
ಬೀದರ್:ಮಾ.1 : ನಗರದ ಹೊರಗಡೆ ಇರುವ ಚಿಕಪೇಟೆ ಏರಿಯಾದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಒಂದು ಸಾರಿರುವ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲಾಯಿತು.
.ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜ ಸಲ್ಲಿಸಿ ಪುಷ್ಪಾರ್ಚನೆಗೈದು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಗದ್ಗುರು ರೇಣುಕಾಚಾರ್ಯರು ಕೇವಲ ವೀರಶೈವ ಧರ್ಮಕ್ಕೆ ಉದ್ದರಿಸದೆ, ಎಲ್ಲಾ 18 ಪಂಗಡಗಳಿಗೂ ಸಹ ಧರ್ಮೋಪದೇಶ ಮಾಡಿದ ಮಹಾನ ಸಂತರಾಗಿದ್ದರು ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾAತ ಪೂಜಾರಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ತಮ್ಮ ಧರ್ಮೋಪದೇಶದ ಮೂಲಕ ಅಗಸ್ತ್ಯ ಮುನಿಗರ ಲಿಂಗ ದೀಕ್ಷೆ ನೀಡಿ, ಇಡೀ ದೇಶಾದ್ಯಂತ ಸನಾತನ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಪ್ರೇರೇಪಿಸಿದರು ಎಂದರು.
ಮೆಹೇಕರ್ಲ, ತಡೋಲಾ, ಹಾಗೂ ದೊಣಗಾಪುರ ಶ್ರೀ ಮಠಗಳ ಪೂಜ್ಯ ರಾಜೇಶ್ವರ ಶಿವಾಚಾರ್ಯರು ಹಾಗೂ ದಾಕುಲಗಿಯ ಪೂಜ್ಯ ಚನ್ನಬಸವಾನಂದ ಶಿವಾಚಾರ್ಯರು ಸಾನಿಧ್ಯ ವಹಿಸಿದರು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಅಂಬರೀಶ ಸ್ವಾಮಿ, ಸಮಾಜದ ಗಣ್ಯರಾದ ಮಹಾಂತಯ್ಯ ಸ್ವಾಮಿ, ಗಂಗಾಧರ ಶಾಸ್ತ್ರಿ, ಮಹೇಶ್ವರ ಸ್ವಾಮಿ, ಶ್ರೀಕಾಂತ ಸ್ವಾಮಿ ಸೋಲಪುರ, ಕಾರ್ತಿಕ ಮಠಪತಿ, ಶಿವಕುಮಾರ ಸ್ವಾಮಿ, ಬಿಜೆಪಿ ಮುಖಂಡ ನಾಗನಾಥ ಕರ್ಪುರ, ಸಾಯಿನಾಥ ಶಾಸ್ತ್ರಿ ಸೇರಿದಂತೆ ಇನ್ನೂ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.























