Home ಜಿಲ್ಲೆ ಬೆಂಗಳೂರು ದಾದಿಯರು ಸಲ್ಲಿಸುವ ನಿಸ್ವಾರ್ಥ ಸೇವೆ, ತ್ಯಾಗ ಗುರುತಿಸಿ

ದಾದಿಯರು ಸಲ್ಲಿಸುವ ನಿಸ್ವಾರ್ಥ ಸೇವೆ, ತ್ಯಾಗ ಗುರುತಿಸಿ

ಮಾಲೂರು ಮೇ ೧೨ ಪ್ರತಿಯೊಬ್ಬ ನಾಗರಿಕರು ಆರೋಗ್ಯ ಕ್ಷೇತ್ರದಲ್ಲಿ ದಾದಿಯರು ಸಲ್ಲಿಸುವ ನಿಸ್ವಾರ್ಥ ಸೇವೆ, ತ್ಯಾಗ ಮತ್ತು ಕರುಣೆಯನ್ನು ಗುರುತಿಸಿ ಗೌರವಿಸುವಂತೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಹೇಳಿದರು


ಅವರು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು


ಪ್ರತಿ ವರ್ಷ ಮೇ ೧೨ ರಂದು, ಆಧುನಿಕ ನರ್ಸಿಂಗ್‌ನ ಸಂಸ್ಥಾಪಕ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಅಂಗವಾಗಿ ವಿಶ್ವ ದಾದಿಯರ ದಿನವನ್ನು ಆಚರಿಸಲಾಗುತ್ತದೆ ಆರೋಗ್ಯ ಕ್ಷೇತ್ರದಲ್ಲಿ ದಾದಿಯರು ಸಲ್ಲಿಸುವ ನಿಸ್ವಾರ್ಥ ಸೇವೆ, ತ್ಯಾಗ ಮತ್ತು ಕರುಣೆಯನ್ನು ಗುರುತಿಸಿ ಗೌರವಿಸುವ ದಿನವಾಗಿದೆ


“ನಮ್ಮ ದಾದಿಯರು. ನಮ್ಮ ಭವಿಷ್ಯ. ಸಬಲ ದಾದಿಯರು ಜೀವಗಳನ್ನು ಉಳಿಸುತ್ತಾರೆ” ದಾದಿಯರ ಕಾರ್ಯನಿರ್ವಹಣೆಗೆ ಸುರಕ್ಷಿತ ಪರಿಸರ, ನ್ಯಾಯಯುತ ವೇತನ ಮತ್ತು ವೃತ್ತಿಪರ ಗೌರವವನ್ನು ಖಚಿತಪಡಿಸಿಕೊಳ್ಳುವುದು.ದಾದಿಯರ ಮಹತ್ವ:ದಾದಿಯರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು.ರೋಗಿಗಳ ಆರೈಕೆ, ಚಿಕಿತ್ಸೆ ಮತ್ತು ಸಾಂತ್ವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.ಕ್ಯಾನ್ಸರ್, ಸಾಂಕ್ರಾಮಿಕ ರೋಗಗಳು ಕೋವಿಡ್ ಮತ್ತು ತುರ್ತು ಸಂದರ್ಭಗಳಲ್ಲಿ ಮುಂಚೂಣಿಯಲ್ಲಿ ನಿಂತು ಜೀವ ಉಳಿಸಿದರು ಆರೋಗ್ಯ ಸೇವೆಯ ಕಲ್ಪವೃಕ್ಷಗಳಾದ ದಾದಿಯರಿಗೆ, ರೋಗಿಗಳ ಪಾಲಿನ ಸಂಜೀವಿನಿಯಾದ ಅಕ್ಕಂದಿರ (ನರ್ಸ್) ಸೇವಾ ಮನೋಭಾವಕ್ಕೆ ನಾಗರಿಕರು ಚಿರಋಣಿಯಾಗಿರಬೇಕು


ನಮ್ಮ ದಾದಿಯರು, ನಮ್ಮ ಭವಿಷ್ಯ. ದಾದಿಯರ ದಿನಾಚರಣೆಯ ಶುಭಾಶಯಗಳು ” ಸಲ್ಲಿಸುವುದಾಗಿ ಹೇಳಿದ ಅವರು ಫ್ಲಾರೆನ್ಸ್ ನೈಟಿಂಗೇಲ್ ಅವರ ಸ್ಮರಣೆ:ಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರ ಸೇವೆ ಮಾಡಿ ’ಲೇಡಿ ಆಫ್ ಲ್ಯಾಂಪ್ (ದೀಪ ಹಿಡಿದ ಮಹಿಳೆ) ಎಂದು ಪ್ರಖ್ಯಾತರಾದ ನೈಟಿಂಗೇಲ್ ಅವರ ಸೇವೆಯನ್ನು ಈ ದಿನ ಸ್ಮರಿಸಲಾಗುತ್ತದೆ. ಎಂದರು


ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾದಿಯರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರ ಸೇವೆಯನ್ನು ಶ್ಲಾಘಿ ಸುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿದರು


ಈ ಸಂದರ್ಭದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳಾದ ಡಾ ರಾಮರಾಜೇಶ್ ಹರೀಶ್ ಮಧುಸೂದನ್ ವೆಂಕಟರೆಡ್ಡಿ ಸಂದೀಪ್ ಕೋರೆ ಕೃಪಾ ರಮ್ಯ ಆರ್‌ಬಿ ಎಸ್‌ಕೆ ಸಮಾಲೋಚಕಿ ಸುಮತಿ ದಾದಿಯರಾದ ರೂಪ ನಳಿನಿ ಮಮತಾ ಸೌಮ್ಯ ಸ್ವಪ್ನ ಶಿಲ್ಪ ಮಹೇಶ್ ಕಲಾ ವೆಂಕಟಲಕ್ಷ್ಮಿ ಶಿಲ್ಪ ಮಣಿ ಮೇಘವೇ ಲ್ಯಾಬ್ ಸಿಬ್ಬಂದಿ ರುಕ್ಮಿಣಿ ಅಂಬ್ರೀನ್ ರೂಪ ಲಕ್ಷ್ಮಿ ಇದ್ದರು.