Home ಜಿಲ್ಲೆ ಸಂಸ್ಕಾರ, ಸಂಸ್ಕೃತಿ ಪರಿಪಾಲಿಸಿ: ಡೋಣಗಾಂವಶ್ರೀ

ಸಂಸ್ಕಾರ, ಸಂಸ್ಕೃತಿ ಪರಿಪಾಲಿಸಿ: ಡೋಣಗಾಂವಶ್ರೀ

ಕಮಲನಗರ :ಮಾ.೨: ಸಂಸ್ಕಾರ, ಸಂಸ್ಸೃತಿಗಳ ಪರಿಪಾಲನೆಯಿಂದ ಮಾನವ ಜೀವನಕ್ಕೆ ಅಮೂಲ್ಯ ಬೆಲೆ ದೊರಕುತ್ತದೆ ಎಂದು ಡೋಣಗಾಂವ್(ಎA)-ಉದಗೀರ ಹಾವಗಿಸ್ವಾಮಿ ಮಠದ ಪೀಠಾಧಿಪತಿ ಡಾ| ಶಂಭುಲಿAಗ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಡೋಣಗಾಂವ(ಎA) ಗ್ರಾಮದ ಹಾವಗೀಸ್ವಾಮಿ ಮಠದಲ್ಲಿ ರವಿವಾರ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಸಮಾರಂಭವನ್ನು ಅವರು ರೇಣುಕಾಚಾರ್ಯರ ಫೋಟೊಗೆ ಪೂಜೆ ಸಲ್ಲಿಸಿದ ನಂತರ ಅವರು ಉದ್ಘಾಟಿಸಿ ಮಾತನಾಡಿದರು.
ಜಗದ ಜನರ ಮನದ ಅಜ್ಞಾನ ಕಳೆದು ಜ್ಞಾನದ ಬುತ್ತಿಯನ್ನಿತ್ತು. ಉದ್ಧರಿಸಿದ ಶ್ರೇಯಸ್ಸು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಶಿವಜ್ಞಾನದ ಅರಿವು ಮತ್ತು ಆಚರಣೆಯಿಂದ ಬದುಕಿನಲ್ಲಿ ಶಾಂತಿ ಸಮಾಧಾನ ದೊರಕುತ್ತವೆ. ಅಸ್ತ್ರಶೋದ್ಧಾರ ಮತ್ತು ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ‍್ಯ ತಂದು ಕೊಟ್ಟ ಮೊದಲ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಹೀಗಾಗಿ, ಜಗದ್ಗುರು ರೇಣುಕಾಚಾರ್ಯರ ತತ್ವಾದರ್ಶಗಳು, ಸಂಸ್ಕಾರ, ಸಂಸ್ಕೃತಿಗಳು ನಮ್ಮೆಲ್ಲರ ಭವ್ಯ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದೆ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬುದನ್ನು ಎಲ್ಲರೂ ಅರಿಯಬೇಕು ಎಂದರು.
ಮಠದ ಉಮಾಕಾಂತ ದೇಶಿಕೇಂದ್ರ ಸ್ವಾಮಿಜಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಅಪ್ಪಾಸಾಬ ದೇಶಮುಖ, ಸಿದ್ದು ಕೌಟಗೆ, ವಿಶಾಲ ದೇಶಮುಖ, ಶ್ರೀನಿವಾಸ ಅಪ್ಪಾಸಾಬ, ಶೈಲೇಶ ಪೇನೆ, ಚನ್ನಯ್ಯ ಹಿರೇಮಠ ಸೇರಿದಂತೆ ಮಹಿಳೆಯರು, ಮಕ್ಕಳು ಮತ್ತು ಪ್ರಮುಖರು ಇದ್ದರು.