
ಕಲಬುರಗಿ,ಏ.೧೬-೨೦೨೫-೨೬ನೇ ಸಾಲಿನಲ್ಲಿ ಎಸ್. ಆರ್. ಎನ್. ಮೆಹತಾ ಸಿ.ಬಿ.ಎಸ್.ಇ ಶಾಲೆಯು ಶೇ.೧೦೦ ರಷ್ಟು ಫಲಿತಾಂಶ ಪಡೆದಿದ್ದು, ಪರಿಕ್ಷೆಗೆ ಕುಳಿತ ೧೧೯ ಮಕ್ಕಳಲ್ಲಿ ೧೧೯ ಮಕ್ಕಳು ತೇರ್ಗಡೆಯಾಗಿದ್ದಾರೆ. ಅದರಲ್ಲಿ ಶ್ರೇಯಾ ೪೯೨/೫೦೦(೯೮.೪%) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ,
ಮತ್ತು ತನ್ಮಯ್ ವಿರೇಶ್ ಕಸಬೇಗೌಡರ್ ೪೮೯/೫೦೦(೯೭.೮%) ಅಂಕಗನ್ನು ಪಡೆದು ದ್ವೀತಿಯ ಸ್ಥಾನ ಪಡೆದಿದ್ದಾನೆ.
೯೫% ಕ್ಕಿಂತ ಮೇಲ್ಪಟ್ಟ ಫಲಿತಾಂಶ ಪಡೆದ ವಿದ್ಯಾರ್ಥಿಗಳು-೪, ೯೦% ಕ್ಕಿಂತ ಮೇಲ್ಪಟ್ಟ ಫಲಿತಾಂಶ ಪಡೆದ ವಿದ್ಯಾರ್ಥಿಗಳು-೧೪, ೮೫% ದಿಂದ ೯೦% ರವರೆಗೆ ಫಲಿತಾಂಶ ಪಡೆದ ವಿದ್ಯಾರ್ಥಿಗಳು- ೨೫, ೭೫% ದಿಂದ ೮೫% ರವರೆಗೆ ಫಲಿತಾಂಶ ಪಡೆದ ವಿದ್ಯಾರ್ಥಿಗಳು-೨೮, ಪ್ರಥಮ ಶ್ರೇಣಿ – ೪೨, ದ್ವಿತಿಯ ಶ್ರೇಣಿ -೦೬ ಪಡೆದಿದ್ದು, ೭೧ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದಾರೆ.
ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಶೇ.೯೮.೪, ತನ್ಮಯ ವಿರೇಶ ಕಸಬೇಗೌಡರ್ ಶೇ.೯೭.೮, ನಿಸರ್ಗ ಶೇ.೯೬.೪, ವೇದಾಸ್ ಕುಲಕರ್ಣಿ ಶೇ.೯೬.೪, ಅಲೋಕ ಪಾಟೀಲ ಶೇ.೯೪.೨, ಶ್ವೇತಾ ಶೇ.೯೪.೨, ಶಿವಕುಮಾರ ಶೇ.೯೩.೪, ಸಾನಿಕ ಜಾಜಿ ಶೇ.೯೩.೨, ಖುಷಿ ಐನಾಪೂರ ಶೇ.೯೨.೪, ರುಚಿ ಶೇ.೯೨.೪, ಸೃಜನ್ ಹುಡಗಿ ಶೇ.೯೨.೪, ಪ್ರಣವ್ಸಿಂಗ್ ಶೇ.೯೨.೨, ಶ್ರೀನಿಧಿ ಆರ್.ಹೆಡ್ಡಾ ಶೇ.೯೧.೮, ಆಕಾಂಕ್ಷಾ ಶೇ.೯೧, ಅಲೀನಾ ನುರಿನ್ ಶೇ.೯೦.೮, ರಚನಾ ಶೇ.೯೦.೮, ಲಕ್ಷಿö್ಮÃ ಶೇ.೯೦.೬ ಮತ್ತು ಸಂಜನಾ ಪಾರಾ ಶೇ.೯೦.೬ ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.






















