
ಮಾಲೂರು: ದ್ವಿಚಕ್ರವಾಹನ ಹಾಗೂ ಹಸುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನದ ಸವಾರ ಸೇರಿದಂತೆ ಹಿಂಬದಿ ಸವಾರ ಹಾಗೂ ಕ್ಯಾಂಟರ್‌ನಲ್ಲಿದ್ದ ೨ಸೀಮೆ ಹಸುಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಮಾಲೂರು – ತೊರ್ನಹಳ್ಳಿ ರಸ್ತೆಯ ಸೀತನಾಯಕನಹಳ್ಳಿ ಗೇಟ್ ಬಳಿ ನಡೆದಿದೆ.
ಮೃತರನ್ನು ಮೋಟಪ್ಪ ೬೫ ಅಬ್ಬೇನಹಳ್ಳಿ, ಮಾಳಪ್ಪ ೬೦, ನಾಗೊಂಡಹಳ್ಳಿ ಎಂದು ಗುರುತಿಸಲಾಗಿದೆ.
ಘಟನೆ ವಿವರ ದ್ವಿಚಕ್ರವಾಹನದಲ್ಲಿ ಅಬ್ಬೇನಹಳ್ಳಿ ಮೋಟಪ್ಪ ಹಾಗೂ ನಾಗೊಂಡಹಳ್ಳಿ ಮಾಳಪ್ಪ ಅವರು ಮಾಲೂರಿನಿಂದತೋರ್ನಹಳ್ಳಿಗೆ ಹೋಗುತ್ತಿದ್ದ ವೇಳೆ ಸೀತನಾಯಕನಹಳ್ಳಿ ಗೇಟ್ ಬಳಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಸಂತೆಯಿಂದ ಹಸುಗಳನ್ನು ತಮಿಳುನಾಡಿನ ಸೇಲಂಗೆ ೧೦ ಹಸುಗಳನ್ನು ತುಂಬಿಕೊಂಡು ಬರುತ್ತಿದ್ದ ಕ್ಯಾಂಟರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಹಾಗೂ ಕ್ಯಾಂಟರ್‌ನಲ್ಲಿ ತುಂಬಿದ್ದ ೧೦ ಹಸುಗಳ ಪೈಕಿ ೨ ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ. ಸ್ಥಳಕ್ಕೆ ನಗರದ ಪೊಲೀಸ್ ಇನ್ಸ್ಪೆಕ್ಟರ್ ರಾಮಪ್ಪಗುತ್ತೇರ, ಎಎಸ್‌ಐಗಳಾದ ನಾಗರಾಜ್, ರೇಣುಪ್ರಸಾದ್,ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


























