Home ಜಿಲ್ಲೆ ಬೆಂಗಳೂರು ಕೋರಮಂಗಲದಲ್ಲಿ ಆರ್ ಎನ್ ಆರ್ ನಾಲ್ಕನೇ ಶಾಖೆ ಆರಂಭ

ಕೋರಮಂಗಲದಲ್ಲಿ ಆರ್ ಎನ್ ಆರ್ ನಾಲ್ಕನೇ ಶಾಖೆ ಆರಂಭ

ಬೆಂಗಳೂರು,ಅ.೩೧- ತನ್ನ ಅಪ್ಪಟ ‘ನಾಟಿ ಶೈಲಿ’ಯ ಅಡುಗೆಗೆ ಹೆಸರುವಾಸಿಯಾಗಿರುವ ಆರ್ ಎನ್ ಆರ್ ತನ್ನ ನಾಲ್ಕನೇ ಶಾಖೆಯನ್ನು ಕೋರಮಂಗಲದ ೬ನೇ ಬ್ಲಾಕ್ ನಲ್ಲಿ ತೆರೆದಿದೆ, ಈ ನೂತನ ಶಾಖೆಯನ್ನು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹಾಗೂ ಪ್ರಸಿದ್ಧ ಗಾಯಕ ವಿಜಯ್ ಪ್ರಕಾಶ್ ಉದ್ಘಾಟಿಸಿದರು.

ಉದ್ಘಾಟನೆ ಬಳಿಕ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ರವರು“ಆರ್ ಎನ್ ಆರ್ ತನ್ನ ವಿಶಿಷ್ಟ ರುಚಿ, ಶುಚಿತ್ವ ಮತ್ತು ಗ್ರಾಹಕ ಸೇವೆಯಿಂದ ಹೆಸರುವಾಸಿಯಾಗಿದೆ. ಸಾಕಷ್ಟು ನಾನ್ ವೆಜ್ ರೆಸ್ಟೋರೆಂಟ್ ಗಳಿವೆ. ಆದರೆ, ಇದರಲ್ಲಿ ಈ ರೆಸ್ಟೋರೆಂಟ್ ವಿಶಿಷ್ಟವಾಗಿದೆ. ಇಲ್ಲಿ ನಾಟಿ ಶೈಲಿಯ ಖಾದ್ಯಗಳು ಸಾಕಷ್ಟು ಫೆಮೇಸ್. ನಾನು ಹೆಚ್ಚಾಗಿ ಇದೇ ರೆಸ್ಟೋರೆಂಟ್ ಅನ್ನು ಆಯ್ಕೆ ಮಾಡುತ್ತೇನೆ. ಇಲ್ಲಿ ರುಚಿ ಅಷ್ಟೇ ಅಲ್ಲ, ಶುಚಿ, ಇಲ್ಲಿ ಗ್ರಾಹಕರನ್ನು ಕಾಣುವ ಬಗೆ ಎಲ್ಲರಿಗೂ ಇಷ್ಟವಾಗುತ್ತದೆ. ಮತ್ತಷ್ಟು ಶಾಖೆಗಳನ್ನು ತೆರೆಯಲಿ” ಎಂದು ಶುಭ ಹಾರೈಸಿದರು.


ಗಾಯಕ ವಿಜಯ್ ಪ್ರಕಾಶ್ ಮಾತನಾಡಿ, ಇಂದು ರೆಸ್ಟೋರೆಂಟ್‌ಗೆ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಹೊಸ ಶಾಖೆಗಳನ್ನು ಆರಂಭಿಸುವ ಧಾವಂತದಲ್ಲಿ ಅನೇಕರು ಆಹಾರದ ಗುಣಮಟ್ಟವನ್ನು ಕಡೆಗಣಿಸುವ ಸಾಧ್ಯತೆಯಿದೆ. ಆದರೆ, ಆರ್ ಎನ್ ಆರ್ ಗ್ರಾಹಕರ ವಿಶ್ವಾಸವನ್ನು ಒಂದೇ ದಿನದಲ್ಲಿ ಗಳಿಸಿಲ್ಲ; ಏಳು ದಶಕಗಳಿಗೂ ಹೆಚ್ಚು ಕಾಲ ಅದನ್ನು ಕಾಪಾಡಿಕೊಂಡು ಬಂದಿದೆ. ‘ನಾಟಿ ಶೈಲಿ’ಯ ಆಹಾರವನ್ನು ಅನೇಕರು ಇಷ್ಟಪಡುತ್ತಾರೆ. ಇಲ್ಲಿ ಮಾಂಸಾಹಾರಿಗಳಿಗಷ್ಟೇ ಅಲ್ಲ, ಸಸ್ಯಾಹಾರಿಗಳಿಗೂ ಹೆಚ್ಚಿನ ಆಯ್ಕೆಗಳಿವೆ. ಹೀಗಾಗಿ ಎಲ್ಲಾ ರೀತಿಯ ಗ್ರಾಹಕರು ಆಗಮಿಸಬಹುದು. ಆರ್ ಎನ್ ಆರ್ ತಂಡಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಇನ್ನೂ ಹೆಚ್ಚಿನ ಗ್ರಾಹಕರು ಇಲ್ಲಿಗೆ ಬಂದು ನಮ್ಮ ಸಾಂಪ್ರದಾಯಿಕ ಆಹಾರದ ರುಚಿಯನ್ನು ಸವಿಯಲಿ ಎಂದು ಆಶಿಸುತ್ತೇನೆ,” ಎಂದು ಹೇಳಿದರು.

೨೦೨೦ರಲ್ಲಿ ಕ್ಲೌಡ್ ಕಿಚನ್ ಕಾರ್ಯಾಚರಣೆಯನ್ನು ಆರಂಭಿಸಿದ್ದ ಸಂಸ್ಥೆಯು, ನಂತರ ತನ್ನ ಪ್ರಸಿದ್ಧ ‘ಆರ್ ಎನ್ ಆರ್ ಬಿರಿಯಾನಿ’ ಬ್ರ್ಯಾಂಡ್ನಡಿ ಪೂರ್ಣ ಪ್ರಮಾಣದ ರೆಸ್ಟೋರೆಂಟ್ ಮಾದರಿಗೂ ವಿಸ್ತರಿಸಿತು. ೨೦೨೧ರಲ್ಲಿ ಜಯನಗರದಲ್ಲಿ ಮೊದಲ ಶಾಖೆಯನ್ನು ಆರಂಭಿಸಿದ ಆರ್ ಎನ್ ಆರ್, ೨೦೨೩ರಲ್ಲಿ ಆರ್.ಟಿ. ನಗರದಲ್ಲಿ ಎರಡನೇ ಶಾಖೆ ಹಾಗೂ ಸಹಕಾರ ನಗರದಲ್ಲಿ ಮೂರನೇ ಶಾಖೆಯನ್ನು ಆರಂಬಿಸಲಾಯಿತ್ತು.

ಆರ್ ಎನ್ ಆರ್ ನ ಜನಪ್ರಿಯ ಖಾದ್ಯಗಳು
ಆರ್ ಎನ್ ಆರ್ ತನ್ನ ವಿಶೇಷ ‘ದೊನ್ನೆ ಬಿರಿಯಾನಿ’ಗೆ ಹೆಸರುವಾಸಿಯಾಗಿದೆ. ಇದರೊಂದಿಗೆ ನಾಟಿ ಕೊತ್ತಂಬರಿ ಸೂಪ್, ಮಟನ್ ಬೋನ್ ಸೂಪ್, ಡ್ರಮ್ಸ್ಟಿಕ್ ಚಿಲ್ಲಿ, ಮಟನ್ ನಲ್ಲಿ, ನಾಟಿ ಕೋಳಿ ರೋಸ್ಟ್, ನಾಟಿ ಶೈಲಿಯ ಚಿಲ್ಲಿ ಚಿಕನ್, ಆರ್ ಎನ್ ಆರ್ ಸ್ಪೆಷಲ್ ಬೊಂಬಾಟ್ ಚಿಕನ್ ಲೆಗ್ ಚಿಲ್ಲಿ, ದೊನ್ನೆ ವೆಜ್ ಬಿರಿಯಾನಿ, ದೊನ್ನೆ ಚಿಕನ್ ಬೋನ್ ಲೆಸ್ ಬಿರಿಯಾನಿ, ದೊನ್ನೆ ಮಟನ್ ಬಿರಿಯಾನಿ, ಮಟನ್ ಚಾಪ್ಸ್ ಕರಿ, ನಾಟಿ ಕೋಳಿ ಸಾರು, ಸೀತಾಫಲ ಪುಡ್ಡಿಂಗ್, ಎಳನೀರು ಪಾಯಸ ಹಾಗೂ ಡಬಲ್ ಕಾ ಮೀಠಾ ಸೇರಿದಂತೆ ಹಲವು ವಿಶಿಷ್ಟ ಖಾದ್ಯಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ.

ಈ ವೇಳೆ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷೆ ಸೌಮ್ಯ ರೆಡ್ಡಿ, ಸಂಗೀತಾ ಮೊಬೈಲ್‌ನ ವ್ಯವಸ್ಥಾಪಕ ನಿರ್ದೇಶಕ ಸುಭಾಷ್ ಚಂದ್ರ, ನಂದನ ಗ್ರೂಪ್ ಆಫ್ ರೆಸ್ಟೋರೆಂಟ್‌ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆರ್. ರವಿಚಂದರ್, ಅಡ್ಯಾರ್ ಆನಂದ ಭವನ್ ಸ್ವೀಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ವಿಷ್ಣು ಶಂಕರ್, ಆಕ್ಸ್ಫರ್ಡ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷರಾದ ಎಸ್.ಎನ್.ವಿ.ಎಲ್. ನರಸಿಂಹ ರಾಜು, ಬಿಬಿಎಚ್‌ಎ ಅಧ್ಯಕ್ಷರಾದ ಪಿ.ಸಿ.ರಾವ್, ಕೆ ಎಸ್‌ಎಚ್‌ಎ ಅಧ್ಯಕ್ಷ ಮಧುಕರ್ ಎಂ.ಶೆಟ್ಟಿ ಇತರರು ಭಾಗವಹಿಸಿದ್ದರು.