Home ಜಿಲ್ಲೆ ಕಲಬುರಗಿ ಉಸ್ತಾದ್ ಆಸ್ಪತ್ರೆಯಲ್ಲಿ “ಸುರಕ್ಷಿತ ಶಾಲೆ ಆಸ್ಪತ್ರೆ- ಅಗ್ನಿ ಮುಂಜಾಗ್ರತೆಗಾಗಿ ಒಂದಾಗಿ” ಸಪ್ತಾಹ

ಉಸ್ತಾದ್ ಆಸ್ಪತ್ರೆಯಲ್ಲಿ “ಸುರಕ್ಷಿತ ಶಾಲೆ ಆಸ್ಪತ್ರೆ- ಅಗ್ನಿ ಮುಂಜಾಗ್ರತೆಗಾಗಿ ಒಂದಾಗಿ” ಸಪ್ತಾಹ

ಕಲಬುರಗಿ,ಏ.15- ಅಗ್ನಿನಂದಕಗಳನ್ನು ಕ್ರಮಬದ್ಧವಾಗಿ ಬಳಸುವ ವಿಧಾನಗಳನ್ನು ಆಸ್ಪತ್ರೆಯ ಸಿಬ್ಬಂದಿಗಳಿಗೆ ಕಲಿಸಿಕೊಡುವುದು ಮತ್ತು ಅಗ್ನಿ ಅವಘಡದ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಮತ್ತು ಸುರಕ್ಷತ ಕ್ರಮಗಳÀ ಕುರಿತು ಜಾಗೃತಿ ಮೂಡಿಸಲು ಅಗ್ನಿಶಾಮಕ ಇಲಾಖೆ ಕಾಲಕಾಲಕ್ಕೆ ಕಾರ್ಯಕ್ರಮಗನ್ನು ಆಯೊಜಿಸಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಪ್ರವೀಣ ಎಂ.ಕೆ ಅವರು ಹೇಳಿದರು.
ಶಾಂತಿ ನಗರದ ಉಸ್ತಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಆಶ್ರಯದಲ್ಲಿ ಮಂಗಳವಾರ ಏ.14ರಂದು ಆಯೋಜಿಸಿದ್ದ ” ಸುರಕ್ಷತ ಶಾಲೆ, ಆಸ್ಪತ್ರೆ ಮತ್ತು ಅಗ್ನಿ ಸುರಕ್ಷತೆಯ ಅರಿವುಳ್ಳ ಸಮಾಜ- ಅಗ್ನಿ ಮುಂಜಾಗ್ರತೆಗಾಗಿ ಒಂದಾಗಿ” ಎಂಬ ಘೋಷವ್ಯಕ್ಯದ – ಜಾಗ್ರತಿ ಸಪ್ತಾಹ ಕಾರ್ಯಕ್ರಮಕ್ಕೆ ಅವರು, ಚಾಲನೆ ನೀಡಿ ಮಾತನಾಡಿದರು.
ಆಸ್ಪತ್ರೆಯ ಎಲ್ಲ ಮಹಡಿಗಳಲ್ಲಿ ಅಳವಡಿಸಲಾಗಿರುವ ಅಗ್ನಿನಂದಕಗಳನ್ನು ಯಾವರೀತಿಯಾಗಿ ಬಳಸಬೇಕು, ಅಗ್ನಿಅವಘಡದ ತುರ್ತು ಸಂದರ್ಭಗಳಲ್ಲಿ ಲಿಫ್ಟ್ ಬಳಸದೇ, ಒಳ ರೋಗಿಗಳನ್ನು ಸುರಕ್ಷತಾ ಸ್ಥಳಗಳಿಗೆ ಯಾವರೀತಿ ಸಾಗಿಸಬೇಕು, ಅಗ್ನಿದುರಂತದ ಸಂಧರ್ಭದಲ್ಲಿ ಮೆಟ್ಟಿಲುಗಳ ಸಹಾಯದಿಂದ ಕೆಳಮುಖವಾಗಿ ಹೊರಬರಬೇಕು, ಅಲ್ಲದೇ ಬೆಂಕಿಬೆಂಕಿ… ಬೆಂಕಿ ಎಂದು ಕೂಗುತ್ತ ಸಾಗುವುದು ಅತಿಮುಖ್ಯವಾಗಿರುತ್ತದೆ ಇದರಿಂದ ಉಳಿದವರು ಜಾಗೃತಗೊಂಡು ತಮ್ಮನ್ನು ಹಿಂಬಾಲಿಸುವ ಮೂಲಕ ಸುರಕ್ಷಿತ ಸ್ಥಳಕ್ಕೆ ತಲುಪಲು ಸಾದ್ಯವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ.ತನ್ವೀರ ಹುಸೇನ ಉಸ್ತಾದ ಅವರು, ಮಾತನಾಡಿ ಬಹಮಹಾಡಿ ಈ ಆಸ್ಪತ್ರೆಯಲ್ಲಿ ವೈಜ್ಞಾನಿಕ ತಂತ್ರಜ್ಞಾನದ ಅಗ್ನಿ ನಂದಕಗಳನ್ನು ಎನ್.ಎ.ಬಿ.ಎಚ್ ಸಂಸ್ಥೆಯ ಮಾರ್ಗ ಸೂಚಿಯಂತೆ ಮತ್ತು ಅಗ್ನಿ ಶಾಮಕ ಠಾಣೆಯ ಅಧಿಕಾರಿ ಪ್ರವೀಣ ಅವರ ಸಹಕಾರದಲ್ಲಿ ಅಳವಡಿಸಲಾಗಿದ್ದು, ಆಸ್ಪತ್ರೆಯ ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ಅಗ್ನಿ ನಂದಕ ಬಳಕೆಗಳ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಎ.ಬಿ.ಸಿ ಮತ್ತು ಡಿ ಶ್ರೇಣಿಯ ನಾಲ್ಕು ಬಣ್ಣಗಳ ಅಗ್ನಿನಂದಕಗಳನ್ನು ಪ್ರತ್ಯೇಕ್ಷಿಕೆಗಳ ಮೂಲಕ ಅದರ ಬಳಕೆಯ ಕುರಿತು ತರಬೇತಿಯನ್ನು ಸಿಬ್ಬಂದಿಗಳಿಗೆ ನೀಡಲಾಯಿತು. ಅಗ್ನಿದುರಂತದಲ್ಲಿ ನಡೆದುಕೊಂಡು ಹೊರ ಹೋಗಲು ಸಾಧ್ಯವಿಲ್ಲದ ಒಳರೋಗಿಳನ್ನು ಯಾವರೀತಿಯಾಗಿ ಅವರೆಲ್ಲರನ್ನು ಸುಕ್ಷಿತ ಸ್ಥಳಕ್ಕೆ ಸಾಗಿಸುವ ವಿವಿಧ ಬಗೆಯ ವಿಧಾನವನ್ನು ಸಹ ಪ್ರತ್ಯೇಕ್ಷಿಕೆಯ ಮೂಲಕ ಮಾಡಿ ತೋರಿಸಲಾಯಿತು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ನಿದೇರ್ಶಕಿ ಡಾ.ಸೈಯಿದಾ ಸುಬಿಯಾ ತನ್ವೀರ, ಡಾ.ಮಹ್ಮದ ಅಬ್ದುಲ ರಜಾಕ ಮಡಕಿ, ಡಾ.ಇರ್ಫಾನ ವಾರಿಸ್, ಡಾ.ಅನ್ನು ಚವ್ಹಾಣ, ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳಾದ ಮಹಾದೇವ, ಹೊನ್ನಪ್ಪ, ಮಿರಾಜ ಮತ್ತು ಆಸ್ಪತ್ರೆಯ ಸನಾ ಬೇಗಂ, ಫಯಾಜ್, ಸಾಬೇರ ಅಹ್ಮದ ಪಟೇಲ, ಯೋಗೇಶ ಮಾಲಿಪಾಟೀಲ, ಸಾದಿಯಾ, ಸೈಯಿದ ಅರ್ಪಾ, ಅಕ್ಸಾ, ಆದಿಲ್, ಉದಯ ಕುಲಕರ್ಣಿ, ರೇವಣಸಿದ್ದಪ್ಪ, ಸೈಫನ ಪಟೇಲ, ಇರ್ಫಾನ ಅಲಿ ಬೊನ್ಸರ್, ಅಶ್ವಿನಿ, ಅರ್ಚನಾ, ಪ್ರೇಮಾ, ಡಾ.ಆಯೆಶಾ, ಫರಹೀನ್, ರಖಿಬ್, ಕೋಮಲ, ಕವಿತಾ, ಸವಿತಾ, ತಂಜಿಲಾ, ಇರ್ಫಾನ, ಅಸದ, ಯಾಸೀನ, ಸಮೀನ, ಜಯಶ್ರೀ, ಅಂಬರೇಷ, ಕರೀಮ, ಯಾಸ್ಮೀನ ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳು, ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.