Home ಜಿಲ್ಲೆ ತುಮಕೂರು ರಾಜ್ಯಮಟ್ಟದ ನಡಿಗೆ ಸ್ಪರ್ಧೆಗೆ ಆಯ್ಕೆ

ರಾಜ್ಯಮಟ್ಟದ ನಡಿಗೆ ಸ್ಪರ್ಧೆಗೆ ಆಯ್ಕೆ

ಹುಳಿಯಾರು, ನ. ೨- ಹೋಬಳಿಯ ನಂದಿಹಳ್ಳಿ-ಗೂಬೆಹಳ್ಳಿ ಸರ್ಕಾರಿ ಪ್ರೌಢಶಾಲೆಯ ೯ ನೇ ತರಗತಿ ವಿದ್ಯಾರ್ಥಿನಿ ಎನ್.ಜಿ.ಗಗನ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ ವೇಗದ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.


೩ ದಿನಗಳ ಕಾಲ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಗಗನ ಭಾಗವಹಿಸಲಿದ್ದಾರೆ.


ವಿದ್ಯಾರ್ಥಿಯ ಈ ಸಾಧನಗೆ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನಯ್ಯ. ಬಿ.ಎಸ್, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ನಾಗರಾಜು, ದೈಹಿಕ ಶಿಕ್ಷಣ ಶಿಕ್ಷಕರಾದ ಸಿದ್ದಲಿಂಗಾರಾಧ್ಯ.ಟಿ.ಬಿ. ಸೇರಿದಂತೆ ಎಸ್‌ಡಿಎಂಸಿ ಸದಸ್ಯರು, ಶಾಲಾ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ರಾಜ್ಯ ಮಟ್ಟದ ಕ್ರೀಡೆಯಲ್ಲೂ ಜಯಗಳಿಸುವಂತೆ ಶುಭ ಹಾರೈಸಿದ್ದಾರೆ.