
ಬೆಂಗಳೂರು, ಏ. ೧೬- ನಾರಿ ಶಕ್ತಿ ವಂದನ ಮಸೂದೆ ಮಹಿಳೆಯರಿಗೆ ಸಮಾನತೆ ಅವಕಾಶ ಕೊಟ್ಟ ಪ್ರಧಾನಿ ನರೇಂದ್ರ ಮೋದಿರವರಿಗೆ ಬಿಜೆಪಿ ಯುವ ಮುಖಂಡ ಸತೀಶ್ ಉರಾಳ್ ಧನ್ಯವಾದ ಸಲ್ಲಿಸಿದ್ದಾರೆ.
ನಾರಿ ಶಕ್ತಿ ಎಂದರೆ ಸಹನೆ, ಸೃಜನಶೀಲತೆ ಮತ್ತು ಧೈರ್ಯದ ಸಂಗಮ. ಮನೆಯಿಂದ ಮಂಗಳ ಗ್ರಹದವರೆಗೆ ಹೆಜ್ಜೆ ಇಟ್ಟಿರುವ ಪ್ರತಿಯೊಬ್ಬ ಮಹಿಳೆಗೂ ಈ ದಿನದ ಗೌರವ ಸಲ್ಲಬೇಕು. ಅದ್ದರಿಂದ ಪ್ರಧಾನಿ ನರೇಂದ್ರಮೋದಿರವರು ನಾರಿ ಶಕ್ತಿ ವಂದನ ಅಧಿನಿಯಮ ಮಹಿಳಾ ಮಸೂದೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಶೇಕಡ ೩೩%ರಷ್ಟು ಮೀಸಲಾತಿ ಮಸೂದೆ ಪಾಸ್ ಮಾಡಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ರವರಿಗೆ ಮಹಿಳೆಯರ ಬಗ್ಗೆ ಅಪಾರ ಅಭಿಮಾನವಿತ್ತು ಅವರ ತಾಯಿಯಿಂದ ಸ್ಪೂರ್ತಿ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳನ್ನ ಗಂಡು ಮಕ್ಕಳಂತೆ ಬೆಳೆಸಿದರು. ಅಡುಗೆ ಮನೆಯಲ್ಲಿ ಮಾತ್ರ ನಾವು ಕೆಲಸ ಮಾಡಬೇಕು ಆನ್ನುವ ಕಾಲ ಹೋಯಿತು, ಪುರುಷರಷ್ಟೆ ಸರಿಸಮಾನವಾಗಿ ಕೆಲಸ ಮಾಡುವ ಸಮಯ ಬಂದಿದೆ.
ಮಹಿಳೆ ತಾಯಿಯಾಗಿ, ತಂಗಿ, ಅಕ್ಕ, ಪತ್ನಿಯಾಗಿ ಕುಟುಂಬದ ಜೊತೆಯಲ್ಲಿ ಸಮಾಜದ ಅಭಿವೃದ್ದಿಗೂ ಶ್ರಮಿಸುವಳು ಅಂತಹ ನಾರಿ ಕುಲಕ್ಕೆ ಶಕ್ತಿ ತುಂಬುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ರವರು ಮಾಡಿದ್ದಾರೆ ಎಂದರು.
ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವುದರಿಂದ ಭ್ರಷ್ಟಚಾರ ಕಡಿಮೆ , ಪ್ರಾಮಾಣಿಕ ಆಡಳಿತ ದೇಶದ ಅಭಿವೃದ್ದಿಯತ್ತ ಇನ್ನು ವೇಗವಾಗಿ ಸಾಗಲಿದೆ ಎಂದು ಸತೀಶ್ ಉರಾಳ್ ಅಭಿಪ್ರಾಯ ಪಟ್ಟಿದ್ದಾರೆ.
























