್ವಾಮಿ, ಎನ್.ಎ. ಪಾಟೀಲ್, ಕುಶಾಲ್, ಬಸಯ್ಯಸ್ವಾಮಿ, ಸ್ಟಾಲಿನ್ ಹಾಗೂ ಗ್ರಾಮದ ಹಿರಿಯರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.


















