
ಬೀದರ್:ಮಾ.1: ನಗರದ ಹೊರ ವಲಯದಲ್ಲಿರುವ ಬೀದರ್-ಭಾಲ್ಕಿ ರಸ್ತೆಯಲ್ಲಿರುವ ಜಗಸ್ಗಿರು ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಭಾನುವಾರ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಜರುಗಿತು.
ಬೆಳಿಗ್ಗೆ 7 ಗಂಟೆಗೆ ಜಗದ್ಗುರು ರೇಣುಕಾಷಾರ್ಯರ ರುದ್ರಾಭಿಷಕ ಕಾರ್ಯಕ್ರಮ ಜರುಗಿತು.
ಯರನಳ್ಳಿಯ ವೇದಮೂರ್ತಿ ಶಿವಕುಮಾರ ಸ್ವಾಮಿ ಅವರು ರುದ್ರಾಭಿಷಕ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀ ರೇಣುಕ ಮಹೇಶ್ವರ ಪತ್ತಿನ ಸೌಹಾರ್ದಸಹಕಾರಿ ನಿಯಮಿತದ ಉಪಾಧ್ಯಕ್ಷ ಶ್ರೀಕಾಂತ ಸ್ವಾಮಿ ಸೋಲಪುರ ಸಹಸ್ರ ನಾಮಾವಳಿ ಪಠಿಸಿದರು. ದಾಕೋಳಗಿ ಶ್ರೀ ಮಠದ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಈ ಸಂದರ್ಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ಜಾತಿ ಮತ ಪಂಥ ಭೇದ ಎಲ್ಲವನ್ನು ಮರೆತು ನಿಂತು ಎಲ್ಲ ಧರ್ಮೀಯರಿಗೆ ಆದಿ ಗುರುವಾಗಿರುವರು ಎಂದರು.
ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಶ್ರಮದ ಸಂಚಾಲಕರಾದ ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು..
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು 18 ಪಂಗಡಗಳಿಗೆ ಜಗದ್ಗುರು ವಾಗಿದ್ದು ಮಾನವ ಧರ್ಮ ಒಂದೇ ಎಂದು ಸಾರುವ ಮೂಲಕ ಎಲ್ಲಾ ಧರ್ಮೀಯರಿಗೆ ಮಂತ್ರೋಪದೇಶ ಪಠಿಸಲು ಅವಕಾಶ ನೀಡಿದವರು ಜಗದ್ಗುರು ರೇಣುಕಾಚಾರ್ಯರು ಎಂದು ಪ್ರತಿಪಾದಿಸಿದರು.
ಸಮಾರಂಭದಲ್ಲಿ ಶ್ರೀ ರೇಣುಕ ಮಹೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಮಹೇಶ್ವರ ಸ್ವಾಮಿ, ನಿರ್ದೇಶಕರಾದ ಕಾರ್ತಿಕ ಸ್ವಾಮಿ ಮಠಪತಿ ಹಿರಿಯ ಪತ್ರಕರ್ತ ಶಿವಕುಮಾರ ಸ್ವಾಮಿ, ಪ್ರಮುಖರಾದ ಸಂಗಮೇಶ ಬಿರಾದಾರ್ ನಾಗಯ್ಯ ಸ್ವಾಮಿ ಎಕಲರ ಸೇರಿದಂತೆ ಹಲವರು ಉಪಸ್ಥಿತರಿದ್ದರು.























